ಅಂಬೇಡ್ಕರ್ ಸಂವಿಧಾನ ಮರೆತ ಭಾರತಕ್ಕೆ ಭವಿಷ್ಯವಿಲ್ಲ

KannadaprabhaNewsNetwork |  
Published : Apr 24, 2025, 12:01 AM IST
ಚಿತ್ರ 23ಬಿಡಿಆರ್51 | Kannada Prabha

ಸಾರಾಂಶ

ಅಂಬೇಡ್ಕರ್ ಹಾಗೂ ಸಂವಿಧಾನ ಮರೆತ ಭಾರತಕ್ಕೆ ಭವಿಷ್ಯವಿಲ್ಲ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.

ಕನ್ನಡಪ್ರಭ ವಾರ್ತೆ ಔರಾದ್

ಅಂಬೇಡ್ಕರ್ ಹಾಗೂ ಸಂವಿಧಾನ ಮರೆತ ಭಾರತಕ್ಕೆ ಭವಿಷ್ಯವಿಲ್ಲ ಎಂದು ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಅಪ್ಪಗೆರೆ ಸೋಮಶೇಖರ್ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಡಾ. ಬಿ.ಆರ್ ಅಂಬೇಡ್ಕರ್ 134ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, 75 ವರ್ಷಗಳು ಕಳೆದರೂ ಸಂವಿಧಾನ ಮತ್ತು ಅಂಬೇಡ್ಕರ್ ಬಗ್ಗೆ ಅನುಮಾನಗಳಿರುವುದು ವಿಪರ್ಯಾಸ ಎಂದರು.ಎಲ್ಲ ಜಾತಿ, ವರ್ಗ ಮತ್ತು ಧರ್ಮದ ಜನ ಅಂಬೇಡ್ಕರ್ ಮತ್ತು ಸಂವಿಧಾನದ ಋಣದ ಮಕ್ಕಳು ಎಂಬುದನ್ನು ಮರೆಯಕೂಡದು. ಪ್ರಸ್ತುತ ಅಂಬೇಡ್ಕರ್ ಕೇವಲ ದಲಿತರ ನಾಯಕ, ದಮನಿತರ ನಾಯಕ, ಅಸ್ಪ್ರಶ್ಯರ ನಾಯಕ ಎಂದು ನೋಡುತ್ತಿರುವುದು ದುರಂತವಾಗಿದೆ.ಸಂಸದ ಸಾಗರ ಖಂಡ್ರೆ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ನೀಡಿದ ಸಂವಿಧಾನದಿಂದ ನಮ್ಮೆಲ್ಲರಿಗೂ ಮೂಲಭೂತ ಹಕ್ಕುಗಳು ಸಿಕ್ಕಿವೆ. ಅನೇಕರಿಗೆ ನಮ್ಮ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಇಲ್ಲ ನಾವು ಸಂವಿಧಾನ ಓದಿದಾಗ ಮಾತ್ರವೇ ನಮಗೆ ಕಾನೂನು ಮತ್ತು ನಮ್ಮ ಹಕ್ಕುಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಅವರು ನೀಡಿದ ಸಂವಿಧಾನದಿಂದಲೇ ಅತ್ಯಂತ ಕಿರಿಯ ವಯಸ್ಸಿನವನಾದ ನಾನು ಸಂಸದನಾಗಲು ಸಾಧ್ಯವಾಗಿದೆ ಎಂದರು.ಈ ವೇಳೆ ಡಾ.ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಕೆ. ಪುಂಡಲೀಕರಾವ್, ನೌಕರ ಸಂಘದ ಅಧ್ಯಕ್ಷ ಪಂಡರಿ ಆಡೆ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಸುನೀಲ ಕಸ್ತೂರೆ ಅವರಿಗೆ ಗೌರವಿಸಲಾಯಿತು. ಅಲ್ಲದೇ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಉತ್ತಿರ್ಣರಾದ ಪ್ರತಿಭಾವಂತ ಮಕ್ಕಳಿಗೆ ಹಾಗೂ ವೈದ್ಯಕೀಯ, ಐಐಟಿ, ಜೆಇಇ ಶಿಕ್ಷಣ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಜರುಗಿತು. ಈ ಸಂದರ್ಭದಲ್ಲಿ ಭಂತೆ ಧಮ್ಮಾನಂದ, ಡಾ.ಭೀಮಸೇನ ಶಿಂಧೆ, ತಹಸೀಲ್ದಾರ ಮಹೇಶ ಪಾಟೀಲ, ಉತ್ಸವ ಸಮಿತಿ ಅಧ್ಯಕ್ಷ ಸುನೀಲಕುಮಾರ ದೇಶಮುಖ, ಮಾರುತಿ ಬೌದ್ಧೆ, ರಾಮಣ್ಣ ವಡೆಯರ, ಅಮರ ಜಾಧವ, ಖ್ಯಾತ ಗಾಯಕ ಅಜೇಯ ದೇಹಾಡೆ, ಝರೇಪ್ಪಾ ವರ್ಮಾ, ಸೂರ್ಯಕಾಂತ ಸಿಂಗೆ, ಚೇತನ ಕಪ್ಪೆಕೇರಿ, ಧನರಾಜ ಮುಸ್ತಾಪೂರೆ, ಶರಣಪ್ಪ ಪಾಟೀಲ, ಸೋಪಾನರಾವ ಡೋಂಗರೆ, ರಾಜಕುಮಾರ ಡೊಂಗರೆ, ಶಿವಕುಮಾರ ಕಾಂಬಳೆ, ಪ್ರಕಾಶ ಭಂಗಾರೆ, ರತ್ನದೀಪ ಕಸ್ತೂರೆ, ಸುನೀಲ ಮಿತ್ರಾ, ಲಕ್ಷಣ ತುರೆ, ತುಳಸಿರಾಮ ಬೇಂದ್ರೆ, ಚಂದ್ರಕಾಂತ ನಿರ್ಮಳೆ, ಆನಂದ ಕಾಂಬಳೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ