ನೆಲ ಜಲ ಭಾಷೆ ವಿಷಯದಲ್ಲಿ ಒಂದಾಗದಿದ್ದರೆ ಉಳಿಗಾಲವಿಲ್ಲ: ಸದ್ದಾಂ ನದಾಫ್

KannadaprabhaNewsNetwork |  
Published : Nov 16, 2026, 02:30 AM IST
ಕಾರ್ಯಕ್ರಮವನ್ನು ಸದ್ದಾಂ ನದಾಫ್ ಉದ್ಘಾಟಿಸಿದರು. | Kannada Prabha

ಸಾರಾಂಶ

ನೆಲ ಜಲ ಭಾಷೆಯ ವಿಷಯದಲ್ಲಿ ಧರ್ಮ ಜಾತಿ ಬಿಟ್ಟು ಒಟ್ಟಾಗದಿದ್ದರೆ ಉಳಿಗಾಲ ಇಲ್ಲ. ರಾಜಕಾರಣ ಬಿಟ್ಟು ಕನ್ನಡ ನಾಡಿನ ಸ್ವಾಭಿಮಾನ ಉಳಿಸಲು ಪಣ ತೋಡಬೇಕು.

ಯಲ್ಲಾಪುರ: ತಾಲೂಕಿನ ಕಿರವತ್ತಿ ಸಭಾಭವನದಲ್ಲಿ ಜಯಕರ್ನಾಟಕ ತಾಲೂಕು ಸಂಘಟನೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.ಜಯಕರ್ನಾಟಕ ಸಂಘಟನೆಯ ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಸದ್ದಾಂ ನದಾಫ್ ಉದ್ಘಾಟಿಸಿ ಮಾತನಾಡಿ, ನೆಲ ಜಲ ಭಾಷೆಯ ವಿಷಯದಲ್ಲಿ ಧರ್ಮ ಜಾತಿ ಬಿಟ್ಟು ಒಟ್ಟಾಗದಿದ್ದರೆ ಉಳಿಗಾಲ ಇಲ್ಲ. ರಾಜಕಾರಣ ಬಿಟ್ಟು ಕನ್ನಡ ನಾಡಿನ ಸ್ವಾಭಿಮಾನ ಉಳಿಸಲು ಪಣ ತೋಡಬೇಕು. ಮನುಷ್ಯತ್ವ ಇದ್ದವರು ಮಾತ್ರ ಒಗ್ಗಟ್ಟಾಗಿ ಕೆಲಸ‌ ಮಾಡುತ್ತಾರೆ. ಅಂತಹ ಮನಸ್ಥಿತಿ ನಮ್ಮೊಳಗೆ ಬರಬೇಕು. ನಾಡು ನುಡಿ ರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.ಕಿರವತ್ತಿ ಚರ್ಚ್‌ನ ಫಾದರ್ ಮೈಕಲ್ ಪಿಂಟೋ ಮಾತನ್ನಾಡಿ, ನಾವು ಉಸಿರಾಡುವ ಗಾಳಿ, ನಮ್ಮೊಳಗೆ ಹರಿಯುವ ರಕ್ತ ಒಂದೇ. ಹೀಗಿರುವಾಗ ಜಾತಿ ಭೇದ, ಕೋಮು ವೈಷಮ್ಯ ಯಾಕೆ ಎಂದು ‌ಪ್ರಶ್ನಿಸಿದ ಅವರು, ರಾಜ್ಯೋತ್ಸವ ಐಕ್ಯತೆ, ಸಾಮರಸ್ಯ ಸಾರುವಂತೆ ಆಗಬೇಕು ಎಂದರು.ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅರ್ಜುನ ಬೆಂಗೇರಿ ಮಾತನ್ನಾಡಿ, ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತ ಆಗದೇ, ನೆಲ, ಭಾಷೆಯ ಬಗೆಗೆ‌ ಕಳಕಳಿ, ಪ್ರೀತಿ ಅನುದಿನ ಇರಬೇಕು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಾದ ಸೀಮಾ ಫರ್ನಾಂಡೀಸ್, ನಾಗರಾಜ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕ ಮಂಜುನಾಥ ಮಲ್ಯ, ದೇವಸ್ಥಾನ ಸಮಿತಿ ಸದಸ್ಯ ಉದಯ, ಪ್ರಮುಖರಾದ ಶಹನಾಜ ಅಕ್ತರ್, ಮಹೇಶ ನಾಯ್ಕ ಗುಳ್ಳಾಪುರ, ಜೀವಾ ಕೈಟ್ಕರ್, ಜಾವು ಪಟಕಾರೆ, ಮುನಾಪ್ ಪಟೇಲ್, ಚನ್ನಪ್ಪ ಹರಿಜನ, ಸುಭಾಸ್ ಶೇಷಗಿರಿ ಸೇರಿದಂತೆ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಥೇರೆಜಾ ಫರ್ನಾಂಡೀಸ್ ಪ್ರಾರ್ಥಿಸಿದರು.

ಜಯಕರ್ನಾಟಕ ತಾಲೂಕು ಅಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಸುಬ್ರಾಯ ಬಿದ್ರೆಮನೆ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುವಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆ ಮೇಳೈಸಲಿ
ಹಿಂದೂ ಅಲ್ಪ ಸಂಖ್ಯಾತರಾದರೆ ಅಪಾಯ ಕಟ್ಟಿಟ್ಟ ಬುತ್ತಿ: ಕೃಷ್ಣಾನಂದ ಕಾಮತ್‌