ಚನ್ನಪಟ್ಟಣ: ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅನುದಾನದ ದುರ್ಬಳಕೆ ಆಗಿಲ್ಲ. ಯಾವುದೇ ತಾರಾತಮ್ಯ ಮಾಡದೇ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಬುಧವಾರ ಉದ್ದೇಶಪೂರ್ವಕವಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ತಗಚಗೆರೆ ಗ್ರಾಪಂ ಅಧ್ಯಕ್ಷೆ ಗೀತಾ ಶಿವಕುಮಾರ್ ತಿಳಿಸಿದ್ದಾರೆ.
ತಗಚಗೆರೆ ಗ್ರಾಪಂನಲ್ಲಿ ೧೯ ಸದಸ್ಯರಿದ್ದು, ಒಂದಿಬ್ಬರು ಸದಸ್ಯರು ಮಾತ್ರ ಎಲ್ಲದಕ್ಕೂ ವಿರೋಧ ಮಾಡಿಕೊಂಡು ಬರುತ್ತಿದ್ದಾರೆ. ಅವರೊಂದಿಗೆ ಕೆಲವರು ಮಾಹಿತಿ ಹಕ್ಕು ಕಾರ್ಯಕರ್ತರು ಎಂದು ಹೇಳಿಕೊಂಡು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬೀದಿ ದೀಪಗಳನ್ನು ಅಳವಡಿಸುವುದು. ಚರಂಡಿ ಸ್ವಚ್ಛಗೊಳಿಸುವ ವಿಚಾರ ಸೇರಿದಂತೆ ಎಲ್ಲ ಕೆಲಸ ಕಾರ್ಯಗಳನ್ನು ತಾರತಮ್ಯ ಮಾಡಿಲ್ಲ. ಅಧಿಕಾರಿಗಳು ಗುರುತಿಸಿದ ಜಾಗದಲ್ಲಿ ಗ್ರಾಪಂ ನೂತನ ಕಟ್ಟಡ ಕಟ್ಟಲು ಎಲ್ಲ ಸದಸ್ಯರು ಒಮ್ಮತದಿಂದ ನಿರ್ಧರಿಸಿ ಮುಂದಡಿ ಇಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ದನದಕೊಟ್ಟಿಗೆ ನಿರ್ಮಾಣ ಸಂಬಂಧ ಇಡೀ ತಾಲೂಕಿನಲ್ಲಿ ಎಲ್ಲಿಯೂ ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಿಲ್ಲ. ರೈತರು ನೀಡುವ ಅರ್ಜಿಗಳನ್ನು ಕಳುಹಿಸುವುದಷ್ಟೇ ನಮ್ಮ ಕೆಲಸ ಹೊರತು ಆಯ್ಕೆ ಸಂಪೂರ್ಣ ಜವಾಬ್ದಾರಿ ನಮ್ಮದಲ್ಲ ಎಂದರು.ಪ್ರವರ್ಗ ಒಂದರಲ್ಲಿನ ಹಣದ ದುರ್ಬಳಕೆ ಬಗ್ಗೆ ಅನುಮಾನವಿದ್ದರೆ, ಸಿಇಒ, ಇಒಗೆ ದೂರು ನೀಡಿ, ಎಲ್ಲಾ ಕಾಮಗಾರಿಗಳ ಕುರಿತು ತನಿಖೆ ಮಾಡಿಸಿ ತಪಿತಸ್ಥರೆಂದು ಕಂಡುಬಂದರೆ ಕ್ರಮ ತೆಗೆದುಕೊಳ್ಳಲಿ ಅದು ಬಿಟ್ಟು ಈ ರೀತಿ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಟೋ೨೨ಸಿಪಿಟಿ೧: ಗೀತಾ ಶಿವಕುಮಾರ್