ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಗಾಮನಹಳ್ಳಿಯ ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಡಾ. ಬಿ. ಆರ್.ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಓದಿಕೊಳ್ಳಬೇಕು. ಬಾಲ್ಯದಲ್ಲಿ ಅವರು ಅನುಭವಿಸಿದ ಅಪಮಾನ, ಬಡತನ, ಇವನ್ನೆಲ್ಲ ಮೆಟ್ಟಿನಿಲ್ಲಬೇಕೆಂಬ ಛಲ ಅವರ ಸಾಧನೆಗೆ ಕಾರಣವಾಯಿತು ಎಂದರು.ಇಂದು ಹೆಣ್ಣುಮಕ್ಕಳು ಅಕ್ಷರ ಕಲಿಯುತ್ತಿದ್ದಾರೆ ಎಂದರೆ ಅದಕ್ಕೆ ಅಂಬೇಡ್ಕರ್ ಕಾರಣ. ಹೆಣ್ಣು ಮಕ್ಕಳ ಕಲಿಕೆಯನ್ನು ಕಾನೂನುಬದ್ಧವಾಗಿಸಿ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಜಾರಿಗೊಳಿಸಿದರು. ಬಸವಣ್ಣ, ಬುದ್ಧರಂತಹ ಮಹಾನ್ ಸಮಾಜ ಸುಧಾರಕರ ಬಗ್ಗೆಯೂ ಅರಿವು ಪಡೆಯಬೇಕು. ನಿರಂತರ ಕಲಿಕೆ ಮೂಲಕ ವಿದ್ಯಾರ್ಥಿಗಳು ಸಾಧಕರಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ಜಯಸುಧಾ, ಮದ್ದೂರು ತಾಲೂಕು ಸಂಚಾಲಕಿ ಸುಧಾ ಮಾತನಾಡಿದರು. ಶಾಲೆ ಮುಖ್ಯ ಶಿಕ್ಷಕ ಗಾಮನಹಳ್ಳಿ ಮಹದೇವಸ್ವಾಮಿ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಕೊತ್ತತ್ತಿ ಮಹದೇವು, ಶಿಕ್ಷಕರಾದ ರಾಜೇಶ, ಜನಾರ್ಧನ, ಕಾಳಯ್ಯ, ಸುಮ, ಮಂಜುಳ, ರಾಜು ಉಪಸ್ಥಿತರಿದ್ದರು.