ಬುದ್ಧನ ಕ್ಷೇತ್ರದಲ್ಲಿ ಹಿಂಸೆಗೆ ಜಾಗವಿಲ್ಲ

KannadaprabhaNewsNetwork |  
Published : May 13, 2025, 01:24 AM IST
ಬುದ್ದ ಪೂರ್ಣಿಮೆ | Kannada Prabha

ಸಾರಾಂಶ

ಶಾಂತಿಯ ಸಂಕೇತದ ಮಹಾನ್ ಚೇತನ ಭಗವಾನ್ ಬುದ್ಧ ಪೌರ್ಣಮಿಯ ಅಂಗವಾಗಿ ತುಮಕೂರು ನಗರದ ಸದಾಶಿವನಗರದಲ್ಲಿ ಅಂಬೇಡ್ಕರ್ ವಿವಿದ್ಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಬುದ್ಧನ ಆಶಯದಂತೆ ಸರಳವಾಗಿ ಬುದ್ಧ ಪೌರ್ಣಮಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರುಶಾಂತಿಯ ಸಂಕೇತದ ಮಹಾನ್ ಚೇತನ ಭಗವಾನ್ ಬುದ್ಧ ಪೌರ್ಣಮಿಯ ಅಂಗವಾಗಿ ತುಮಕೂರು ನಗರದ ಸದಾಶಿವನಗರದಲ್ಲಿ ಅಂಬೇಡ್ಕರ್ ವಿವಿದ್ಧೋದ್ದೇಶ ಸಹಕಾರ ಸಂಘದ ಕಚೇರಿಯಲ್ಲಿ ಬುದ್ಧನ ಆಶಯದಂತೆ ಸರಳವಾಗಿ ಬುದ್ಧ ಪೌರ್ಣಮಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಇಂದ್ರಕುಮಾರ್ ಡಿ.ಕೆ.ರವರು ಮಾತನಾಡಿ ಶಾಂತಿ, ಅಹಿಂಸಾ ಮಾರ್ಗದ ಪ್ರತಿರೂಪವಾದ ಭಗವಾನ್ ಬುದ್ಧನ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ಪ್ರಪಂಚದಲ್ಲಿ ಹಿಂಸೆಗೆ ಜಾಗವಿಲ್ಲ. ಶಾಂತಿಯನ್ನು ಇಡೀ ಜಗಕ್ಕೇ ಸಾರಿದ ಭಗವಾನ್ ಬುದ್ಧನ ಆದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಇಂದಿಗೂ ಬುದ್ಧನ ಆದರ್ಶಗಳನ್ನು ಜಗತ್ತಿನ ಎಷ್ಟೋ ಸರ್ಕಾರಗಳು ಅನುಸರಿಸಿಕೊಂಡು ಬರುತ್ತಿವೆ ಎಂದರೇ ತಪ್ಪಾಗಲಾರದು. ಭಗವಾನ್ ಬುದ್ಧ ಒಬ್ಬ ಸರಳ, ಶಾಂತಿಯ ಧೂತ ಆತನ ತತ್ವಾದರ್ಶಗಳು ಇಂದಿಗೂ ಜೀವಂತ ಎಂದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಮುಖ್ಯಸ್ಥರಾದ ಮಂಚಲದೊರೆ ಕಂಬಯ್ಯ, ಡಿ.ಕೆ.ಇಂದ್ರ ಕುಮಾರ್, ಕಮಲಮ್ಮ, ಕಿರಣ್ ಕುಮಾರ್ ಹರ್ತಿ ಹಾಗೂ ಧನಲಕ್ಷ್ಮೀ ಎಂ.ಆರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!