-ಎಇಇ ರಾಜಕುಮಾರ ಜಲದೆ ಸ್ಪಷ್ಟನೆ । ಕುಡಿವ ನೀರಿಗಾಗಿ ಅಮರ್ಜಾ ಅಣೆಕಟ್ಟಿಯಲ್ಲಿ ಶೇ.57 ನೀರು ಸಂಗ್ರಹ ।
ಕನ್ನಡಪ್ರಭ ವಾರ್ತೆ ಆಳಂದ
ಮಳೆ ಕೊರತೆಯಿಂದ ಕಳೆದ 35 ದಿನಗಳಿಂದ ಅಮರ್ಜಾ ಅಣೆಕಟ್ಟಿಗೆ ಗಮನಾರ್ಹ ಒಳಹರಿವು ಆಗದಿದ್ದರೂ, ಅಣೆಕಟ್ಟಿನಲ್ಲಿ ಶೇ.57ರಷ್ಟು ನೀರು ಸಂಗ್ರಹವಿರುವುದರಿಂದ ಆಳಂದ, ಕಡಗಂಚಿ ಬಳಿಯ ಸಿಯುಕೆಗೆ ಕುಡಿವ ನೀರಿನ ಕೊರತೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಆಳಂದ ಪಟ್ಟಣದ ಕುಡಿವ ನೀರಿನ ಮೂಲ ಅಮರ್ಜಾ ಅಣೆಕಟ್ಟಿನಲ್ಲಿ ಇನ್ನೂ ಸಾಕಷ್ಟು ನೀರು ಲಭ್ಯವಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಕುಡಿವ ನೀರಿನ ಪೂರೈಕೆಗೆ ಅಗತ್ಯ ಸಂಗ್ರಹವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಹೀಗಾಗಿ ನೀರಿನ ಅಭಾವದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಮಳೆಗಾಲದಲ್ಲಿಯೂ ಮನೆಗಳಿಗೆ ನಿರಂತರ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಹಕರು ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಮಳೆಗಾಲದಲ್ಲಿಯೂ ನೀರು ಪೂರೈಕೆ ಅಸ್ಥಿರವಾಗಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಈ ಬಾರಿ ಮಳೆ ವಿಳಂಬವಾಗುತ್ತಿರುವ ಹಿನ್ನೆಲೆ ಕುಡಿವ ನೀರಿನ ಸಂಗ್ರಹ ಕಾಪಾಡಲು ಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಅಣೆಕಟ್ಟಿನಲ್ಲಿ ಉಳಿದಿರುವ ಶೇ.57ರಷ್ಟು ನೀರನ್ನು ಮುಂದಿನ ದಿನಗಳ ಕುಡಿವ ನೀರಿನ ಪೂರೈಕೆಗೆ ಜಿಲ್ಲಾಡಳಿತ ಮೀಸಲಿಟ್ಟಿದೆ.
ಯೋಜನೆ ಪೂರ್ಣಗೊಂಡ ಬಳಿಕ ಪ್ರತಿಯೊಬ್ಬ ನಾಗರಿಕರಿಗೆ ದಿನಂಪ್ರತಿ ತಲಾ 135 ಲೀಟರ್ ನೀರನ್ನು ನಿರಂತರ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
....ಕೋಟ್....
-ರಾಜಕುಮಾರ ಜಲದೆ, ಎಇಇ ಅಮರ್ಜಾ ಅಣೆಕಟ್ಟೆ.
..ಕೋಟ್..
ಆಳಂದದಲ್ಲಿ ನೀರಿನ ಮೂಲದ ಕೊರತೆ ಇಲ್ಲ. ಆದರೆ, ನೀರು ಸಂಗ್ರಹ ಹಾಗೂ ವಿತರಣಾ ವ್ಯವಸ್ಥೆಯ ಸಾಮರ್ಥ್ಯ ಸೀಮಿತವಾಗಿರುವುದರಿಂದ ಪ್ರತಿದಿನ ಅಥವಾ ಅಗತ್ಯವಿದ್ದಾಗ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಅಮೃತ್ 2.0 ಯೋಜನೆಯಡಿ ಸಮಗ್ರ ನೀರು ಸರಬರಾಜು ಕಾಮಗಾರಿ ನಡೆಯುತ್ತಿದೆ. ಯೋಜನೆ ಪೂರ್ಣಗೊಂಡ ಬಳಿಕ ಮನೆಮನೆಗೆ ಸಮರ್ಪಕ ಒತ್ತಡದೊಂದಿಗೆ ನಿರಂತರ ಕುಡಿವ ನೀರು ಪೂರೈಕೆ ಮಾಡುವ ವ್ಯವಸ್ಥೆ ಕಲ್ಪಿಸಲಾಗುತ್ತದೆ.-ಸಂಗಮೇಶ ಪನಶೆಟ್ಟಿ, ಪುರಸಭೆ ಮುಖ್ಯಾಧಿಕಾರಿಗಳು ಆಳಂದ.
----..ಬಾಕ್ಸ್.....ಅಮೃತ್ 2.0 ಯೋಜನೆಗೆ ರು.85.86 ಕೋಟಿಆಳಂದ ಪಟ್ಟಣದ ದೀರ್ಘಕಾಲದ ನೀರು ಪೂರೈಕೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಪುರಸ್ಕ್ರತ ಅಮೃತ್ 2.0 ಯೋಜನೆಯಡಿ ರು.85.86 ಕೋಟಿ ವೆಚ್ಚದಲ್ಲಿ ಸಮಗ್ರ ನೀರು ಸರಬರಾಜು ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗಿದೆ.ಈ ಯೋಜನೆಗೆ 2023ರ ಮಾರ್ಚ್ 28ರಂದು ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 2024ರ ಮೇ 23ರಂದು ಗುತ್ತಿಗೆ ನೀಡಲಾಗಿದೆ. 2024ರ ಆಗಸ್ಟ್ 14ರಂದು ಕಾಮಗಾರಿ ಆರಂಭಗೊಂಡಿದ್ದು, 2026ರ ಆಗಸ್ಟ್ 14ರೊಳಗೆ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.ಆದರೆ, ಕಾಮಗಾರಿ ಪ್ರಗತಿ ನಿಧಾನವಾಗಿರುವುದರಿಂದ ಆಮೆ ಹೆಜ್ಜೆಯಲ್ಲಿ ಸಾಗುತ್ತಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.-----