ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಸಂಸ್ಕೃತಿ ಸಂಗಮ ನೆಲಸಂಸ್ಕೃತಿ ನಾಟಕೋತ್ಸವದಲ್ಲಿ ಮಾತನಾಡಿ, ಮಕ್ಕಳಿಗೆ ನೆಲದ ಸಂಸ್ಕೃತಿಯ ಪರಿಚಯ ಮಾಡಿ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಂತಾ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದರು.
ಶಿಕ್ಷಣ ಕ್ಷೇತ್ರ ಇಂದು ಸ್ವಾಮೀಜಿಗಳ, ರಾಜಕಾರಣಿಗಳ, ಉದ್ಯಮಿಗಳ ಹಿಡಿತದಲ್ಲಿ ಸಿಲುಕಿ ದುಬಾರಿಯಾಗುತ್ತಿದೆ. ಬಡಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದಂತಾಗಿದೆ. ಇಡೀ ಶಿಕ್ಷಣ ಕ್ಷೇತ್ರದ ವ್ಯವಸ್ಥೆ ಬದಲಾಗಬೇಕಿದೆ. ಹಣವಿಲ್ಲದವರಿಗೂ ಕಾನ್ವೆಂಟ್‌ಗಳಲ್ಲಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ಶಿಕ್ಷಣ ದೊರೆಯಬೇಕಿದೆ ಎಂದರು.ಪ್ರಸ್ತುತ ಪೋಷಕರು ಕಾನ್ವೆಂಟ್ ಶಿಕ್ಷಣಕ್ಕೆ ಮಾರುಹೋಗಿ ಶಿಕ್ಷಣಕ್ಕಾಗಿ ದುಬಾರಿ ಹಣ ಖರ್ಚು ಮಾಡುತ್ತಿದ್ದಾರೆ. ಕಾನ್ವೆಂಟ್‌ಗಳಿಗಿಂತ ಸರ್ಕಾರಿ ಶಾಲೆಗಳಲ್ಲಿಯೇ ಉತ್ತಮವಾದ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತಲೂ ಉತ್ತಮವಾದ ಶಿಕ್ಷಕರಿದ್ದಾರೆ ಎಂದರು.
ಮಕ್ಕಳಿಂದಲೇ ಹತ್ತು ನಾಟಕಗಳ ಪ್ರದರ್ಶನ:
ಶಿಬಿರದಲ್ಲಿ ಕಲಿತ ಮಕ್ಕಳಿಂದ ಮೇಲುಕೋಟೆಯಲ್ಲಿ ನಾಲ್ಕು ಹಾಗೂ ವಿವಿಧ ತಾಲೂಕು ಕೇಂದ್ರದಲ್ಲಿ ಒಂದೊಂದು ನಾಟಕಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ ಎಂದರು.
ಬಿಇಒ ಚಂದ್ರಶೇಖರ್ ಮಾತನಾಡಿ, ನಾಟಕಗಳೂ ಸಹ ಪಠ್ಯದ ಭಾಗಗಳಾಗಿವೆ. ನಮ್ಮ ಸಂಸ್ಕೃತಿಪರಿಚಯವನ್ನು ಮಕ್ಕಳಿಗೆ ಮಾಡಿಸುವ ಜವಾಬ್ದಾರಿ ನಮ್ಮಮೇಲಿದೆ. ಮಕ್ಕಳನ್ನು ರಂಗಕಲೆಯಲ್ಲಿ ತೊಡಗಿಸುವ ಕಾರ್ಯ ಶ್ಲಾಘನೀಯವಾಗಿದೆ ಎಂದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಪಿಎಂ ರಾಜ್ಯಕಾರ್ಯದರ್ಶಿ ಜಿ.ಎನ್.ನಾಗರಾಜು, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ ಪಿ.ನಾಗರಾಜು, ಕ್ಷೇತ್ರಶಿಕ್ಷಣಾಧಿಕಾರಿ ಚಂದ್ರಶೇಖರ್, ಶಿಕ್ಷಣ ಸಂಯೋಜಕ ರಮೇಶ್, ಕನಗೋನಹಳ್ಳಿ ಪರಮೇಶ್, ಪರಿಸರ ತಜ್ಞ ಸಂತೋಷ್ ಕೌಲಗಿ, ಕಸಾಪ ಮಾಜಿ ಅಧ್ಯಕ್ಷ ವೆಂಕಟರಾಮೇಗೌಡ, ಸಾಹಿತಿ ಸಿ.ಎನ್.ನಾಗರಾಜು, ಹೋರಾಟಗಾರ್ತಿ ಕುಮಾರಿ, ದೃಶ್ಯ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಗಿರೀಶ್, ಗಾಮನಹಳ್ಳಿ ಸ್ವಾಮಿ, ಚೇ.ಬಾಲು, ಮುಖ್ಯಶಿಕ್ಷಕ ಸಂತಾನರಾಮನ್, ಶಿಕ್ಷಕಿ ಮಹಾಲಕ್ಷ್ಮಿ, ಬಿ.ಜಯಂತಿ ಮಹಮದ್ ಇಮ್ರಾನ್ ಪೂರ್ಣಿಮ ಮತ್ತಿತರರು ಭಾಗವಹಿಸಿದ್ದರು.