ಬಂಗಾರಪೇಟೆ: ಹಾಲು ಉತ್ಪಾದಕರ ಸಂಘದಲ್ಲಿ ಯಾರೂ ಸಹ ರಾಜಕೀಯ ಹಸ್ತಕ್ಷೇಪ ಮಾಡದೇ ಎಲ್ಲರೂ ಪರಸ್ಪರ ಸಹಕಾರದೊಂದಿಗೆ ಸಂಘವನ್ನು ಮುನ್ನಡೆಸಿದರೆ ಸಂಘದ ಜೊತೆ ಹೈನೋದ್ಯಮ ಸಹ ಉಳಿಯುತ್ತದೆ ಎಂದು ಒಕ್ಕೂಟದ ವಿಸ್ತರಣಾಧಿಕಾರಿ ಎಂ.ಎಸ್.ಭಾನುಪ್ರಕಾಶ್ ಹೇಳಿದರು.
ರೈತರು ಪೂರೈಸುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ಸಿಗಲಿದೆ, ಒಬ್ಬರಿಗೆ ಒಂದು ಬೆಲೆ ಮತ್ತೊಬ್ಬರಿಗೆ ಮತ್ತೊಂದು ಬೆಲೆ ಸಿಗುವುದಿಲ್ಲ, ಅಲ್ಲದೆ ಪಾರದರ್ಶಕವಾಗಿ ಆಡಳಿತ ನೀಡಲು ಹಾಲು ಒಕ್ಕೂಟ ರೈತರ ಮೊಬೈಲ್‌ಗೆ ಎಲ್ಲಾ ಮಾಹಿತಿ ಒದಗಿಸುವ ವಿನೂತನ ಕಾರ್ಯ ಸಹ ಈಗ ಆರಂಭಿಸಿದೆ, ಇದರಿಂದ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು.
ಸಂಘದ ಅಧ್ಯಕ್ಷ ಜಿ.ವರದಪ್ಪ, ಉಪಾಧ್ಯಕ್ಷ ತಿಮ್ಮರಾಯನಾಯಕ,ನಿರ್ದೇಶಕರಾದ ಮಂಜುನಾಥ್,ಅಶೋಕ್ ಕುಮಾರ್,ಕೃಷ್ಣಪ್ಪ,ವರದಾಂಜನೇಯ,ನಾಗರಾಜು,ಕಾರ್ಯದರ್ಶಿ ಎನ್.ಕೃಷ್ಣಯ್ಯ ಇತರರು ಇದ್ದರು.