ಕನ್ನಡಪ್ರಭ ವಾರ್ತೆ ತಾಳಿಕೋಟೆ
ವೇಗವಾಗಿ ಬೆಳೆಯುತ್ತಿರುವ ತಾಳಿಕೋಟೆ ಪಟ್ಟಣಕ್ಕೆ ಅವಶ್ಯಕ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಕರ್ತವ್ಯ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ವಿಜಯಪುರ ಜಿಲ್ಲಾಡಳಿತ, ನಗರಾಭಿವೃದ್ಧಿ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ತಾಳಿಕೋಟೆ ಪುರಸಭೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ ೨.೦ ಯೋಜನೆಯಡಿ ತಾಳಿಕೋಟೆ ಪಟ್ಟಣಕ್ಕೆ ಕುಡಿಯುವ ನೀರಿನ ಸರಬರಾಜು ಮಾಡುವ ಅಮೃತ 2.0 ಯೋಜನೆ ಹಂತ ೧ ಮತ್ತು ೨ಕ್ಕೆ ಭೂಮಿಪೂಜೆ ನೇರವೇರಿಸಿ ಅವರು ಮಾತನಾಡಿದರು.ತಾಳಿಕೋಟೆ ಪಟ್ಟಣಕ್ಕೆ ಮುಂದಿನ ೫೦ ವರ್ಷಗಳ ಜನಸಂಖ್ಯೆಯ ದೂರದೃಷ್ಟಿಯಿಂದ ೨೪*೭ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಿಂದ ಕುಡಿಯುವ ನೀರಿನ ತೊಂದರೆ ಬರುವುದಿಲ್ಲ. ಪಟ್ಟಣದ ಬೆಳೆದಿದ್ದರಿಂದ ಹಿಂದೆ ₹ ೫೫ ಲಕ್ಷ ಖರ್ಚು ಮಾಡಿ ಕೆರೆಯ ಆಳ ಹೆಚ್ಚಿಸಿ ಕುಡಿಯುವ ನೀರು ನೀಡಲಾಗಿದೆ. ಈ ಕೆಲಸ ನನ್ನಿಂದಾಯಿತು ಎಂದು ನಾನು ಜಂಬ ಕೊಚ್ಚಿಕೊಳ್ಳಲ್ಲ. ಆದರೆ, ಕೇವಲ ಒಂದು ಬಾರಿ ಶಾಸಕರಾದವರು ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾ ಸುತ್ತುತ್ತಿದ್ದಾರೆ. ಇವರಿಗೆ ಅಭಿವೃದ್ಧಿಗಿಂತ ಜಂಬಕೊಚ್ಚಿಕೊಳ್ಳುವುದೇ ಮುಖ್ಯವಾಗಿದೆ. ಈ ನೀರಿನ ಯೋಜನೆಗೆ ಕೇಂದ್ರ ಸರ್ಕಾರ ಶೇ.೫೦ ರಷ್ಟು ಹಣ ರಾಜ್ಯ ಸರ್ಕಾರ ಶೇ.೪೦, ಮತ್ತು ಸ್ಥಳೀಯ ಸಂಸ್ಥೆಯಿಂದ ಶೇ.೧೦ ರಷ್ಟು ಸೇರಿ ಯೋಜನೆ ರೂಪುಗೊಂಡಿದೆ. ದೇಶವನ್ನು ಮಾತಿನಿಂದ ಕಟ್ಟಲು ಸಾಧ್ಯವಿಲ್ಲ, ಕೃತಿಯಿಂದ ಕಟ್ಟಲು ಸಾಧ್ಯ ಎಂದು ಹೇಳಿದರು.
ತಾಳಿಕೋಟೆ ಡೋಣಿ ನದಿ ಸೇತುವೆ ನಿರ್ಮಾಣಕ್ಕೆ ₹ ೨೪ ಕೋಟಿ ಮಂಜೂರಾಗಿದ್ದು, ಟೆಂಡರ್ ಕೂಡ ಆಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ.ಜೊತೆಗೆ ಉಕ್ಕಲಿ, ಸಾಸನೂರ, ತಂಗಡಗಿ ರಸ್ತೆ ಸುಧಾರಣೆಗೂ ಹಣ ಮಂಜೂರಾಗಿದೆ. ಫೀರಾಪೂರ-ಬೂದಿಹಾಳ ಏತ ನೀರಾವರಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸಲು ಸರ್ಕಾರ ಮುಂದಾಗಿದೆ. ಅದಕ್ಕೂ ಚಾಲನೆ ಕೊಡಲಿದ್ದೇವೆ. ಆಲಮಟ್ಟಿ ಡ್ಯಾಂ ೫೨೪ಕ್ಕೆ ಎತ್ತಿರಿಸಲು ಮುಖ್ಯಮಂತ್ರಿಗಳು ವರ್ಷಕ್ಕೆ ₹ ೨೦ ಸಾವಿರ ಕೋಟಿ ನೀಡುವುದಾಗಿ ತಿಳಿಸಿದರು.
ಈ ವೇಳೆ ಶಾಸಕರಿಗೆ, ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರು ಸೇರಿ ಗಣ್ಯರನ್ನು ಸನ್ಮಾನಿಸಲಾಯಿತು. ಪುರಸಭಾ ಸದಸ್ಯರಾದ ಅಣ್ಣಾಜಿ ಜಗತಾಪ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಮುಸ್ತಫಾ ಚೌದ್ರಿ, ಅಕ್ಕಮಹಾದೇವಿ ಕಟ್ಟಿಮನಿ, ಡಿ.ವ್ಹಿ.ಪಾಟೀಲ, ವಾಸುದೇವ ಹೆಬಸೂರ, ನಿಂಗು ಕುಂಟೋಜಿ, ಮುದಕಪ್ಪ ಬಡಿಗೇರ, ಯಾಸೀನ ಮಮದಾಪೂರ, ಮುಖಂಡರಾದ ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಸೈಯದ ಶಕೀಲಅಹ್ಮದ ಖಾಜಿ, ಬಾಬುರಾವ್ ಶಿಂಧೆ, ಪ್ರಭುಗೌಡ ಮದರಕಲ್ಲ, ಹುಸೇನಭಾಷಾ ಜಮಾದಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಸಂಗಮೇಶ ದೇಸಾಯಿ, ಮಂಜೂರ ಬೇಪಾರಿ, ಇಬ್ರಾಹಿಂ ಮನ್ಸೂರ, ವಿಜಯಸಿಂಗ್ ಹಜೆರಿ ಇತರರು ಇದ್ದರು.------------
ಕೋಟ್ನಾನೇ ಮಾಡಿದ್ದೆಂದು ಸುತ್ತುತ್ತಿರುವ ಮಾಜಿ ಶಾಸಕ!
ಈ ಯೋಜನೆ ಸಾಕಾರಕ್ಕೆ ನಾನು ೨೦೦೩ರಿಂದಲೇ ಪ್ರಯತ್ನಿಸುತ್ತಿದ್ದೇನೆ. ಯೋಜನೆ ಸಾಕಾರಕ್ಕೆ ನೀವು ಎಂಎಲ್‌ಎ ಆಗಿದ್ದಾಗ ಲೇಟರ್ ನೀಡಿದ್ರಲ್ಲಾ ಆವಾಗ ಎಲ್ಲಿ ಹೋಗಿತ್ತು ನಿಮ್ಮ ಕಾಳಜಿ? ಜನರನ್ನು ದಾರಿ ತಪ್ಪಿಸಲು ಮಾಡುತ್ತಿರುವ ನಿಮ್ಮ ಪ್ರಯತ್ನ ವ್ಯರ್ಥವಾಗಿದೆ. ಜನರಿಗೆ ನಿಮ್ಮ ನಿಜ ಸ್ಥಿತಿ ಗೊತ್ತಿದೆ. ಜನರ ದಾರಿ ತಪ್ಪಿಸಿ ಅಭಿವೃದ್ಧಿಯಲ್ಲಿ ರಾಜಕಾರಣ ಮಾಡುವುದನ್ನು ಬಿಡಿ. ಪಟ್ಟಣದ ಬೆಳೆದಿದ್ದರಿಂದ ಹಿಂದೆ ₹ ೫೫ ಲಕ್ಷ ಖರ್ಚು ಮಾಡಿ ಕೆರೆಯ ಆಳ ಹೆಚ್ಚಿಸಿ ಕುಡಿಯುವ ನೀರು ನೀಡಲಾಗಿದೆ. ಈ ಕೆಲಸ ನನ್ನಿಂದಾಯಿತು ಎಂದು ನಾನು ಜಂಬ ಕೊಚ್ಚಿಕೊಳ್ಳಲ್ಲ. ಆದರೆ, ಕೇವಲ ಒಂದು ಬಾರಿ ಶಾಸಕರಾದವರು ನಾನು ಮಾಡಿದ್ದು, ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾ ಸುತ್ತುತ್ತಿದ್ದಾರೆ. ಇವರಿಗೆ ಅಭಿವೃದ್ಧಿಗಿಂತ ಜಂಬಕೊಚ್ಚಿಕೊಳ್ಳುವುದೇ ಮುಖ್ಯವಾಗಿದೆ.- ಸಿ.ಎಸ್.ನಾಡಗೌಡ (ಅಪ್ಪಾಜಿ), ಶಾಸಕ