- ಸಣ್ಣಲಿಂಗಪ್ಪ ಬಡಾವಣೆ ಮನೆಯಲ್ಲಿ ಘಟನೆ । ದಂಪತಿಗೆ ಹಿಗ್ಗಾಮುಗ್ಗ ಥಳಿಸಿದ ಕಳ್ಳರು । ಪೊಲೀಸರಿಗೆ ಎಸ್‌ಪಿ ತರಾಟೆ - - - ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಮನೆಗೆ ನುಗ್ಗಿದ ಕಳ್ಳರು ದಂಪತಿಯನ್ನು ಬೆದರಿಸಿ, ಅವರನ್ನು ಪಂಚೆ, ಟವಲ್‌ನಿಂದ ಕಟ್ಟಿ ಹಾಕಿದ್ದಾರೆ. ಬಳಿಕ ಕಿವಿಯಲ್ಲಿದ್ದ ಬಂಗಾರದ ಓಲೆ, ಜುಮುಕಿ, ಬೆಂಡೋಲೆ, ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರ, ಕೈಯಲ್ಲಿನ ಉಂಗುರ, ಬೆಳ್ಳಿ ದೀಪ, ಕುಂಕುಮದ ಬಟ್ಟಲು ಹಾಗೂ ₹೨೫ ಸಾವಿರ ನಗದು ಕಳ್ಳರು ಬಲವಂತವಾಗಿ ಪಡೆದಿದ್ದಾರೆ.
ಮನೆಯ ಹಿಂಬಾಗಿಲಿನ ಬೀಗ ಮುರಿದು ಒಳನುಗ್ಗಿದ ದರೋಡೆಕೋರರು ಮನೆಯ ಲೈಟ್ ಆಫ್ ಮಾಡಿದ್ದಾರೆ. ಬಳಿಕ ಈರಣ್ಣ ಮತ್ತು ರಾಧ ಅವರ ಮುಖಕ್ಕೆ ಮೊಬೈಲ್ ಬೆಳಕು ಹರಿಸಿ, ಚಿನ್ನಾಭರಣ, ನಗದು ಕೊಡುವಂತೆ ಹಿಂಸಿಸಿದ್ದಾರೆ. ಈರಣ್ಣ ಅವರ ಎಡಭುಜ ಹಾಗೂ ಬೆನ್ನಿನ ಮೇಲೆ ಕೋಲಿನಿಂದ ಬಲವಾಗಿ ಹಲ್ಲೆ ನಡೆಸಿದ್ದಾರೆ. ಪತ್ನಿ ರಾಧ ಅವರ ಎಡಗಾಲಿಗೂ ತೀವ್ರವಾಗಿ ಕೋಲಿನಿಂದ ಹಲ್ಲೆ ನಡೆಸಿದ್ದಾರೆ. ಅಸ್ವಸ್ಥಗೊಂಡಿರುವ ದಂಪತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.ದರೋಡೆ ನಡೆಯುವ ಮುನ್ನವೇ ಕಾರೊಂದು ಈರಣ್ಣ ಅವರ ಮನೆ ಮುಂದೆ ಹಾದುಹೋಗಿದೆ. ಕಳವು ಕೃತ್ಯ ನಡೆಸಿದ ಎಲ್ಲರೂ ೩೦-೩೫ ವರ್ಷ ವಯಸ್ಸಿನವರು, ಕನ್ನಡದಲ್ಲೇ ಮಾತನಾಡುತ್ತಿದ್ದರು. ಕೇವಲ ೧೫-೨೦ ನಿಮಿಷ ಅವಧಿಯಲ್ಲಿ ಎಲ್ಲವನ್ನೂ ದೋಚಿದ್ದಾರೆ. ಕಳ್ಳರು ತೆರಳಿದ ಬಳಿಕ ನಾವು ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ನೆರವಿಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿಸಿದರು.
- - -
ಜಿಲ್ಲಾ ರಕ್ಷಣಾಧಿಕಾರಿ ಅವರು ರಾತ್ರಿ ವೇಳೆಯ ಪಹರೆಯನ್ನು ಇನ್ನಷ್ಟು ಬೀಗಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ವಿಶೇಷವಾಗಿ ನಗರದ ಹೊರವಲಯದ ಹೋಟೆಲ್, ಡಾಬಾ, ಅಂಗಡಿಗಳ ಸುತ್ತಮುತ್ತಲ ಪರಿಶೀಲನೆ ನಡೆಸಲು ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಚಳ್ಳಕೆರೆ ನಗರದ ಹೊರವಲಯದ ಮನೆಯಲ್ಲಿ ಕಳ್ಳರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ದಂಪತಿಯನ್ನು ಜಿಲ್ಲಾ ರಕ್ಷಣಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. -೨೩ಸಿಎಲ್‌ಕೆ೧: