ಕನ್ನಡಪ್ರಭ ವಾರ್ತೆ ಮಂಗಳೂರು
ಇದು ಮಂಗಳೂರಿನ ಪಂಪ್‌ವೆಲ್ ನಿವಾಸಿ ಅಪೂರ್ವ ಶೆಟ್ಟಿಯ ಮಾತು. ಕೌನ್ ಬನೇಗಾ ಕರೋಡ್‌ಪತಿ ಸ್ಪರ್ಧೆಯಲ್ಲಿ ಭಾಗವಹಿಸಿ 11 ಪ್ರಶ್ನೆಗಳಿಗೆ ಸರಿ ಉತ್ತರ ನೀಡಿರುವ ಅಪೂರ್ವ ಶೆಟ್ಟಿಯ ಸ್ಪರ್ಧೆಯ ಪ್ರಸಾರ ಸೆ. 27 ರಂದು ರಾತ್ರಿ 9 ಗಂಟೆಗೆ ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹಾಟ್ ಸೀಟ್‌ನ ತಮ್ಮ ಅನುಭವ ಹಂಚಿಕೊಂಡ ಅಪೂರ್ವ ಶೆಟ್ಟಿ, 2022 ರಿಂದ ಸತತವಾಗಿ ಕೆಬಿಸಿಯಲ್ಲಿ ಭಾಗವಹಿಸಲು ಪ್ರಯತ್ನಿಸುತ್ತಿದ್ದೆ ಎಂದು ಹೇಳಿದರು. ಬಿಕಾಂ ಪದವೀಧರೆಯಾಗಿರುವ ಅಪೂರ್ವ ಶೆಟ್ಟಿ, ಯುಪಿಎಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.ಅಪೂರ್ವ ಅವರ ತಂದೆ ಲೋಕನಾಥ ಶೆಟ್ಟಿ, ಸಹೋದರಿ ಅನನ್ಯ ಶೆಟ್ಟಿ ಇದ್ದರು.