ಅರ್ಹರು ಮತದಾನ ಹಕ್ಕಿನಿಂದ ವಂಚಿತರಾಗದಿರಲಿ: ಕಳಕಪ್ಪ ಬಂಡಿ

KannadaprabhaNewsNetwork |  
Published : Jun 09, 2026, 02:30 AM IST
ಪೋಟೊ ಕ್ಯಾಪ್ಸನ್:ಡಂಬಳ ಮಂಡಲದ ಕಾರ್ಯಕಾರಿಣಿ ಸಭೆ ಮತ್ತು ಸಂಘಟನಾತ್ಮಕ ಸಭೆಯನ್ನು ಮಾಜಿ ಸಚಿವ ಕಳಕಪ್ಪ ಜಿ ಬಂಡಿ ಅವರು ಉದ್ಘಾಟಿಸಿ ಮಾತನಾಡಿದರು.ಈ ಸಭೆಯ ಅಧ್ಯಕ್ಷತೆಯನ್ನು ಮಂಡಲ ಅಧ್ಯಕ್ಷ  ಅಂದಪ್ಪ ಗಿ ಹಾರೋಗೇರಿ ವಹಿಸಿದ್ದರು. ಪಕ್ಷದ ಹಿರಿಯ ಮುಖಂಡರು, ಎಲ್ಲಾ ಮೋರ್ಚಾಗಳ ಅಧ್ಯಕ್ಷರು,ಮಂಡಲದ ಮತ್ತು ಜಿಲ್ಲೆಯ ಪ್ರಮುಖ ಪದಾಧಿಕಾರಿಗಳು ಇದ್ದರು. | Kannada Prabha

ಸಾರಾಂಶ

ಎಸ್ಐಆರ್ ಎಂದರೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಕಲಿ ಮತಗಳನ್ನು ತೆಗೆದುಹಾಕಿ ಅರ್ಹರನ್ನು ಮಾತ್ರ ಪಟ್ಟಿಯಲ್ಲಿ ಉಳಿಸುವ ಉದ್ದೇಶವಾಗಿದೆ.

ಡಂಬಳ: ಎಸ್ಐಆರ್‌ನಿಂದ ಅರ್ಹ ಮತದಾರರು ತಮ್ಮ ಹಕ್ಕಿನಿಂದ ವಂಚಿತರಾಗದಂತೆ ತಡೆಯುವುದು, ಒಂದೇ ಸ್ಥಳದಲ್ಲಿ ಮತದಾನದ ಹಕ್ಕು ಇರುವಂತೆ ನೋಡುವುದು ಮತ್ತು ಪಾರದರ್ಶಕ ಮತದಾರರ ಪರಿಷ್ಕರಣೆಯ ಸಿದ್ಧಪಡಿಸುವುದು ವಿಶೇಷ ಸಮಗ್ರ ಪರಿಷ್ಕರಣೆಯಾಗಿದೆ. ಈ ಕುರಿತು ಪಕ್ಷದ ಕಾರ್ಯಕರ್ತರು ಜಾಗೃತೆ ವಹಿಸಬೇಕೆಂದು ಮಾಜಿ ಸಚಿವ ಕಳಕಪ್ಪ ಬಂಡಿ ತಿಳಿಸಿದರು.

ಡಂಬಳ ಗ್ರಾಮದ ಪ್ರವಾಸಿ ಮಂದಿರದಲ್ಲಿ ಸೋಮವಾರ ರೋಣ ಮತಕ್ಷೇತ್ರದ ಡಂಬಳ ಮಂಡಲದ ಕಾರ್ಯಕಾರಿಣಿ ಸಭೆ ಮತ್ತು ಸಂಘಟನಾತ್ಮಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಎಸ್ಐಆರ್ ಎಂದರೆ ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಕಲಿ ಮತಗಳನ್ನು ತೆಗೆದುಹಾಕಿ ಅರ್ಹರನ್ನು ಮಾತ್ರ ಪಟ್ಟಿಯಲ್ಲಿ ಉಳಿಸುವ ಉದ್ದೇಶವಾಗಿದೆ. ಮೃತಪಟ್ಟವರು, ಬೇರೆಡೆ ಸ್ಥಳಾಂತಗೊಂಡವರು ಹಾಗೂ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದರಿಂದ ಚುನಾವಣೆಯಲ್ಲಿ ಅಕ್ರಮ ತಡೆಯಲ್ಪಡುತ್ತವೆ ಎಂದರು.

ರಾಜ್ಯದಲ್ಲಿ ಅಂದಾಜು 70ರಿಂದ 80 ಲಕ್ಷ ನಕಲಿ ಮತದಾರರಿದ್ದಾರೆ. ರೋಣ ಮತಕ್ಷೇತ್ರದಲ್ಲಿ ಅಂದಾಜು 25 ಸಾವಿರ ನಕಲಿ ಮತದಾರರಿದ್ದಾರೆ. ಮುಂಬರುವ ಸ್ಥಳೀಯ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲು ಪಕ್ಷದ ಕಾರ್ಯಕರ್ತರು ವಿವಿಧ ಮೋರ್ಚಾಗಳ ಪದಾಧಿಕಾರಿಗಳು ನಕಲಿ ಮತಗಳ ಕುರಿತು ಜಾಗೃತೆ ವಹಿಸಬೇಕು ಎಂದರು.

ಡಂಬಳ ಮಂಡಳ ಅಧ್ಯಕ್ಷ ಅಂದಪ್ಪ ಹಾರೂಗೇರಿ ಮಾತನಾಡಿ, ಈಗಾಗಲೆ 8 ಮೋರ್ಚಾಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷದ ಆದೇಶ ಹಾಗೂ ಸಲಹೆಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಎಸ್‍ಐಆರ್ ಬಗ್ಗೆ ಮಹತ್ವ ನೀಡಬೇಕು. ಪಕ್ಷದ ವಿವಿಧ ಚಟುವಟಿಕೆಯಲ್ಲಿ ಎಲ್ಲರೂ ಭಾಗವಹಿಸಬೇಕು. ಪಕ್ಷದ ಶಕ್ತಿ ಮತ್ತು ಸಂಪತ್ತು ಕಾರ್ಯಕರ್ತರು ಆಗಿದ್ದಾರೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷ ಬೀರಪ್ಪ ಎಸ್ ಬಂಡಿ, ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ವೈ.ಪಿ. ಅಡ್ನೋರ, ಡಂಬಳ ಮಂಡಳ ಹಿಂದುಳಿದ ವರ್ಗದ ಮೋರ್ಚಾದ ಅಧ್ಯಕ್ಷ ಮಲ್ಲಪ್ಪ ಮಠದ, ಡಂಬಳ ಮಂಡಳ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಶೇಖಪ್ಪ ಯಾವಗಲ್, ಮುಖಂಡರಾದ ವೆಂಕನಗೌಡ ಪಾಟೀಲ, ಬಸವರಾಜ ಚನ್ನಳ್ಳಿ, ಫಕ್ಕನಗೌಡ ರಡ್ಡೇರ, ರವಿ ಕರಿಗಾರ, ಶಿವಪ್ಪ ಅಂಕದ, ಪ್ರಭು ಕೊರ್ಲಹಳ್ಳಿ, ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣ ಬಂಡಿ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಿ ಹರ್ಲಾಪೂರಮಠ, ಪ್ರಭು ಕರಮುಡಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪರಿಸರ ರಕ್ಷಣೆ ಕರ್ತವ್ಯವಾಗಲಿ: ನ್ಯಾ. ಸುಜಾತಾ
ಹೆಣ್ಣುಮಕ್ಕಳು ಕರಾಟೆ ಕಲಿಯಲಿ: ದೇವಿದಾಸ ಮೊಗೇರ