ಅರ್ಹರು ಗ್ಯಾರಂಟಿಯಿಂದ ವಂಚಿತರಾಗಬಾರದು

KannadaprabhaNewsNetwork | Published : Jul 2, 2025 12:21 AM
1ಕೆಬಿಪಿಟಿ.1.ಬಂಗಾರಪೇಟೆ ತಾಪಂನಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಸಭೆಯ ಅಧ್ಯಕ್ಷ ಎಸ್.ಎ್.ಪಾರ್ಥಸಾರಥಿ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಾಗ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು, ಅದು ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿದೆ, ಲೋಪದೋಷಗಳು ಇದೆಯೇ ಅರ್ಹರು ಯೋಜನೆಯಿಂದ ವಂಚಿತರಾಗಿದ್ದಾರೆಯೇ ಎಂಬುದನ್ನು ಅರಿಯಲು ಪ್ರಗತಿ ಪರಿಶೀಲನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಅಧಿಕಾರಿಗಳು ಶ್ರಮವಹಿಸಬೇಕೆಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎ.ಪಾರ್ಥಸಾರಥಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಥಿಕಾರ ಸಮಿತಿಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ತಾಲೂಕಿನಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸಿ ಅರ್ಹರಿಗೆ ಸೌಲಭ್ಯ ಕಲ್ಪಿಸಬೇಕು ಎಂದರು.

ಯೋಜನೆಯ ಪ್ರಗತಿ ಪರಿಶೀಲನೆ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುವಾಗ ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು, ಅದು ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿದೆ, ಲೋಪದೋಷಗಳು ಇದೆಯೇ ಅರ್ಹರು ಯೋಜನೆಯಿಂದ ವಂಚಿತರಾಗಿದ್ದಾರೆಯೇ, ಇದ್ದರೆ ಯಾವಕಾರಣಕ್ಕೆ ವಂಚಿತರಾಗಿದ್ದಾರೆ,ಎಲ್ಲಾ ಅರ್ಹರಿಗೂ ಯೋಜನೆಗಳು ಲಭಿಸುತ್ತಿದೆಯೇ ಎಂಬುದನ್ನು ಪ್ರಗತಿ ಪರಿಶೀಲನೆ ನಡೆಸಲಾಯಿತು.

ಯುವನಿಧಿ ಯೋಜನೆ ಬಗ್ಗೆ ಎಲ್ಲಾ ಕಾಲೇಜುಗಳಲ್ಲಿ ಪ್ರಚಾರ ಮಾಡಿ ಯುವಕರಿಗೆ ಅರಿವು ಮೂಡಿಸಬೇಕು. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೂ ಸರ್ಕಾರ ನೀಡುವ ೩ಸಾವಿರ ರೂಗಳನ್ನು ಪಡೆಯುವಂತೆ ಅರಿವು ಮೂಡಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಮನೆ ಕಟ್ಟಲು ಅನುಮತಿ ಕಡ್ಡಾಯ

ಸರ್ಕಾರ ಗೃಹಜ್ಯೋತಿ ಯೋಜನೆಯಲ್ಲಿ ಹೊಸದಾಗಿ ಮನೆ ಕಟ್ಟುವವರಿಗೆ ಹಿಂದಿನಂತೆ ಬೇಕಾಬಿಟ್ಟಿಯಾಗಿ ಮೀಟರ್ ನೀಡದೆ ಮನೆ ನಿರ್ಮಾಣ ಮಾಡಲು ಕೆಡಿಎ ಅನುಮತಿ ಪಡೆಯುವುದು ಕಡ್ಡಾಯ ಮಾಡಿದೆ. ಅದರ ಮಾರ್ಗದರ್ಶನದಂತೆಯೇ ಮನೆ ನಿರ್ಮಾಣ ಮಾಡಿರುವವರಿಗೆ ಮಾತ್ರ ಬೆಸ್ಕಾಂನಿಂದ ಮೀಟರ್ ನೀಡಲಾಗುವುದು ಸಣ್ಣ ಮನೆಗಳನ್ನು ನಿರ್ಮಾಣ ಮಾಡುವವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಸಭೆಗೆ ಬೆಸ್ಕಾಂ ಎಇಇ ಸುಕುಮಾರ್ ರಾಜು ತಿಳಿಸಿದರು.ಶಕ್ತಿ ಯೋಜನೆ ಸಾಕಷ್ಟು ಯಶಸ್ವಿಯಾಗಿದ್ದು ಈ ಯೋಜನೆ ಗ್ರಾಮೀಣ ಭಾಗದ ಹಾಗೂ ಬಡ ಮಧ್ಯಮ ವರ್ಗದ ಮಹಿಳೆಯರಿಗ ಹೆಚ್ಚಿನ ಅನುಕೂಲವಾಗಿದೆ. ಇನ್ನೂ ಕೆಲವು ಕಡೆ ಕೆಂಪು ಬಸ್ ಸಂಚರಿಸದೆ ಇರುವುದರಿಂದ ಆ ಕಡೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಜತೆ ಚರ್ಚಿಸಿ ಯಾವ ಮಾರ್ಗದಲ್ಲಿ ಸಾರಿಗೆ ಬಸ್ ಕೊರತೆ ಇದೆಯೋ ಆ ಕಡೆ ಅಳವಡಿಸಲಾಗುವುದು ಎಂದರು.

ಗೃಹಲಕ್ಷ್ಮೀ ಹಣ ಸಂದಾಯ

ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಿಗೆ ಎಲ್ಲಾ ಅರ್ಹರಿಗೂ ಮೇ ವರೆಗೂ ಹಣ ಸಂದಾಯವಾಗಿದೆ ೭೮ ಮಹಿಳೆಯರಿಗೆ ಮಾತ್ರ ಇದುವರೆಗೂ ಹಣ ಬಂದಿಲ್ಲ ಕಾರಣ ಅವರ ಆಧಾರ್ ಲಿಂಗ್ ಆಗದ ಕಾರಣ ಸ್ಥಗಿತವಾಗಿದೆ ಅದನ್ನೂ ಮಾಡಿಸಲು ಸಿಡಿಪಿಒ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಒಟ್ಟಾರೆಯಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹರು ವಂಚಿತರಾಗದೆ ಪಡೆಯಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳೂ ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

ಸಭೆಯಲ್ಲಿ ಸಮತಿ ಉಪಾಧ್ಯಕ್ಷ ರಫೀಕ್, ತಾಪಂ ಇಒ ರವಿಕುಮಾರ್,ಬೆಸ್ಕಾಂ ಎಇಇ ಸುಕುಮಾರ್ ರಾಜು,ಸಮಾಜ ಕಲ್ಯಾಣಾಧಿಕಾರಿ ಅಂಜಲಿ ಸೇರಿದಂತೆ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಇದ್ದರು.

PREV