ಕಷ್ಟದಲ್ಲಿ ಬೆಳೆದವರು ಇನ್ನೊಬ್ಬರ ಕಷ್ಟಕ್ಕೆ ನೆರವಾಗಿ: ಶ್ರೀ ಪ್ರತಿಷ್ಠಾನಮ್‌ನ ಶ್ರೀಧರ ಭಟ್

KannadaprabhaNewsNetwork | Published : Apr 21, 2025 12:56 AM

ಸಾರಾಂಶ

ಕಷ್ಟದಲ್ಲಿ ಬೆಳೆದವರು ವಿಕಾಸ ಹೊಂದಿದಾಗ ಇನ್ನೊಬ್ಬರ ಕಷ್ಟಕ್ಕೆ ನೆರವಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಪ್ರತಿಷ್ಠಾನಮ್ ಮೂಲಕ ಹಲವು ಕಾರ್ಯಕ್ರಮ, ಸೇವೆಗಳನ್ನು ಮಾಡುತ್ತಿದ್ದೇವೆ ಎಂದು ಶ್ರೀ ಪ್ರತಿಷ್ಠಾನಮ್ ಕಾರ್ಯದರ್ಶಿ ಶ್ರೀಧರ ಭಟ್ ಹೇಳಿದರು.

ಸಮರ್ಪಣೆ, ಸಮ್ಮಾನ, ಗೀತ ರಾಮಾಯಣ

ಕನ್ನಡಪ್ರಭ ವಾರ್ತೆ ಸೊರಬ

ಕಷ್ಟದಲ್ಲಿ ಬೆಳೆದವರು ವಿಕಾಸ ಹೊಂದಿದಾಗ ಇನ್ನೊಬ್ಬರ ಕಷ್ಟಕ್ಕೆ ನೆರವಾಗಬೇಕು. ಈ ನಿಟ್ಟಿನಲ್ಲಿ ಶ್ರೀ ಪ್ರತಿಷ್ಠಾನಮ್ ಮೂಲಕ ಹಲವು ಕಾರ್ಯಕ್ರಮ, ಸೇವೆಗಳನ್ನು ಮಾಡುತ್ತಿದ್ದೇವೆ ಎಂದು ಶ್ರೀ ಪ್ರತಿಷ್ಠಾನಮ್ ಕಾರ್ಯದರ್ಶಿ ಶ್ರೀಧರ ಭಟ್ ಹೇಳಿದರು.

ತಾಲೂಕಿನ ತಲಕಾಲಕೊಪ್ಪ ಗ್ರಾಮದ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಪ್ರತಿಷ್ಠಾನಮ್ ಹೊರಬೈಲು ವತಿಯಿಂದ ವೇ. ಕೆ.ಎನ್.ಶ್ರೀನಿವಾಸ ಭಟ್ ಸ್ಮರಣಾರ್ಥ ಹಮ್ಮಿಕೊಂಡ ಸಮರ್ಪಣೆ-ಸಮ್ಮಾನ-ಗೀತರಾಮಾಯಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನೂ ದೇವ, ಋಷಿ, ತಂದೆ ಎನ್ನುವ ಮೂರು ಋಣಗಳಿಂದ ಬಂಧಿತನಾಗಿರುತ್ತಾನೆ. ದೇಹ ಸಂಸ್ಕಾರ ಕೊಡುವ ತಂದೆ-ತಾಯಿಗಳು ಮನುಷ್ಯ ಜೀವಿತದ ಅಂತಿಮ ಗುರಿ ಪಡೆಯಲಿಕ್ಕೆ ಬೇಕಾದ ಜ್ಞಾನ, ಸಂಪತ್ತನ್ನು ಅನುಗ್ರಹಿಸುವ ಋಷಿಗಳು. ಅವರ ಚಿಂತನೆಗಳನ್ನು ಸದಾ ಮೈಗೂಡಿಸಿಕೊಳ್ಳಬೇಕು ಎಂದರು.

ಚರಂತಿ ಹೊಸಕೊಪ್ಪದ ಕವಿ ಕೆ.ಅನಂತರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಡತನದ ಮಧ್ಯೆಯೂ ಶ್ರೀನಿವಾಸ್ ಭಟ್ ಸ್ವಾಭಿಮಾನ, ಸಂಪ್ರೀತಿಯ ಜೀವನ ನಡೆಸುತ್ತಿದ್ದರು ಎಂದರು.

ವಿಶ್ರಾಂತ ವೇದಚಾರ್ಯ ಪುಟ್ಟಯ್ಯ ನಾರಾಯಣ ಭಟ್ ಮತ್ತಿಘಟ್ಟ, ಕೃಷಿ ತಜ್ಞ ಎಚ್.ವಿ.ಪ್ರಭಾಕರ ರಾವ್ ಹೊಸಬಾಳೆ, ಪಾರಂಪರಿಕ ವೈದ್ಯೆ ಸುಮನಾ ಮಳಲಗದ್ದೆ, ಹಿರಿಯ ಜ್ಯೋತಿಷಿ ಬಿ.ಜಿ.ಚಕ್ರಪಾಣಿ ರಾವ್, ಯಕ್ಷ ಭಾಗವತ ಎ.ಎಸ್.ಮಹಾಬಲಗಿರಿ ರಾವ್ ಅವರನ್ನು ಸನ್ಮಾನಿಸಲಾಯಿತು.

ನಿವೃತ್ತ ವೈದ್ಯ ಡಾ.ಟಿ.ಆರ್.ತಿಮ್ಮಪ್ಪ, ಪ್ರಗತಿಪರ ಕೃಷಿಕ ಸೀತಾರಾಮಯ್ಯ, ಸಾಗರದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಉಪಾಧ್ಯಕ್ಷ ಸ್ವಾಮಿದತ್ತ, ನಿವೃತ್ತ ಯೋಧ ಕೆ.ಎನ್.ಪ್ರಕಾಶ್ ಕೆರೆಕೊಪ್ಪ, ಜೇನು ಉದ್ಯಮಿ ಟಿ.ಕೆ.ವಿಘ್ನೇಶ್ ಮಾತನಾಡಿದರು.

ಶ್ರೀಪ್ರತಿಷ್ಠಾನಮ್ ಅಧ್ಯಕ್ಷೆ ಸಾವಿತ್ರಿ ಶ್ರೀನಿವಾಸ ಭಟ್, ಟಿ.ಎಂ. ಲಕ್‌ಮೀಶ, ವಿ.ಅಶೋಕ್ ಹೊಸಬಾಳೆ, ಸೌಮ್ಯ ಹೆಗಡೆ, ಸಾಕ್ಷಿ ಹೆಗಡೆ ಇತರರು ಇದ್ದರು.

ಶ್ರೀಪಾದ ಭಟ್ ಕಡತೋಕ ಸಂಗಡಿಗರು ಮರ್ಯಾದಾ ಪುರುಷೋತ್ತಮನ ಪುಣ್ಯ ಕಥನ ಕನ್ನಡ ಗೀತ ರಾಯಾಯಣ ಅನಾವರಣಗೊಳಿಸಿದರು.

Share this article