ತೆರಿಗೆ ಕಟ್ಟುವವರು ಹಿಂದೂಗಳು, ಮಜಾ ಉಡಾಯಿಸುವವರು ಅನ್ಯರು: ಅನಂತಕುಮಾರ ಹೆಗಡೆ

KannadaprabhaNewsNetwork |  
Published : Mar 05, 2024, 01:37 AM ISTUpdated : Mar 05, 2024, 01:38 AM IST
14121155 | Kannada Prabha

ಸಾರಾಂಶ

ರಾಜ್ಯದಲ್ಲಿ ಪ್ರಾಮಾಣಿಕ ರೀತಿಯಲ್ಲಿ ಹಿಂದೂಗಳು ಶೇ. 99.99ರಷ್ಟು ತೆರಿಗೆಯನ್ನು ಸರ್ಕಾರಕ್ಕೆ ಭರಣ ಮಾಡುತ್ತಾರೆ. ಆದರೆ ಈ ತೆರಿಗೆ ಹಣದಿಂದ ಮಜಾ ಉಡಾಯಿಸುವವರು ಬೇರೆಯವರು.

ಭಟ್ಕಳ:

ರಾಜ್ಯದಲ್ಲಿ ಪ್ರಾಮಾಣಿಕ ರೀತಿಯಲ್ಲಿ ಹಿಂದೂಗಳು ಶೇ. 99.99ರಷ್ಟು ತೆರಿಗೆಯನ್ನು ಸರ್ಕಾರಕ್ಕೆ ಭರಣ ಮಾಡುತ್ತಾರೆ. ಆದರೆ ಈ ತೆರಿಗೆ ಹಣದಿಂದ ಮಜಾ ಉಡಾಯಿಸುವವರು ಬೇರೆಯವರು ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದರು.ಮುರ್ಡೇಶ್ವರದಲ್ಲಿ ಸೋಮವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂಗಳ ತೆರಿಗೆ ಹಣ ಹಾಗೂ ದೇವಸ್ಥಾನಕ್ಕೆ ನೀಡಿದ ಕಾಣಿಕೆಯನ್ನು ಬೇರೆಯವರು ಉಪಯೋಗಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹಿಂದೂಗಳು ನಮ್ಮ ತೆರಿಗೆ ನಮ್ಮ ಹಕ್ಕು ಆಂದೋಲನ ನಡೆಸುವುದು ಅನಿವಾರ್ಯವಾಗುಬಹುದು ಎಂದರು.ತೆರಿಗೆ ನೀಡುವುದು ಇಸ್ಲಾಂನಲಿ ಹರಾಮ್ ಎಂದು ತಿಳಿಯಲಾಗಿದೆ. ಒಂದೊಮ್ಮೆ ಕೊಟ್ಟರೆ ಅದು ಶರಿಯಾ ಕಾನೂನಿನ ಉಲ್ಲಂಘನೆಯಾಗಿದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲೀಕರಣದಿಂದಾಗಿ ನಗದು ವ್ಯವಹಾರ ಕಡಿಮೆ ಆದ ಕಾರಣ ಮುಸ್ಲಿಂರು ಬಲವಂತವಾಗಿ ಅಲ್ಪಸ್ವಲ್ಪ ತೆರಿಗೆ ಕಟ್ಟುವಂತಾಗಿದೆ ಎಂದು ಹೇಳಿದರು.ಇತ್ತೀಚಿಗೆ ಹಿಂದೂಗಳಲ್ಲಿ ವಿವಾಹ ವಿಚ್ಛೇದನ ಅಧಿಕವಾಗಿದೆ. ವಿದ್ಯಾವಂತರಲ್ಲಿಯೇ ಇದು ಹೆಚ್ಚಿದೆ. ಇದಕ್ಕೆ ಕಾರಣ ಅಂದು ರಾಜೀವ ಗಾಂಧಿ ಅವರು ಜಾರಿಗೆ ತಂದಂತಹ ಎಚ್‌ಆರ್‌ಸಿ ಕಾನೂನು. ಮುಸ್ಲಿಂರಿಗೆ ಮತ್ತು ಕ್ರಿಶ್ಚಿಯನ್ನರನ್ನು ಈ ಕಾನೂನಿಂದ ಹೊರಗಿರಿಸಿ ಹಿಂದೂಗಳಿಗೆ ಮಾತ್ರ ವಿವಾಹ ವಿಚ್ಛೇದನ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿತ್ತು. ಇದು ಹಿಂದೂಗಳನ್ನು ವ್ಯವಸ್ಥಿತವಾಗಿ ಒಡೆಯಲು ಕಾಂಗ್ರೆಸ್ ಮಾಡಿದ ಕುತಂತ್ರವಾಗಿದೆ ಎಂದರು.ಭಾಷಣದ ಮಧ್ಯೆ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಮುಖ್ಯಮಂತ್ರಿಯನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು, ರಾಜ್ಯ ಸರ್ಕಾರದ ತುಷ್ಟೀಕರಣ ರಾಜಕಾರಣದಿಂದ ಹಿಂದೂಗಳು ಇದರ ಫಲ ಅನುಭವಿಸುವಂತಾಗಿದೆ ಎಂದರು. ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮಂಡಳ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಪ್ರಮುಖರಾದ ಸುಬ್ರಾಯ ದೇವಾಡಿಗ, ಶ್ರೀಕಾಂತ ನಾಯ್ಕ, ರವಿ ನಾಯ್ಕ ಜಾಲಿ ಮುಂತಾದವರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ