ಕನ್ನಡಪ್ರಭ ವಾರ್ತೆ ಬೆಳಗಾವಿ
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ವಿವಿಧ ಸಿಇಎನ್ ಅಪರಾಧ ಠಾಣೆಗಳಲ್ಲಿ 2023ರಿಂದ ಈವರೆಗೆ 3 ಸಾವಿರಕ್ಕೂ ಅಧಿಕ ಮೊಬೈಲ್ ಕಳುವಾದ ಮತ್ತು ಕಳೆದುಹೋದ ಬಗ್ಗೆ ಪ್ರಕರಣ ದಾಖಲಾಗಿದ್ದವು. ಈ ಪೈಕಿ ಈಗಾಗಲೇ 1 ಸಾವಿರಕ್ಕೂ ಅಧಿಕ ಮೊಬೈಲ್‌ಗಳನ್ನು ವಶಕ್ಕೆ ಪಡೆದು, ಮಾಲೀಕರಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದರು.
ಅಥಣಿ, ಚಿಕ್ಕೋಡಿ, ರಾಮದುರ್ಗ, ಗೋಕಾಕ ಮತ್ತು ಬೈಲಹೊಂಗಲ ಉಪ ವಿಭಾಗಗಳಲ್ಲಿ ಕಳುವಾಗಿದ್ದ ಮತ್ತು ಕಳೆದುಹೋಗಿದ್ದ ಮೊಬೈಲ್ ವಶಕ್ಕೆ ಪಡೆದು, ಮಾಲೀಕರಿಗೆ ವಿತರಿಸುತ್ತಿದ್ದೇವೆ. ಈ ತಿಂಗಳಲ್ಲಿ ಜಿಲ್ಲೆಯಲ್ಲಿ 300ಕ್ಕೂ ಅಧಿಕ ಫೋನ್‌ಗಳನ್ನು ಮಾಲೀಕರಿಗೆ ಹಸ್ತಾಂತರಿಸಲಿದ್ದೇವೆ. ಫೋನ್ ಕಳೆದುಹೋಗಿದ್ದರೆ ಅಥವಾ ಕಳುವಾಗಿದ್ದರೆ, ಜನರು ಸಿಇಐಆರ್ ಪೋರ್ಟಲ್‌ನಲ್ಲಿ ದೂರು ದಾಖಲಿಸುತ್ತಾರೆ. ಅದನ್ನು ಆಧರಿಸಿ ತನಿಖೆ ಕೈಗೊಳ್ಳುತ್ತೇವೆ. ಆ ಫೋನ್‌ಗಳಲ್ಲಿ ಯಾರಾದರೂ ತಮ್ಮ ಸಿಮ್ ಕಾರ್ಡ್ ಹಾಕಿದ ತಕ್ಷಣ ನಮಗೆ ಮಾಹಿತಿ ಸಿಗುತ್ತದೆ. ಅವರಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ, ಫೋನ್ ಹಿಂತಿರುಗಿಸುವಂತೆ ಕೇಳುತ್ತೇವೆ ಎಂದರು.-------
ವಂಚಿಸಿದ್ದ ₹1 ಲಕ್ಷ ನಗದು ಜಪ್ತಿ
ಸಂತೋಷ ತಮಗೆ ಕರೆ ಮಾಡಿ ಹಣಕಾಸು ಸಂಸ್ಥೆಯ ಮೂಲಕ ಸಾಲ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದ. ಇದಕ್ಕಾಗಿ ಕ್ಯೂಆರ್ ಕೋಡ್ ಮೂಲಕ ಮೊದಲ ಕಂತಿನ ಹಣ ತಮಗೆ ಕಳುಹಿಸುವಂತೆ ಹೇಳಿದ್ದ. ಅದನ್ನು ನಂಬಿ ₹ 5,150 ಕಳುಹಿಸಿ ವಂಚನೆಗೆ ಒಳಗಾಗಿದ್ದೇನೆ ಎಂದು ಸವದತ್ತಿ ತಾಲೂಕಿನ ರುದ್ರಾಪುರ ತಾಂಡೆ ನಿವಾಸಿ ಸಕ್ಕುಬಾಯಿ ಲಮಾಣಿ ಪೊಲೀಸರಿಗೆ ದೂರು ನೀಡಿದ್ದರು. ಈತ 17 ಜನರಿಗೆ ₹2.17 ಲಕ್ಷ ವಂಚಿಸಿರುವುದು ಬೆಳಕಿಗೆ ಬಂದಿದೆ ಎಂದು ಮಾಹಿತಿ ನೀಡಿದರು.
ಬಾಕ್ಸ್
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೇ ಸುಮಾರು 1,400 ಶಂಕಿತ ಖಾತೆಗಳು ಬಳಕೆಯಲ್ಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದರು. ಇಂಥ ಖಾತೆಗಳಿಗೆ, ಸೈಬರ್ ವಂಚಕರು ಮೊದಲು ಹಣ ಹಾಕಿಸಿಕೊಂಡು, ನಂತರ ಇತರೆ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಇಂಥ ಮೂರು ಪ್ರಕರಣಗಳಲ್ಲಿ ಪ್ರಕರಣ ದಾಖಲಿಸಿದೆ. ಆರೋಪಿಗಳಾದ ನಿಪ್ಪಾಣಿಯ ಶುಭಂ ಲಕ್ಕನ್ನವರ, ಅಮಿತ ಶಿಂಧೆ, ರಾಹುಲ ಹಂಚನಾಳ, ಅಕ್ಷಯ ಪಸರೆ ಮತ್ತು ಗಜಾನನ ಧರ್ಮೋಡೆ ಎಂಬುವರು, ವಿವಿಧ ಬ್ಯಾಂಕ್‌ಗಳಲ್ಲಿ ಐದು ಖಾತೆ ತೆರೆದು ಬೇರೆ ರಾಜ್ಯಗಳ ಸೈಬರ್ ವಂಚಕರಿಗೆ ಬಾಡಿಗೆಗೆ ನೀಡಿದ್ದರು. ಅವರ ಖಾತೆಗಳಲ್ಲಿ ₹46.12 ಲಕ್ಷ ವಹಿವಾಟು ನಡೆದಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾ ಸಿಇಎನ್ ಉಪ ಪೊಲೀಸ್ ವರಿಷ್ಠಾಧಿಕಾರಿ ವೀರೇಶ ದೊಡಮನಿ, ಇನ್‌ಸ್ಪೆಕ್ಟರ್ ಸುನೀಲಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಜರಿದ್ದರು.