ಬೆಳೆ ಹಾನಿಗಾಗಿ ರೈತರಿಗೆ ನೀಡಿಕೆ । ಕೇಂದ್ರ ಹಾಗೂ ರಾಜ್ಯ ಸರ್ಕಾರ ಕ್ರಮ । ಮೊದಲ ಹಂತದಲ್ಲಿ ೩೨,೪೪೪ ರೈತರ ಖಾತೆಗೆ ಜಮೆನಂದನ್‌ಪುಟ್ಟಣ್ಣ
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದ ಬೆಳೆ ಹಾನಿಗಾಗಿ ರೈತರಿಗೆ ಪರಿಹಾರ ಹಣ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಿದ್ದು ತಾಲೂಕಿಗೆ ೩.೮ ಕೋಟಿ ರುಪಾಯಿ ಪರಿಹಾರ ಬಿಡುಗಡೆ ಮಾಡಿದ್ದು ಪಹಣಿ ಹೊಂದಿರುವ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗಲಿದೆ.
ತಾಲೂಕಿನಲ್ಲಿ ಪೊರೀಟಿಸ್ ಐಡಿ ಹೊಂದಿರುವ ೭೨,೫೫೪ ಮಂದಿಯಲ್ಲಿ ಈಗಾಗಲೆ ಮೊದಲ ಹಂತದಲ್ಲಿ ಜಿಲ್ಲಾಧಿಕಾರಿ ಅನುಮೋದನೆ ನೀಡಿರುವ ೩೨,೪೪೪ ಪಹಣಿ ಹೊಂದಿರುವ ರೈತರಿಗೆ ಬ್ಯಾಂಕ್ ಖಾತೆಗೆ ಈಗಾಗಲೆ ನೇರವಾಗಿ ಹಣ ಜಮೆಯಾಗಿದೆ, ಇನ್ನು ೪೦,೧೧೦ ರೈತರಿಗೆ ಪರಿಹಾರ ಹಣ ಜಮೆಯಾಗಬೇಕಾಗಿದೆ, ಇವರಲ್ಲಿ ೬,೫೧೬ ಪಹಣಿಯಲ್ಲಿನ ರೈತರು ವಿವಿ ಬೆಳೆ ಮಾಡಿದ್ದು ಇದಕ್ಕೆ ಹಣ ಜಮೆ ಮಾಡಲು ಗ್ರಾಮ ಲೆಕ್ಕಾಧಿಕಾರಿಗಳ ಲಾಗಿನ್ ಮೂಲಕ ಸರಿ ಪಡಿಸಬೇಕಾಗಿದೆ,ತಾಲೂಕಿನ ಬಾಗೂರು, ಶ್ರವಣಬೆಳಗೊಳ, ಹಿರೀಸಾವೆ, ನುಗ್ಗೇಹಳ್ಳಿ, ಕಸಬಾ ಹಾಗೂ ದಂಡಿಗನಹಳ್ಳಿ ತೀವ್ರ ಬಟ್ಟಿಗೆ ಸೇರಿದ್ದು ಎಲ್ಲಾ ಹೋಬಳಿಯ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ, ಶ್ರವಣಬೆಳಗೊಳ ಹಾಗೂ ಕಸಬಾ ಹೋಬಳಿಯಲ್ಲಿನ ರೈತರಿಗೂ ಪರಿಹಾರ ಹಣ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗಲಿದೆ.
ಹೋಬಳಿವಾರು ಬೆಳೆಹಾನಿ ವಿವರ:ಪ್ರಸಕ್ತ ವರ್ಷ ಮುಂಗಾರಿನಲ್ಲಿ ೩೯,೦೮೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಮಳೆ ಅಭಾವದಿಂದ ೨೫,೫೦೦ ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಬೆಳೆ ಹಾನಿಯಾಗಿದೆ. ಕಸಬಾ ಹೋಬಳಿಯಲ್ಲಿ ೩,೯೫೦ ಹೆಕ್ಟೇರ್ ಪ್ರದೇಶ, ಹಿರೀಸಾವೆ-೪,೯೫೦, ದಂಡಿಗನಹಳ್ಳಿ-೩,೮೫೦, ಬಾಗೂರು-೪,೦೦೦, ಶ್ರವಣಬೆಳಗೊಳ-೩,೮೫೦, ನುಗ್ಗೇಹಳ್ಳಿ-೪,೯೦೦ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ವರದಿ ತಯಾರಿಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ಕೇಂದ್ರದಿಂದ ಪರಿಹಾರ ಬಂದಿಲ್ಲ:ರಾಜ್ಯ ಸರ್ಕಾರ ತಾಲೂಕಿನ ಬೆಳೆ ಹಾನಿಗೆ ಇನ್‌ಪುಟ್ ಸಬ್ಸಿಡಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿಯಲ್ಲಿ ಆರ್ಥಿಕ ನೆರವು ನಿಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದು ಕೇಂದ್ರದಿಂದ ಪರಿಹಾರ ಹಣ ನೀಡಬೇಕಾಗಿದೆ. ಕೇಂದ್ರ ಸರ್ಕಾರದ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿ ಅನುಸಾರ ಶೇ.೩೩ ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಅರ್ಹ ರೈತರಿಗೆ ಬೆಳೆಹಾನಿ ಪರಿಹಾರ ನೀಡಿದೆ, ಸದ್ಯ ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಇನ್ನೂ ಪರಿಹಾರದ ಅನುದಾನ ಬಿಡುಗಡೆಯಾಗಿಲ್ಲ.
ರಾಜ್ಯದಿಂದ ಪರಿಹಾರ:ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಬೆಳೆ ಹಾನಿ ಪರಿಹಾರದ ಎರಡು ಕಂತುಗಳಲ್ಲಿ ಅಥವಾ ಬೆಳೆ ಹಾನಿ ಪರಿಹಾರವಾಗಿ ಅರ್ಹತೆಗೆ ಅನುಗುಣವಾಗಿ ಪ್ರತಿ ಅರ್ಹ ರೈತರಿಗೆ ಗರಿಷ್ಠ ೨ ಸಾವಿರ ರು. ಪರಿಹಾರವಾಗಿ ಪಾವತಿಸಲು ಸರ್ಕಾರ ಮುಂದಾಗಿದೆ.
ಕೃಷಿ ಮಂತ್ರಿ ಕೃ?ಬೈರೇಗೌಡ ಜೊತೆ ದೆಹಳಿಗೆ ತೆರಳಿ ರಾಜ್ಯದಲ್ಲಿ ಬರಗಾಲದ ಬಗ್ಗೆ ಮಾಹಿತಿ ನೀಡಲಾಗಿದೆ. ಆದರೂ ಕೇಂದ್ರ ಸರ್ಕಾರ ನಯಾಪೈಸ ಪರಿಹಾರ ಹಣ ಬಿಡುಗಡೆ ಮಾಡಿಲ್ಲ.ಎಂ.ಎ.ಗೋಪಾಲಸ್ವಾಮಿ, ಮಾಜಿ ಎಂಎಲ್‌ಸಿ
ಸರ್ಕಾರ ಬರಗಾಲದ ಪರಿಹಾರ ಹಣ ಬಿಡುಗಡೆ ಮಾಡಿದ್ದು ಅದನ್ನು ಈಗಾಗಲೇ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ, ತಪ್ಪಾಗಿರುವವರ ಮಾಹಿತಿ ಸರಿಪಡಿಸಿ ಅವರಿಗೂ ಬರಗಾಲದ ಪರಿಹಾರ ನೀಡಲಾಗುವುದು.ಸಿ.ಎನ್.ಬಾಲಕೃಷ್ಣ, ಶಾಸಕ
ಜಿಲ್ಲಾಧಿಕಾರಿ ಖಾತೆಗೆ ರಾಜ್ಯ ಸರ್ಕಾರ ಬರಪರಿಹಾರದ ಹಣ ಹಾಕಿದ್ದು ಕಳೆದ ಎರಡ್ಮೂರು ದಿವಸದಿಂದ ರೈತರ ಖಾತೆಗೆ ಡಿಸಿ ನೇರವಾಗಿ ಪರಿಹಾರದ ಹಣ ಹಾಕುತ್ತಿದ್ದಾರೆ. ಇನ್ನು ೩೩ ಸಾವಿರ ಮಂದಿಗೆ ಪರಿಹಾರ ಹಣ ಹಾಕುವ ಕೆಲಸ ಎರಡು ದಿವಸದಲ್ಲಿ ಮುಕ್ತಾಯವಾಗಲಿದೆ. ಗೋವಿಂದರಾಜು, ತಹಸೀಲ್ದಾರ್.ಚನ್ನರಾಯಪಟ್ಟಣ ತಾಲೂಕು ಅಣ್ಣೇನಹಳ್ಳಿ ಗ್ರಾಮದ ಲೋಕಮಾತೆ ತೋಟದಲ್ಲಿ ತೆಂಗಿನ ಮರಗಳಿಗೆ ಬರಗಾಲದ ಹಿನ್ನೆಲೆಯಲ್ಲಿ ಟ್ಯಾಂಕರ್ ಮೂಲಕ ನೀರು ನೀಡುತ್ತಿರುವುದು.