ಭಾಷೆ ಸರಸ್ವತಿಯಾಗಿ ಹರಿಯುತ್ತಿರಬೇಕು: ನಾಡೋಜ ಕೆ.ಪಿ. ರಾವ್‌

KannadaprabhaNewsNetwork |  
Published : Dec 02, 2023, 12:45 AM IST
ಕಟೀಲು ಶಿಕ್ಷಣ ಸಂಸ್ತೆ  ಭ್ರಮರ ನುಡಿ ಹಬ್ಬ | Kannada Prabha

ಸಾರಾಂಶ

ಭಾಷೆ ಎಂಬುದು ಸರಸ್ವತಿಯಂತೆ ಹರಿಯುತ್ತಿರಬೇಕು, ಭಾಷೆಯ ಬಳಕೆ ಉತ್ತಮವಾಗಿರಬೇಕು ಎಂದ ನಾಡೋಜ ಕೆ.ಪಿ. ರಾವ್, ಕಟೀಲು ಕಾಲೇಜಿನಲ್ಲಿ ಮೂರು ದಿನಗಳ ಕಾಲ ನುಡಿಹಬ್ಬ

ಕನ್ನಡಪ್ರಭ ವಾರ್ತೆ ಮೂಲ್ಕಿ

ಹಿಮಾಲಯದಲ್ಲಿ ಹುಟ್ಟಿದ ನೀರು ರೈತನ ಗದ್ದೆಗೆ ಹರಿದು ಫಲ ಕೊಡುವಂತೆ, ಭಾಷೆ ಸರಸ್ವತಿಯಾಗಿ ಹರಿಯುತ್ತಿರಬೇಕು, ಜೊತೆಗೆ ಭಾಷೆಯ ಉಪಯೋಗ ಉತ್ತಮವಾಗಿರಬೇಕು ಎಂದು ನಾಡೋಜ ಕೆ.ಪಿ. ರಾವ್ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಭ್ರಮರ ಇಂಚರ ನುಡಿಹಬ್ಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಟೀಲು ಪದವಿ ಕಾಲೇಜಿನಿಂದ ಸಮ್ಮೇಳನ ನಡೆಯುವ ಪದವಿ ಪೂರ್ವ ಕಾಲೇಜಿನವರೆಗೆ ಮೆರವಣಿಗೆ ನಡೆಯಿತು, ಮೆರವಣಿಗೆಯಲ್ಲಿ ಭಗವದ್ಗೀತೆಯನ್ನು ಪಲ್ಲಕ್ಕಿಯಲ್ಲಿ ಹೊತ್ತುತಂದು ವಿಶೇಷ ಗೌರವ ಸಲ್ಲಿಸಲಾಯಿತು. ವಿವಿಧ ವೇಷಗಳು, ವಿದ್ಯಾರ್ಥಿಗಳು ಮೆರವಣಿಗೆಗೆ ಸಾಥ್ ನೀಡಿದರು. ಹಳೆವಿದ್ಯಾರ್ಥಿ ಶೇಖರ ಪೂಜಾರಿ ಮೆರವಣಿಗೆಯನ್ನು ಉದ್ಘಾಟಿಸಿದರು. ಜನಪದ ವಸ್ತುಸಂಗ್ರಹಾಲಯವನ್ನು ಆನಂದ ಸಿ. ಕುಂದರ್ ಉದ್ಘಾಸಿದರು, ಕಾರ್ಯಕ್ರಮದಲ್ಲಿ ಸಾಹಿತಿ ಪಾದೆಕಲ್ಲು ವಿಷ್ಣು ಭಟ್, ಪವನಜ. ದೇವಳದ ಆಡಳಿತ ಮಂಡಳಿ ಅಧ್ಯಕ್ಣ ಸನತ್ ಕುಮಾರ್‌ ಶೆಟ್ಟಿ, ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲೋಕಯ್ಯ ಸಾಲಿಯಾನ್, ಕಿರಣ್ ಕುಮಾರ್ ಶೆಟ್ಟಿ, ಗ್ರೆಗರಿನ್ ತಾವ್ರೋ, ಉಪಾಧ್ಯಕ್ಷರಾದ ಭಾರತಿ, ಸುರೇಶ್, ಬಾಲಕೃಷ್ಣ , ಪದವಿ ಕಾಲೇಜಿನ ಪ್ರಾಂಶುಪಾಲ ಕೃಪ್ಣ ಕಾಂಚಾನ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಕುಸುಮಾವತಿ, ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸರೋಜಿನಿ, ಅಂಗ್ಲ ಮಾದ್ಯಮ ಶಾಲೆಯ ಮುಖೋಪದ್ಯಾಯ ಚಂದ್ರಶೀಖರ ಭಟ್ ಮತ್ತಿತರರು ಉಪಸ್ಥಿತರಿದ್ದರು.ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು, ಡಾ. ಕೃಷ್ಣ ವಂದಿಸಿದರು. ಉಪಪ್ರಾಶುಂಪಾಲ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!