ವಾಣಿಜ್ಯ ವಿಭಾಗಕ್ಕೆ ಮೂವರು ಫಸ್ಟ್‌ ರ್‍ಯಾಂಕ್‌

KannadaprabhaNewsNetwork |  
Published : Apr 10, 2026, 01:45 AM IST
ವಿದ್ಯಾರ್ಥಿಗಳು | Kannada Prabha

ಸಾರಾಂಶ

ವಾಣಿಜ್ಯ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ ಹಂಚಿಕೊಂಡಿದ್ದು ಅವರೆಲ್ಲ ಹೆಣ್ಮಕ್ಕಳೇ ಎಂಬುದು ವಿಶೇಷ.

ಹುಬ್ಬಳ್ಳಿ:

ವಾಣಿಜ್ಯ ವಿಭಾಗದಲ್ಲಿ ಮೂವರು ಪ್ರಥಮ ಸ್ಥಾನ ಹಂಚಿಕೊಂಡಿದ್ದು ಅವರೆಲ್ಲ ಹೆಣ್ಮಕ್ಕಳೇ ಎಂಬುದು ವಿಶೇಷ.

ಕೆಎಲ್‌ಇ ಕಾಲೇಜ್‌ ಆಫ್‌ ಕಾಮರ್ಸ್‌ನ ವಿದ್ಯಾರ್ಥಿನಿ ಹರ್ಷಿತಾ ಸಿದ್ದಪ್ಪ ನಾಣ್ಯದ 594 ಅಂಕ ಪಡೆದಿದ್ದು ಅರ್ಥಶಾಸ್ತ್ರ, ಬಿಜಿನೆಸ್‌ ಸ್ಟಡಿಸ್‌, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ದಲ್ಲಿ 100ಕ್ಕೆ 100ರಷ್ಟು, ಕನ್ನಡ 98, ಇಂಗ್ಲಿಷ್‌ 96 ಅಂಕ ಪಡೆದಿದ್ದಾಳೆ. ಫಾತೀಮಾ ಪಿಯು ಕಾಲೇಜ್‌ನ ವಿದ್ಯಾರ್ಥಿನಿ ಐನಾಜ್‌ಬೇಗಂ ಅಬ್ದುಲ್‌ ರಜಾಕ್‌ ಅದೋನಿ ಕೂಡ 594 ಅಂಕ ಪಡೆದಿದ್ದು ಹಿಂದಿ, ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಎಕನಾಮಿಕ್ಸ್‌ನಲ್ಲಿ 100ಕ್ಕೆ 100 ಹಾಗೂ ಇಂಗ್ಲಿಷ್‌ 95, ಬಿಜಿನೆಸ್‌ ಸ್ಟಡಿಸ್‌ನಲ್ಲಿ 99 ಅಂಕ ಪಡೆದಿದ್ದಾಳೆ. ಇಲ್ಲಿನ ಜೆಜಿ ಕಾಮರ್ಸ್‌ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಸಿದ್ದಪ್ಪ ಡಂಬಳ ಕೂಡ 594 ಅಂಕ ಪಡೆದಿದ್ದಾಳೆ. ಲೆಕ್ಕಶಾಸ್ತ್ರ, ಬಿಜಿನೆಸ್‌ ಸ್ಟಡೀಸ್‌, ಸಂಖ್ಯಾಶಾಸ್ತ್ರ ವಿಷಯಗಳಲ್ಲಿ 100ಕ್ಕೆ 100, ಹಿಂದಿ, ಎಕನಾಮಿಕ್ಸ್‌ನಲ್ಲಿ 99, ಇಂಗ್ಲಿಷ್‌ 96 ಅಂಕ ಪಡೆದಿದ್ದಾಳೆ. ಈ ಮೂವರು ಫಸ್ಟ್‌ ರ್‍ಯಾಂಕ್‌ನ್ನು ಹಂಚಿಕೊಂಡಿದ್ದಾರೆ.

ಇನ್ನು ಕೆಎಲ್‌ಇ ಕಾಲೇಜ್‌ ಆಫ್‌ ಕಾಮರ್ಸ್‌ನ ವಿದ್ಯಾರ್ಥಿನಿ ಸಾಚಿ ಗಣೇಶ ಖಟವಟೆ 591 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಸಂಖ್ಯಾಶಾಸ್ತ್ರ, ಬಿಜಿನೆಸ್ಟ್‌ ಸ್ಟಡೀಸ್‌, ಅಕೌಂಟೆನ್ಸಿ, ಎಕನಾಮಿಕ್ಸ್‌ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಪಡೆದರೆ, ಹಿಂದಿ 96, ಇಂಗ್ಲಿಷ್‌- 95 ಅಂಕ ಪಡೆದಿದ್ದಾಳೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಲ ಬಿಚ್ಚಿದರೆ ಹುಷಾರು!
ದ್ವಿತೀಯ ಪಿಯುಯಲ್ಲಿ ಗದಗ ಜಿಲ್ಲೆಗೆ 30ನೇ ಸ್ಥಾನ