ಕನ್ನಡಪ್ರಭ ವಾರ್ತೆ ಕಲಬುರಗಿ
ಹಿಂದೆ ತಾವು ವಿಧಾನ ಪರಿಷತ್ ಶಾಸಕ ಮತ್ತು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿಯೂ ವಿಶೇಷ ಕಾಳಜಿ ವಹಿಸಿ ತ್ರಿಚಕ್ರ ವಾಹನ ವಿತರಣೆ ಮಾಡಿದ್ದೆ. ಈಗಲೂ ಸಹ ಅದನ್ನು ಮುಂದುವರೆಸಿದ್ದೇನೆ. ಮುಂದಿನ ಹಂತದಲ್ಲಿ ಉಳಿದ ಅರ್ಹ ವಿಶೇಷಚೇತನರಿಗೆ ವಾಹನ ವಿತರಣೆ ಮಾಡಲಾಗುವುದು. ಬಡವರ ಪರ ಸರ್ಕಾರ ನಮ್ಮದು ಎಂದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕ ತಿಪ್ಪಣ್ಣಪ್ಪ ಕಮಕನೂರ, ಪಂಚ ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರಿ, ಮಹಾನಗರ ಪಾಲಿಕೆ ಸದಸ್ಯರಾದ ರಾಜಕೀಯ ಇನಾಂದಾರ, ರಾಜು ಜಾನೆ, ಶೇಖ್ ಹುಸೇನಿ, ನಿಂಗಮ್ಮ ಕಟ್ಟಿಮನಿ, ರೇಣುಕಾ ಪಿ. ಹೋಳ್ಕರ್. ಲತಾ ರಾಠೋಡ, ಮುಖಂಡರಾದ ನೀಲಕಂಠ ಮೂಲಗೆ, ಲಿಂಗರಾಜ ಕಣ್ಣಿ, ಲಿಂಗರಾಜ ತಾರಫೈಲ್, ಹೀರೋ ಶೋರೂಮ್ ಅಧಿಕಾರಿ ದೇವರಾಜ ಬಿ. ಕುಲಕರ್ಣಿ, ಅಂಗವಿಕಲರ ಕಲ್ಯಾಣ ಇಲಾಖೆಯ ಸಿಬ್ಬಂದಿಗಳಾದ ಪ್ರಕಾಶ ಜಾಧವ, ಅಫಜಲ್, ಮೇಘಾಂಜಲಿ, ಪ್ರಕಾಶ ದ್ಯಾಬೇರಿ, ಪ್ರಕಾಶ ಜಗತಿ ಮತ್ತಿತರಿದ್ದರು.