ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಹಾಗೂ ತಾಲೂಕು ಕಸಾಪ, ಪದಾಧಿಕಾರಿಗಳು ಗ್ರಾಮದ ಹಿರಿಯರು ವಿರಕ್ತಮಠದಲ್ಲಿ ತಿಕೋಟಾ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಿಗೆ ಸಮ್ಮೇಳನದ ಆಹ್ವಾನ ನೀಡಿ ಗೌರವಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಐತಿಹಾಸಿಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದು ಸಂತೋಷವಾಗಿದೆ. ಭಾಷೆ, ನೆಲ-ಜಲ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಕನ್ನಡ ವಿದ್ವಾಂಸ, ಪ್ರವಚನಗಾರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಆಯ್ಕೆ ಸರ್ವಾನುಮತದಿಂದ ಆಗಿದೆ. ತಾಲೂಕಿನ ಸಾಹಿತಿಗಳು ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ. ಸಮ್ಮೇಳನ ಯಶಸ್ವಿಗೊಳಿಸೋಣ. ತಾಲೂಕಿನ ಕನ್ನಡಪರ ಸಂಘಟನೆಗಳು, ಹಿರಿಯರು, ಕಲಾವಿದರು, ಮಾಜಿ ಸೈನಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು ಹಗಲಿರಳು ಶ್ರಮ ಪಡುತ್ತಿದ್ದಾರೆ ಎಂದು ಹೇಳಿದರು.ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಬಿರಾದಾರ ಮಾತನಾಡಿದರು. ಭೀಮು ನಾಟೀಕಾರ, ಸುಜಾತಾ ಬಾಗಲಕೋಟ, ಸುಧಾ ಪಾಟೀಲ, ಸುಧಾ ಹಂಚನಾಳಕರ, ಕಮಲಾಬಾಯಿ, ಅನಸೂಯ ಏಳಂಗಡಿ, ಬಿ.ಎಸ್.ಕುಮಟಗಿ, ವೆಂಕಟೇಶ ಕಪಟಕರ, ಸುನೀಲ ನಾಲಾ, ಶ್ರೀಶೈಲ ಸೋಲಾಪೂರ, ಗಣಪತಿ ಗಳವೆ, ಎ.ಜೆ.ಬೋಸಲೆ, ಹಣಮಂತ ಜಂಬಗಿ, ಮಹಾಂತೇಶ ತೊಂಡಿಕಟ್ಟಿ ಮುಂತಾದವರು ಉಪಸ್ಥಿತರಿದ್ದರು.-------
ಬಾಕ್ಸ್....ಇಂದು ಕನ್ನಡ ನುಡಿ ಹಬ್ಬದ ಸಂಭ್ರಮ
ಮಾ.23ರ ಬೆಳಗ್ಗೆ ಎಂಟು ಗಂಟೆಗೆ ಧ್ವಜಾರೋಹಣ ಜರುಗಲಿದೆ. ಒಂಭತ್ತು ಗಂಟೆಗೆ ಸರ್ವಾಧ್ಯಕ್ಷರ ಮೆರವಣಿಗೆ ಬಸವಣ್ಣನವರ ವೃತ್ತದಿಂದ ತಿಕೋಟಾ ವಾಡೆ ವರೆಗೆ ವಿವಿಧ ವೈವಿಧ್ಯಮಯ ಸಾಂಸ್ಕೃತಿಕ ತಂಡಗಳೊಂದಿಗೆ ವೈಭವದ ಮೆರವಣಿಗೆ ಜರುಗಲಿದೆ.ಸಮ್ಮೇಳನವನ್ನು ಸಚಿವ ಡಾ.ಎಂ.ಬಿ.ಪಾಟೀಲರು ಉದ್ಘಾಟಿಸಲಿದ್ದಾರೆ. ಶಿವಬಸವ ಶಿವಾಚಾರ್ಯ ಹಾಗೂ ಬಾಬು ಮಹಾರಾಜ ಸಾನಿಧ್ಯ ವಹಿಸಲಿದ್ದಾರೆ. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ವಹಿಸಲಿದ್ದಾರೆ.