ಜ.5ರಂದು ಟೈಮ್ ಒಲಂಪಿಯಾಡ್ ಪರೀಕ್ಷೆ: ಗಂಗಾಧರ್

KannadaprabhaNewsNetwork |  
Published : Jan 03, 2025, 12:33 AM IST
2ಕೆಎಂಎನ್ ಡಿ22 | Kannada Prabha

ಸಾರಾಂಶ

ವಿದ್ಯಾರ್ಥಿಗಳು ಒಂದು ದಿನ ಮುಂಚಿತವಾಗಿ ಸಂಸ್ಥೆ ಪ್ರಾಂಶುಪಾಲರನ್ನು ಭೇಟಿ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಂಡು ಭಾನುವಾರ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆ.ಆರ್.ಪೇಟೆ ಪಟ್ಟಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಚನ್ನರಾಯಪಟ್ಟಣ ಟೈಮ್ ಪಿಯು ಕಾಲೇಜು ವತಿಯಿಂದ ಟೈಮ್ ಒಲಂಪಿಯಾಡ್ ಪರೀಕ್ಷೆಯು ಜ.5ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ. ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾಲೇಜುಗಳ ಮುಖ್ಯ ಕಾರ್ಯದರ್ಶಿ ಟೈಮ್ಸ್ ಗಂಗಾಧರ್ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡು ಅತ್ಯುತ್ತಮ ಅಂಕಗಳು ಪಡೆದು ಉತ್ತೀರ್ಣರಾದರೆ 20 ಮಂದಿ ವಿದ್ಯಾರ್ಥಿಗಳಿಗೆ ಶೇ.50 ರಷ್ಟು ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.

ತಾಲೂಕಿನ ವಿದ್ಯಾರ್ಥಿಗಳು ಒಂದು ದಿನ ಮುಂಚಿತವಾಗಿ ಸಂಸ್ಥೆ ಪ್ರಾಂಶುಪಾಲರನ್ನು ಭೇಟಿ ಮಾಡಿ ತಮ್ಮ ಹೆಸರು ನೋಂದಾಯಿಸಿಕೊಂಡು ಭಾನುವಾರ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕೆ.ಆರ್.ಪೇಟೆ ಪಟ್ಟಣದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಈ ವೇಳೆ ಚನ್ನರಾಯಪಟ್ಟಣ ಟೈಮ್ಸ್ ಕಾಲೇಜು ಪ್ರಾಂಶುಪಾಲ ಶ್ರೀಕಂಠ, ಉಪ ಪ್ರಾಂಶುಪಾಲ ಸುನಿಲ್ ಕುಮಾರ್, ಉಪನ್ಯಾಸಕ ನಾಟನಹಳ್ಳಿ ಮನು ಇದ್ದರು.

ಜ.3 ಮತ್ತು 4 ರಂದು ಸಂಕ್ರಾಂತಿ ರಂಗೋತ್ಸವ, ನಾಟಕ ಪ್ರದರ್ಶನ

ಕೆ.ಆರ್.ಪೇಟೆ:

ತಾಲೂಕಿನ ಅಕ್ಕಿಹೆಬ್ಬಾಳು ಸರ್ಕಾರಿ ಪ್ರೌಢಶಾಲಾ ಒಳಾಂಗಣ ಆವರಣದ ರಂಗ ಮಂದಿರದಲ್ಲಿ ಜ.3 ಮತ್ತು 4 ರಂದು ಸಂಕ್ರಾಂತಿ ರಂಗೋತ್ಸವ ಎಂಬ ಶೀರ್ಷಿಕೆಯಲ್ಲಿ ಎರಡು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯಲಿದೆ ಎಂದು ಲೋಕಾಯನ ಸಂಸ್ಥೆ ಸ್ಥಳೀಯ ಸಂಚಾಲಕ ಮೊಹಮ್ಮದ್ ಅಜರುದ್ದೀನ್ ತಿಳಿಸಿದ್ದಾರೆ.

ಲೋಕಾಯನ ಕಲ್ಚರಲ್ ಫೌಂಡೇಶನ್-ಅಕ್ಕಿಹೆಬ್ಬಾಳು, ಹೇಮಾವತಿ ಹೊನ್ನಾರು ವೇದಿಕೆ-ಅಕ್ಕಿಹೆಬ್ಬಾಳು ಮತ್ತು ಧಾತ್ರಿ ರಂಗಸಂಸ್ಥೆ(ರಿ) ಸಿರಿಗೆರೆ ಸಹಯೋಗದಲ್ಲಿ ಜ.3ರ ಬೆಳಗ್ಗೆ 11 ಗಂಟೆಗೆ ಡಾ. ರಾಜಪ್ಪ ದಳವಾಯಿ ಅವರು ರಚನೆ ಮಾಡಿರುವ ಭಾರತದ ಪ್ರಜೆಗಳಾದ ನಾವು (We people of the India) ನಾಟಕವನ್ನು ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ, ಜೈನಹಳ್ಳಿ ವಿದ್ಯಾರ್ಥಿಗಳು ಅಭಿನಯಿಸಿದ್ದಾರೆ. ಈ ವಿಶೇಷ ಪ್ರದರ್ಶನ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದೆ.

ಅದೇ ದಿನ ಸಂಜೆ 7:30ಕ್ಕೆ ಬಿ.ಎಸ್.ಅಶ್ವಥ್ ರಚನೆ ಮಾಡಿರುವ ಶ್ರೀ ಕೃಷ್ಣ ಸಂಧಾನ ನಾಟಕವನ್ನು ಧಾತುರಂಗ ಸಂಸ್ಥೆಯ ಕಲಾವಿದರು ಅಭಿನಯಿಸುತ್ತಿದ್ದಾರೆ. ಜ.4 ರಂದು ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿಗಳಿಗಾಗಿ ಡಾ:ಎಂ.ಬೈರೇಗೌಡ ರಚನೆ ಮಾಡಿರುವ ಸರಸತಿಯಾಗಲೊಲ್ಲೆ ಎಂಬ ನಾಟಕ ಪ್ರದರ್ಶನವಿದೆ. ಅದೇ ದಿನ ಸಂಜೆ 7.30ಕ್ಕೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆ ಮಾಡಿರುವ ಮೋಳಿಗೆ ಮಾರಯ್ಯ ಎಂಬ ನಾಟಕದ ಪ್ರದರ್ಶನವಿದೆ. ಸಾರ್ವಜನಿಕರು ಭಾಗವಹಿಸುವಂತೆ ಕೋರಿದ್ದಾರೆ.

PREV

Recommended Stories

ನೀಲಿ ಮೊಟ್ಟೆ ಇಟ್ಟ ಚನ್ನಗಿರಿಯ ನಾಟಿ ಕೋಳಿ: ಸ್ಥಳೀಯರಲ್ಲಿ ತೀವ್ರ ಕುತೂಹಲ
ಸಿಗಂದೂರಿನಲ್ಲಿ ವಾಟರ್ ಏರೋಡ್ರೋಮ್: ವಿಮಾನ ಟೇಕಾಫ್‌, ಲ್ಯಾಂಡಿಂಗ್‌! ಪ್ರವಾಸೋದ್ಯಮಕ್ಕೆ ಹೊಸ ಹೆಜ್ಜೆ?