ಕನಕಪುರ: ಗ್ರಾಮದಲ್ಲಿ ಅತಿ ವೇಗವಾಗಿ ಹೋಗುತ್ತಿದ್ದಂತಹ ಟಿಪ್ಪರ್ ಉರುಳಿ ಬಿದ್ದ ಪರಿಣಾಮ ಬೆಂಡಗೋಡು ಗ್ರಾಮದಲ್ಲಿ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದರು ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.
ತಾಲೂಕಿನ ಉಯ್ಯಂಬಳ್ಳಿ ಹೋಬಳಿ ಬೆಂಡಗೋಡು ಗ್ರಾಮದಲ್ಲಿ ಶನಿವಾರ ಎಂ ಸ್ಯಾಂಡ್ ತುಂಬಿದ್ದ ಟಿಪ್ಪರ್ ಉರುಳಿ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿ ದೊಡ್ಡ ಅವಘಡ ಸಂಭವಿಸಿದೆ. ಬೆಂಡಗೋಡು ಪಕ್ಕದ ಅಡಿಕೆ ಹಳ್ಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ಮನೆಯ ನಿರ್ಮಾಣಕ್ಕೆ ಎಂ ಸ್ಯಾಂಡ್ ತುಂಬಿಕೊಂಡು ಬೆಂಡುಗೋಡು ಗ್ರಾಮದಲ್ಲಿ ಅತಿ ವೇಗವಾಗಿ ಟಿಪ್ಪರ್ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಟಿಪ್ಪರ್ ಪಲ್ಟಿಯಾದಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ, ಅದರಿಂದ ವಿದ್ಯುತ್ ಕಂಬ ಮುರಿದಿದ್ದು ಮುಂದೆ ಇದ್ದಂತಹ ನಾಲ್ಕೈದು ಕಂಬಗಳು ಉರುಳಿ ವಿದ್ಯುತ್ ತಂತಿಗಳು ತುಂಡಾಗಿ ಮನೆ ಮತ್ತು ರಸ್ತೆಯ ಮೇಲೆ ಬಿದ್ದಿವೆ.ತಂತಿಗಳು ತುಂಡಾಗುತ್ತಿದ್ದಂತೆ ಮನೆಯಲ್ಲಿನ ವಿದ್ಯುತ್ ಉಪಕರಣಗಳು ನಾಶಗೊಂಡಿವೆ, ಅದೃಷ್ಟವಶಾತ್ ರಕ್ಷಣೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದ್ದು ವಿದ್ಯುತ್ ಕಂಬ ಮುರಿದಿದ್ದರಿಂದ ಇಡೀ ಗ್ರಾಮಕ್ಕೆ ಶನಿವಾರ ಸಂಜೆವರೆಗೂ ವಿದ್ಯುತ್ ಕಡಿತವಾಗಿದ್ದು ಬೆಸ್ಕಾಂ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುರಿದಿದ್ದ ವಿದ್ಯುತ್ ಕಂಬಗಳನ್ನು ವಿದ್ಯುತ್ ತಂತಿಗಳನ್ನು ಸರಿಪಡಿಸಿದ್ದಾರೆ.
ಅಪಘಾತ ಮಾಡಿದ್ದ ಟಿಪ್ಪರ್ ಚಾಲಕ ವಿದ್ಯುತ್ ಕಡಿತದಿಂದ ವಿದ್ಯುತ್ ಉಪಕರಣಗಳು ನಾಶಗೊಂಡಿದ್ದರೆ ಅವುಗಳನ್ನು ಬದಲಿಸಿ ಕೊಡುವ ಭರವಸೆ ನೀಡಿದ್ದರಿಂದ ಗ್ರಾಮದಲ್ಲಿ ಸಮಸ್ಯೆ ಪರಿಹಾರಗೊಂಡಿದೆ.ಆರೋಪ:ಮನೇ ನಿರ್ಮಾಣ ಇನ್ನಿತರೆ ಕಾಮಗಾರಿಗಳಿಗೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತಹ ಟಿಪ್ಪರ್‌ಗಳು ಲಾರಿಗಳನ್ನು ಗ್ರಾಮದಲ್ಲಿ ಅತಿ ವೇಗವಾಗಿ ಓಡಿಸಲಾಗುತ್ತದೆ ಎಂದು ಬೆಂಡುಗೋಡು ಗ್ರಾಮದ ಗ್ರಾಮಸ್ಥರು ಆರೋಪಿಸಿದ್ದು ನಿಗಧಿತ ತೂಕಕ್ಕಿಂತ ಹೆಚ್ಚಿನ ತೂಕ, ಓವರ್ ಲೋಡ್ ಹಾಕಿಕೊಂಡು ಹೋಗುತ್ತಾರೆ. ಇದರಿಂದ ಗ್ರಾಮದ ರಸ್ತೆಗಳು ಹಾಳಾಗುತ್ತವೆ, ಅಲ್ಲದೆ ಇಂತಹ ಘಟನೆಗಳು ಸಂಭವಿಸುತ್ತವೆ, ಪೊಲೀಸರು ಇದನ್ನು ತಡೆಗಟ್ಟಿ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆ ಕೆ ಪಿ ಸುದ್ದಿ 03: