ಸೈನಿಕರ ಆತ್ಮಸ್ಥೈರ್ಯಕ್ಕಾಗಿ ತಿರಂಗಾ ಯಾತ್ರೆ

KannadaprabhaNewsNetwork | Published : May 18, 2025 1:18 AM
Follow Us

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಉಗ್ರಗಾಮಿಗಳ ನಿರ್ನಾಮಕ್ಕೆ ಸಂಕಲ್ಪ ಮಾಡಿರುವ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಗರದಲ್ಲಿ ಶನಿವಾರ ತಿರಂಗಾ ಯಾತ್ರೆಯನ್ನು ನಡೆಸಲಾಯಿತು. ಯಾತ್ರೆಯಲ್ಲಿ ನಿವೃತ್ತ ಯೋಧರು, ವಿವಿಧ ಮಠಾಧೀಶರು, ಮಾಜಿ ಶಾಸಕರು, ರಾಜಕೀಯ ಧುರೀಣರು, ರೈತರು, ಮಹಿಳೆಯರು, ಯುವಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿ ರಾಷ್ಟ್ರಾಭಿಮಾನಿಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತ ಆಪರೇಷನ್ ಸಿಂದೂರದಲ್ಲಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ನೀಡಿದರ

ಕನ್ನಡಪ್ರಭ ವಾರ್ತೆ ಸಿಂದಗಿ

ಉಗ್ರಗಾಮಿಗಳ ನಿರ್ನಾಮಕ್ಕೆ ಸಂಕಲ್ಪ ಮಾಡಿರುವ ವೀರ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ನಗರದಲ್ಲಿ ಶನಿವಾರ ತಿರಂಗಾ ಯಾತ್ರೆಯನ್ನು ನಡೆಸಲಾಯಿತು. ಯಾತ್ರೆಯಲ್ಲಿ ನಿವೃತ್ತ ಯೋಧರು, ವಿವಿಧ ಮಠಾಧೀಶರು, ಮಾಜಿ ಶಾಸಕರು, ರಾಜಕೀಯ ಧುರೀಣರು, ರೈತರು, ಮಹಿಳೆಯರು, ಯುವಕರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿ ರಾಷ್ಟ್ರಾಭಿಮಾನಿಗಳು ಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ದೇಶಾಭಿಮಾನದ ಘೋಷಣೆಗಳನ್ನು ಕೂಗುತ್ತ ಆಪರೇಷನ್ ಸಿಂದೂರದಲ್ಲಿ ಪಾಲ್ಗೊಂಡ ಸೈನಿಕರಿಗೆ ನೈತಿಕ ಬೆಂಬಲ ನೀಡಿದರು.ಈ ವೇಳೆ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಯಂಕಂಚಿ ಹಿರೇಮಠದ ಅಭಿನವ ರುದ್ರಮನಿ ಶ್ರೀ, ಆಲಮೇಲದ ಚಂದ್ರಶೇಖರ ಶ್ರೀ, ಬೋರಗಿಯ ತಪೋರತ್ನ ಮಹಾಲಿಂಗೇಶ್ವರ ಶ್ರೀಗಳು, ಸಾರಂಗಮಠದ ಉತ್ತಾರಾಧಿಕಾರಿ ಡಾ.ವಿಶ್ವಪ್ರಭುದೇವ ಶ್ರೀ, ಬಿಜೆಪಿ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ, ಮಾಜಿ ಶಾಸಕ ರಮೇಶ ಭೂಸನೂರ, ಎಮ್.ಎನ್.ಪಾಟೀಲ ಮಾತನಾಡಿ, ನಮ್ಮ ಸೈನಿಕರು ಆಪರೇಷನ್ ಸಿಂದೂರ ಹೆಸರಿನಲ್ಲಿ ಉಗ್ರಗಾಮಿಗಳ ನಿರ್ನಾಮ ಮಾಡಿ ತಕ್ಕಶಾಸ್ತಿ ಮಾಡಿದ್ದಾರೆ. ಹೇಡಿ ಪಾಕಿಸ್ತಾನ ತನ್ನ ನೀಚ ಬುದ್ದಿ ಬೀಡಬೇಕು. ಇಲ್ಲವಾದಲ್ಲಿ ಹಣೆಬರಹ ನೆಟ್ಟಗೆ ಇರುವದಿಲ್ಲ ಎಂದು ಎಚ್ಚರಿಸಿದರು.

ಯಾತ್ರೆಯಲ್ಲಿ ಕನ್ನೋಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮಿಗಳು, ಆದಿಶೇಷ ಮಠದ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು, ಮಾಜಿ ವಿ.ಪ ಸದಸ್ಯ ಅರುಣ ಶಹಾಪೂರ, ಅಶೋಕ ಅಲ್ಲಾಪೂರ, ಬಿಜೆಪಿ ಮುಖಂಡ ಶ್ರೀಶೈಲಗೌಡ ಪಾಟೀಲ ಮಾಗಣಗೇರಿ, ಸಂತೋಷ ಪಾಟೀಲ ಡಂಬಳ, ರಾಚಪ್ಪ ವಾರದ, ಶಿವಪ್ಪ ಗವಸಾನಿ, ಗುರು ತಳವಾರ, ಶ್ರೀಶೈಲ ಯಳಮೇಲಿ, ಶಿವರಾಜ ಪಾಟೀಲ, ಮಲ್ಲು ಪಡಶೆಟ್ಟಿ, ಮಲ್ಲು ಪೂಜಾರಿ, ಪ್ರಕಾಶ ಮುಂಜಿ, ಸಿದ್ರಾಮ ಆನಗೊಂಡ, ಗಿರೀಶ ನಾಗೂರ, ಬಾಬುಗೌಡ ಪಾಟೀಲ, ಎಮ್.ಎಸ್.ಮಠ, ಪ್ರಕಾಶ ಹಿರೇಕುರಬರ, ಮಹಾಂತೇಶ ಸಾತಿಹಾಳ, ಬಸವರಾಜ ಅಳ್ಳಗಿ, ಕುಮಾರ ಮಠ, ಚಂದ್ರಶೇಖರ ಅಮಲಿಹಾಳ, ಚೇತನ ರಾಂಪೂರ ಸೇರಿದಂತೆ ಇತರರು ಇದ್ದರು. ಯಾತ್ರೆ ಸ್ವಾಮಿ ವಿವೇಕಾನಂದ ವೃತ್ತದಿಂದ ಡಾ.ಅಂಬೇಡ್ಕರ ವೃತ್ತದವರೆಗೆ ನಡೆಯಿತು.