ಕನ್ನಡರಾಜ್ಯೋತ್ಸವದಂದು ಆಶ್ರಯ ನಿವೇಶನದ ಹಕ್ಕುಪತ್ರ

KannadaprabhaNewsNetwork |  
Published : Oct 15, 2026, 01:45 AM IST
14ಎಚ್ಎಸ್ಎನ್6 : ಬೇಲೂರಿನಲ್ಲಿ ನಡೆದ  ಆಶ್ರಯ  ಸಮಿತಿ ಸಭೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಮಾತನಾಡಿದರು. | Kannada Prabha

ಸಾರಾಂಶ

ಅರ್ಜಿ ಹಾಕಿರುವ 65 ಗುಡಿಸಲು ನಿವಾಸಿಗಳಲ್ಲಿ 13ಜನರಿಗೆ ಬಿ.ಪಿ.ಎಲ್ ಪಡಿತರ ಚೀಟಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಯಾರನ್ನು ಬಿಡದಂತೆ, ಪರಿಶೀಲನೆ ನಡೆಸಿ ಕಾನೂನು ಬದ್ಧವಾಗಿ ನಿಯಮಾನುಸಾರ ಮುಂದುವರೆಯುವಂತೆ ತಿಳಿಸಲಾಗಿದ್ದು, ಇವರುಗಳಿಗೆ ರಾಯಪುರದ ಸರ್ವೆ ನಂ 19ರಲ್ಲಿ ಆಶ್ರಯ ನಿವೇಶನಗಳನ್ನು ನೀಡಲಾಗುವುದು. ಬಂಟೇನಹಳ್ಳಿ ಸರ್ವೆ. ನಂ. 158ರಲ್ಲಿ 3 ಎಕರೆ 17 ಗುಂಟೆ ಜಾಗದಲ್ಲಿ ಈಗಾಗಲೇ ಆಶ್ರಯ ಬಡಾವಣೆ ನಿರ್ಮಿಸಲಾಗಿದ್ದು, ಆಶ್ರಯ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ತೆರಳಿ, ಸ್ಥಳವನ್ನು ಸ್ವಚ್ಛಗೊಳಿಸಿ, ಮುಂದಿನ ಸಭೆಗೆ ಇದರ ಸಂಪೂರ್ಣ ಮಾಹಿತಿಯನ್ನು ತಿಳಿಸುವಂತೆ ತಿಳಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಜೂನಿಯರ್‌ ಕಾಲೇಜು ಮೈದಾನದ ಗುಡಿಸಲು ನಿವಾಸಿಗಳಿಗೆ ಕನ್ನಡರಾಜ್ಯೋತ್ಸವದಂದು ಆಶ್ರಯ ನಿವೇಶನಗಳ ಹಕ್ಕುಪತ್ರವನ್ನು ವಿತರಿಸಲಾಗುವುದು ಎಂದು ಶಾಸಕ ಎಚ್. ಕೆ. ಸುರೇಶ್ ತಿಳಿಸಿದರು.ಇಲ್ಲಿನ ಪುರಸಭೆಯ ವೇಲಾಪುರಿ ಸಂಭಾಗಣದಲ್ಲಿ ಆಯೋಜಿಸಲಾಗಿದ್ದ, ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು, ಅರ್ಜಿ ಹಾಕಿರುವ 65 ಗುಡಿಸಲು ನಿವಾಸಿಗಳಲ್ಲಿ 13ಜನರಿಗೆ ಬಿ.ಪಿ.ಎಲ್ ಪಡಿತರ ಚೀಟಿ ಸಮಸ್ಯೆಯಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದು, ಯಾರನ್ನು ಬಿಡದಂತೆ, ಪರಿಶೀಲನೆ ನಡೆಸಿ ಕಾನೂನು ಬದ್ಧವಾಗಿ ನಿಯಮಾನುಸಾರ ಮುಂದುವರೆಯುವಂತೆ ತಿಳಿಸಲಾಗಿದ್ದು, ಇವರುಗಳಿಗೆ ರಾಯಪುರದ ಸರ್ವೆ ನಂ 19ರಲ್ಲಿ ಆಶ್ರಯ ನಿವೇಶನಗಳನ್ನು ನೀಡಲಾಗುವುದು. ಬಂಟೇನಹಳ್ಳಿ ಸರ್ವೆ. ನಂ. 158ರಲ್ಲಿ 3 ಎಕರೆ 17 ಗುಂಟೆ ಜಾಗದಲ್ಲಿ ಈಗಾಗಲೇ ಆಶ್ರಯ ಬಡಾವಣೆ ನಿರ್ಮಿಸಲಾಗಿದ್ದು, ಆಶ್ರಯ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ತೆರಳಿ, ಸ್ಥಳವನ್ನು ಸ್ವಚ್ಛಗೊಳಿಸಿ, ಮುಂದಿನ ಸಭೆಗೆ ಇದರ ಸಂಪೂರ್ಣ ಮಾಹಿತಿಯನ್ನು ತಿಳಿಸುವಂತೆ ತಿಳಿಸಲಾಗಿದೆ ಎಂದರು.ಅಂಬೇಡ್ಕರ್‌ ಭವನದ ಬಳಿಯಿಂದ ಕೋಳಿ ಅಂಗಡಿಗಳನ್ನು ತೆರವುಗೊಳಿಸಿದ್ದ ನಂತರ ಹೊಳೆಬೀದಿಯಲ್ಲಿ ಕೋಳಿ ಅಂಗಡಿಗಳು ತಲೆ ಎತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಾಕಷ್ಟು ತೊಂದರೆಯಾಗಿದ್ದು, ಕೋಳಿ ಅಂಗಡಿಗಳನ್ನು ಹೊಯ್ಸಳ ಶಾಲೆಯ ಒತ್ತುವರಿಯ ಪುರಸಭೆ ಜಾಗದಲ್ಲಿ ಕೋಳಿಅಂಗಡಿಗಳಿಗೆ ಸ್ಥಳಾವಕಾಶ ನೀಡಲಾಗುವುದು ಎಂದರು.ಹೊಸನಗರ, ಚನ್ನಕೇಶವನಗರ, ಶಂಕರದೇವರ ಪೇಟೆಯಲ್ಲಿರುವ ಕಾಲಿ ನಿವೇಶನಗಳ ಪಟ್ಟಿ ನೀಡುವಂತೆ ಸೂಚಿಸಲಾಗಿದೆ. ಪಟ್ಟಣದಲ್ಲಿ ನಡೆದಿರುವ ಕಾಮಗಾರಿಗಳು ಕಳಪೆಯಾಗಿವೆ ಎಂಬ ದೂರಿದ್ದು ಜಿಲ್ಲಾನಾಗರಾಭಿವೃದ್ದಿ ಕೋಶದ ಎಂಜಿನಿಯರ್‌ ಅವರಿಂದ ಪರಿಶೀಲನೆ ನಡೆಸಲಾಗುವುದು ಎಂದರು.ಆಶ್ರಯ ಸಮಿತಿ ಸದಸ್ಯ ಬಿ.ಸಿ.ಹರೀಶ್ ಮಾತನಾಡಿ, ಸಭೆಯಲ್ಲಿ ನಡೆದ ವಿಷಯಗಳ ಚರ್ಚೆಯನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯಮಾಡುತ್ತಿರುವುದರಿಂದ ನಿವೇಶನಗಳನ್ನು ವಿತರಿಸಲು ವಿಳಂಭವಾಗುತ್ತಿದೆ. ಹೊಯ್ಸಳ ಶಾಲೆಯವರು ಪುರಸಭೆ ಖಾತೆ ನಂ 1027ರಲ್ಲಿ ಒತ್ತುವರಿ ಮಾಡಿರುವ 4000ಅಡಿ ಜಾಗದಲ್ಲಿ ಕಾಪೌಂಡ್ ನಿರ್ಮಾಣವಾಗಲು ಪುರಸಭೆ ಅಧಿಕಾರಿಗಳೇ ಕಾರಣ ಎಂದು ದೂರಿದರು.ಹೊಯ್ಸಳ ಶಾಲೆಯ ಒತ್ತುವರಿ ಜಾಗ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಫಲ: ಶಾಲೆಯ ಒತ್ತುವರಿ ವಿಷಯಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ನೀಡಿದ ಉತ್ತರಕ್ಕೆ, ಆಕ್ರೋಶಗೊಂಡ ಶಾಸಕರು ಇವರಿಗೆ ಸರ್ಕಾರದ ಜಾಗ ಉಳಿಸುವ ಮನಸ್ಸಿಲ್ಲ, ಇವರು ಮಾರಾಟ ಮಾಡಲು ಮುಂದಾಗಿದ್ದಾರೆ, ಇವರು ಎಚ್ಚರಿಕೆ ವಹಿಸಿದ್ದಾರೆ ಕಾಪೌಂಡ್ ನಿರ್ಮಾಣವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಶ್ರೀಘ್ರದಲ್ಲೇ ಒತ್ತುವರಿ ಜಾಗವನ್ನು ತೆರವುಗೊಳಿಸಿ, ಕೋಳಿ ಅಂಗಡಿಗಳನ್ನು ಸ್ಥಳಾಂತರ ಮಾಡುವಂತೆ ಸೂಚಿಸಿದರು.ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ, ಎಇಇ ಶರ್ಮಿಳಾ, ಎಇ ಆನಂದ ಕಂಬಳೆ, ಆಶ್ರಯ ಸಮಿತಿ ಸದಸ್ಯರಾದ ಇಕ್ಬಾಲ್, ನಾಗರಾಜು, ಡಿಂಪಲ್ ರಾಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಟಾಕಪ್ಪ ಶಿಗ್ಗಾವಿ, ಆರ್‌ಒ ಗೋಪಿ, ಆರ್‌ಐ ಲಕ್ಷ್ಮಣ್, ಎಂಜಿನಿಯರ್‌ ಮೋಹನ್ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಸರಾ ಸಂಭ್ರಮಕ್ಕೆ ಮತ್ಸ್ಯಲೋಕದ ಮೆರುಗು
ಸಿದ್ದರಾಮಯ್ಯ ನಿವಾಸಕ್ಕೆ ಸಚಿವ ಕೆ.ಎಸ್.ಬಸವಂತಪ್ಪ ಭೇಟಿ