ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮಾಹಿತಿಕನ್ನಡಪ್ರಭ ವಾರ್ತೆ ಶಿರಸಿ
ಬುಧವಾರ ನಗರದ ಟಿಎಂಎಸ್ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಸಂಘದ 43ನೇ ವರ್ಷದ ವಾರ್ಷಿಕ ಮಹಾಸಭೆಯ ಸಂದರ್ಭ ಬಿಡುಗಡೆಯಾದ ವರದಿಯ ಪ್ರಕಾರ, ಸಂಘದ ಒಟ್ಟು ವಹಿವಾಟು ₹564,95,46,289.42ಕ್ಕೆ ತಲುಪಿದ್ದು, ಸ್ವಂತ ಬಂಡವಾಳ ₹60,09,07,838.09 ಹಾಗೂ ಸದಸ್ಯರ ಠೇವಣಿ ₹124,27,59,185.00 ಸಂಗ್ರಹವಾಗಿದೆ. ನೇರ ಖರೀದಿ ವಿಭಾಗದ ಮೂಲಕ ಸದಸ್ಯರಿಂದ ಟೆಂಡರ್‌ನಲ್ಲಿ 27,089.72 ಕ್ವಿಂಟಲ್ ಅಡಕೆ ಹಾಗೂ ಕಾಳುಮೆಣಸು ಖರೀದಿಸಿ ₹136.14 ಕೋಟಿಗೂ ಅಧಿಕ ವ್ಯವಹಾರದ ಮೂಲಕ ₹ 80,21,421.51 ನಿವ್ವಳ ಲಾಭ ಗಳಿಸಲಾಗಿದೆ ಎಂದು ತಿಳಿಸಿದರು.ಅಲ್ಲದೆ ಎಲೆಚುಕ್ಕಿ ರೋಗದಿಂದ ತತ್ತರಿಸಿದ ರೈತರಿಗೆ ನೆರವಾಗಲು ಸಂಘವು ಸುಮಾರು 200 ಸದಸ್ಯರಿಗೆ ಅಧ್ಯಯನ ಪ್ರವಾಸ ಆಯೋಜಿಸಿದ್ದು, ಬಾಗಲಕೋಟೆಯ ತೋಟಗಾರಿಕಾ ಕಾಲೇಜಿನ ಸಹಯೋಗದೊಂದಿಗೆ 40,000 ಕಾಳುಮೆಣಸು ಗಿಡ ಮತ್ತು 20,000 ಚಂದ್ರಗಿರಿ ಕಾಫಿ ಸಸಿಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ ಎಂದರು.
ಬನವಾಸಿ ಹಾಗೂ ದಾಸನಕೊಪ್ಪ ಶಾಖೆಗಳು ಸಹ ಲಾಭ ಗಳಿಸಿವೆ. ಅಲ್ಲದೆ ಎಪಿಎಂಸಿ ಶಿರಸಿಯಿಂದ 10 ವರ್ಷಗಳ ಲೀಸ್ ಮೇಲೆ ಪಡೆದ ಜಮೀನನ್ನು ನೋಂದಾಯಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಆ ಜಾಗದಲ್ಲಿ ಧೃತ-ಭ್ರಷ್ಟ, ಪಶು ಆಹಾರ ತಯಾರಿಕಾ ಘಟಕ, ಭೂ-ಸುರಕ್ಷಾ ಸಾವಯವ ಗೊಬ್ಬರ ತಯಾರಿಕಾ ಘಟಕ ಹಾಗೂ ಹಸಿ ಅಡಿಕೆ ಪ್ರೊಸೆಸಿಂಗ್ ಯೂನಿಟ್ ಆರಂಭಿಸಲು ಚಿಂತಿಸಲಾಗಿದೆ ಎಂದರು.
ಸಂಘದ ಸಭಾಮಂಡಲದಲ್ಲಿ ಮಧ್ಯಾಹ್ನ 3.30ಕ್ಕೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಜಿ.ಎಂ. ಹೆಗಡೆ ಹುಲಗೋಳ, ಟಿಎಂಎಸ್ ಮುಖ್ಯ ಕಾರ್ಯನಿರ್ವಾಹಕ ವಿನಯ್ ಹೆಗಡೆ, ನಿರ್ದೇಶಕರು, ಸಿಬ್ಬಂದಿ ಸೇರಿದಂತೆ ಅನೇಕರು ಇದ್ದರು.