ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ
ಉತ್ತಮ ಪೋಟೋ ತೆಗೆಯಲು ಛಾಯಾಗ್ರಾಹಕರು ಉತ್ತಮ ಗುಣಮಟ್ಟದ ಕ್ಯಾಮೆರ ಬಳಸಬೇಕು ಎಂದು ಜಿಲ್ಲಾ ಛಾಯಾ ಚಿತ್ರ ಗ್ರಾಹಕರ ಸಂಘದ ಉಪಾಧ್ಯಕ್ಷ ಎಚ್.ಆರ್. ದುರ್ಗೇಶ್ ಸಲಹೆ ನೀಡಿದರು.
ಮಂಗಳವಾರ ಪ್ರವಾಸಿ ಮಂದಿರದಲ್ಲಿ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಛಾಯಾಗ್ರಾಹಕರನ್ನು ಉಳಿಸಿ ಎಂಬ ಬ್ಯಾನರ್ ಅನಾವರಣಗೊಳಿಸಿ, ತಾಲೂಕು ಛಾಯಾಗ್ರಾಹಕರ ಸಂಘಕ್ಕೆ ವೈಯ್ಯಕ್ತಿಕವಾಗಿ ₹25 ಸಾವಿರ ದೇಣಿಗೆ ನೀಡಿ ಮಾತನಾಡಿದರು. ರಾಜ್ಯ, ಜಿಲ್ಲಾ ಮಟ್ಟದ ಛಾಯಾ ಚಿತ್ರ ಗ್ರಾಹಕರ ಸಂಘಕ್ಕೆ ತಾಲೂಕು ಛಾಯಾ ಚಿತ್ರ ಗ್ರಾಹಕರ ಸಂಘದಿಂದ ಸದಸ್ಯರ ಆಯ್ಕೆ ಮಾಡಿ ಕಳಿಸಬೇಕಾಗಿದೆ. ಸಂಘಟನೆಯಲ್ಲಿ ಶಕ್ತಿ ಇದೆ. 1820 ರಲ್ಲಿ ಛಾಯಾಚಿತ್ರ ಗ್ರಹಣ ಪ್ರಾರಂಭವಾಗಿದೆ ಎಂದು ಇತಿಹಾಸದಿಂದ ತಿಳಿದು ಬಂದಿದೆ. ಪ್ರಸ್ತುತ ಛಾಯಾ ಚಿತ್ರ ಗ್ರಾಹಕರನ್ನು ಉಳಿಸಿ ಎಂದು ಹೋರಾಟ ಮಾಡಬೇಕಾಗಿದೆ ಎಂದರು.ಜಿಲ್ಲಾ ಛಾಯಾ ಚಿತ್ರ ಗ್ರಾಹಕರ ಸಂಘದ ಗೌರವ ಅಧ್ಯಕ್ಷ ಎಂ.ಓ.ಜೋಯಿ ಉದ್ಘಾಟಿಸಿ ಮಾತನಾಡಿ, ನರಸಿಂಹರಾಜಪುರ ಛಾಯಾಗ್ರಾಹಕರ ಸಂಘಕ್ಕೆ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಒಳ್ಳೆಯ ಹೆಸರಿದೆ. ಪ್ರತಿ ತಿಂಗಳ ಸಭೆಯಲ್ಲಿ ಎಲ್ಲಾ ಛಾಯಾಗ್ರಾಹಕರು ಭಾಗವಹಿಸಬೇಕು. ಸಂಘ ಚೆನ್ನಾಗಿ ನಡೆದುಕೊಂಡು ಹೋಗಬೇಕು ಎಂದರು.
ಸಭೆಯಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಗೌರವ ಅಧ್ಯಕ್ಷ ಮಥಾಯ್, ಸಂಘದ ನೂತನ ಕಾರ್ಯದರ್ಶಿ ಸಮೀರ್, ಖಜಾಂಚಿ ಅರ್ಜುನ್, ಸಂಘದ ಸಮನ್ವಯ ಸಮಿತಿ ಅಧ್ಯಕ್ಷ ಎಲಿಯಾಸ್, ಉಪಾಧ್ಯಕ್ಷರಾದ ಸಾಜು , ಸುಂದರೇಶ್, ಸಹ ಕಾರ್ಯದರ್ಶಿ ಮಾಳೂರು ದಿಣ್ಣೆ ವಾಸು, ಸಂಘಟನಾ ಕಾರ್ಯದರ್ಶಿ ಬಾಳೆಹೊನ್ನೂರು ಪ್ರವೀಣ್ , ಅರ್ಜುನ್ , ಗಿರಿರಾಜ್, ಸಾದತ್ ಸಮೀರ್ ಇದ್ದರು.