ಇಂದು ನಾಳೆ ಯಂಟಗಾನಹಳ್ಳಿ ಗೂಬೆಕಲ್ಲಮ್ಮ ಜಾತ್ರಾ ಮಹೋತ್ಸವ

KannadaprabhaNewsNetwork |  
Published : Mar 28, 2026, 01:30 AM IST
ಪೋಟೊ 7 : ಶಕ್ತಿದೇವತೆ ಶ್ರೀ ಗೂಬೆಕಲ್ಲಮ್ಮ ದೇವಿ | Kannada Prabha

ಸಾರಾಂಶ

ದಾಬಸ್‍ಪೇಟೆ: ಯಂಟಗಾನಹಳ್ಳಿ-ದೊಡ್ಡಕರೇನಹಳ್ಳಿ ಕ್ಷೇತ್ರದ ಶಕ್ತಿದೇವತೆ ಶ್ರೀ ಗೂಬೆಕಲ್ಲಮ್ಮ ದೇವಿ 13ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮಾ.28ರಂದು ಶನಿವಾರ ಹಾಗೂ ಮಾ.29ರಂದು ಭಾನುವಾರ ಆಯೋಜಿಸಲಾಗಿದೆ

ದಾಬಸ್‍ಪೇಟೆ: ಯಂಟಗಾನಹಳ್ಳಿ-ದೊಡ್ಡಕರೇನಹಳ್ಳಿ ಕ್ಷೇತ್ರದ ಶಕ್ತಿದೇವತೆ ಶ್ರೀ ಗೂಬೆಕಲ್ಲಮ್ಮ ದೇವಿ 13ನೇ ವಾರ್ಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವನ್ನು ಮಾ.28ರಂದು ಶನಿವಾರ ಹಾಗೂ ಮಾ.29ರಂದು ಭಾನುವಾರ ಆಯೋಜಿಸಲಾಗಿದೆ. ಜಾತ್ರಾ ಮಹೋತ್ಸವದಲ್ಲಿ ಶಾಸಕ ಎನ್.ಶ್ರೀನಿವಾಸ್ ಹಾಗೂ ಮಾಜಿ ಶಾಸಕರು ಜಿಲ್ಲಾ ಪಂಚಾಯಿತಿ, ತಾಪಂ ಮಾಜಿ ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ. ಮಾ.28ರಂದು ಗೋಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಕಂಬದ ಲಿಂಗಯ್ಯ ಮತ್ತು ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾ.29ರಂದು ದೇವಿಗೆ ಪೂಜಾ ಕಾರ್ಯಗಳು, ಮೆರವಣಿಗೆ ಸೇರಿದಂತೆ ವಿವಿಧ ಕಲಾ ತಂಡಗಳಿಂದ ಸುಗಮ ಸಂಗೀತ, ನೃತ್ಯ ವೈಭವ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರಸಿಂಹರಾಜಪುರ ಪಪಂ ಬಜೆಟ್: ₹7.17 ಕೋಟಿ ಆದಾಯ ನಿರೀಕ್ಷೆ
ಭಾವಾಭಿವ್ಯಕ್ತಿಯ ಜೊತೆಗೆ ಮನುಷ್ಯ ಸಂವೇದನೆಯೂ ಮುಖ್ಯ