ಇಂದು ಶ್ರೀ ರೇಣುಕಾಚಾರ್ಯ ಜಯಂತಿ, ಪಂಚಾಚಾರ್ಯ ಯುಗಮಾನೋತ್ಸವ

KannadaprabhaNewsNetwork | Published : Mar 12, 2025 12:51 AM

ಸಾರಾಂಶ

ದಾರ್ಶನಿಕರು, ಮಹಾನುಭಾವರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಪಂಚಾಚಾರ್ಯ ಯುಗಮಾನೋತ್ಸವವನ್ನು ಮಾರ್ಚ್ ೧೨ರಂದು ಬೆಳಗ್ಗೆ 9 ಗಂಟೆಗೆ ತಾಲೂಕು ಕಚೇರಿಯಿಂದ ಈಶ್ವರ ದೇವಸ್ಥಾನವರೆಗೆ ಮೆರವಣಿಗೆ, ವೀರಶೈವ ಕಲ್ಯಾಣ ಮಂಟಪದಲ್ಲಿ ಸಭೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಂ. ಲೋಕೇಶ್ ಹೇಳಿದ್ದಾರೆ.

ಜಗಳೂರು: ದಾರ್ಶನಿಕರು, ಮಹಾನುಭಾವರ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವ ಸಲುವಾಗಿ ಶ್ರೀ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತಿ ಹಾಗೂ ಪಂಚಾಚಾರ್ಯ ಯುಗಮಾನೋತ್ಸವವನ್ನು ಮಾರ್ಚ್ ೧೨ರಂದು ಬೆಳಗ್ಗೆ 9 ಗಂಟೆಗೆ ತಾಲೂಕು ಕಚೇರಿಯಿಂದ ಈಶ್ವರ ದೇವಸ್ಥಾನವರೆಗೆ ಮೆರವಣಿಗೆ, ವೀರಶೈವ ಕಲ್ಯಾಣ ಮಂಟಪದಲ್ಲಿ ಸಭೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಂ. ಲೋಕೇಶ್ ಹೇಳಿದರು.

ಪಟ್ಟಣದ ಎನ್.ಎಂ.ಕೆ. ಶಾಲೆ ಸಭಾಂಗಣದಲ್ಲಿ ಸಭೆ ನಂತರ ಮಾತನಾಡಿದ ಅವರು, ದಿವ್ಯ ಸಾನ್ನಿಧ್ಯವನ್ನು ಶ್ರೀಮದ್ ಉಜ್ಜಯಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀ, ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಶ್ರೀ, ಮುಸ್ಟೂರು, ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಹಿಸುವವರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ಎನ್ಎಂ ಲೋಕೇಶ್ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಉಪಾಧ್ಯಕ್ಷ ಕೆ.ಬಿ ಶ್ರೀನಿವಾಸ ರೆಡ್ಡಿ, ರಾಜ್ಯ ಕಾರ್ಯದರ್ಶಿ ಎಂ.ಜೆ. ಶಶಿಕಲಾ ಮೂರ್ತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಸಮಾಜದ ಹಿರಿಯ ಮುಖಂಡ ಸಿದ್ದೇಶ್ವರ್, ರಾಜ್ಯಪಾಲರ ನಿವೃತ್ತ ವಿಶೇಷ ಕರ್ತವ್ಯ ಅಧಿಕಾರಿಗಳಾದ ಜೆಎಂ ಸೊಕ್ಕೆ ತಿಪ್ಪೇಸ್ವಾಮಿ ಮತ್ತಿತರ ಗಣ್ಯರು ಆಗಮಿಸುವರು ಎಂದರು.

ಈ ಸಂದರ್ಭ ಗೌರವ ಅಧ್ಯಕ್ಷ ಬಿ.ಎಂ.ರುದ್ರಯ್ಯ ದೇವಿಕೆರೆ, ಪ್ರಧಾನ ಕಾರ್ಯದರ್ಶಿ ಪಂಚಾಕ್ಷರಯ್ಯ, ಖಜಾಂಚಿ ಕೆ.ಎಂ. ಜಗದೀಶ್, ಕಾರ್ಯದರ್ಶಿ ನಂಜುಂಡ ಸ್ವಾಮಿ, ಸಂಚಾಲಕರಾದ ಬಿ.ಎಂ. ಬಸವರಾಜಯ್ಯ, ಸದಸ್ಯರಾದ ಕೆ.ಎಂ. ವೇದಮೂರ್ತಿ, ವಿರೂಪಾಕ್ಷಯ್ಯ ಗೌಡಗೊಂಡನಹಳ್ಳಿ, ದೇವಿಕೆರೆ ಶಿವಕುಮಾರಸ್ವಾಮಿ ಇತರರು ಹಾಜರಿದ್ದರು.

- - - -11 ಜೆಎಲ್ಆರ್೦2.ಜೆಪಿಜಿ:

Share this article