ಇಂದು ಕಮೀನರೇಟ್ ವಿಭಜನೆ ಪ್ರಸ್ತಾವನೆ ಮಂಡನೆ ಸಾಧ್ಯತೆ

KannadaprabhaNewsNetwork |  
Published : Oct 06, 2026, 03:45 AM IST
ಕಬ್ಬನ್‌ಪಾರ್ಕ್ ಮೆಟ್ರೊ ನಿಲ್ದಾಣದ ಬಳಿ ನಿಂತ ಮಳೆ ನೀರು  ಹರಿದು ಹೋಗಲು ಅಡ್ಡಿಯಾಗಿದ್ದ ಬ್ಲಾಕೇಜ್ ತೆರವು ಮಾಡುತ್ತಿರುವ ಪಾಲಿಕೆ ಸಿಬ್ಬಂದಿ. | Kannada Prabha

ಸಾರಾಂಶ

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ‘ಬೆಂಗಳೂರು ಪೊಲೀಸ್ ಕಮೀಷನರೇಟ್’ ವಿಭಜನೆ ಪ್ರಸ್ತಾವನೆ ಮಂಡನೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಸರ್ಕಾರದ ತೀರ್ಮಾನ ಬಗ್ಗೆ ಕುತೂಹಲ ಮೂಡಿದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರ ‘ಬೆಂಗಳೂರು ಪೊಲೀಸ್ ಕಮೀಷನರೇಟ್’ ವಿಭಜನೆ ಪ್ರಸ್ತಾವನೆ ಮಂಡನೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಸರ್ಕಾರದ ತೀರ್ಮಾನ ಬಗ್ಗೆ ಕುತೂಹಲ ಮೂಡಿದಿದೆ.

ಕಮೀಷನರೇಟ್ ವಿಭಜನೆ ಕುರಿತು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ವರದಿಯನ್ನು ಸರ್ಕಾರ ಪಡೆದಿದೆ. ಈ ಬಗ್ಗೆ ಗೃಹ ಇಲಾಖೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಸಮಾಲೋಚನೆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ಸಿಎಂ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಚರ್ಚೆ ಬಳಿಕ ಕಮೀಷನರೇಟ್ ವಿಭಜನೆ ಬಗ್ಗೆ ಅಧಿಕೃತ ಆದೇಶಕ್ಕೆ ಸಿಎಂ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.

6 ದಶಕಗಳ ಬಳಿಕ ಬೆಂಗಳೂರು ಪೊಲೀಸ್ ಕಮೀಷನರೇಟ್ ಘಟಕ ವಿಭಜನೆಗೆ ಸಿಎಂ ಆಸ್ತಕಿ ತೋರಿದ್ದಾರೆ. ಅದರಲ್ಲೂ ಬಿಬಿಎಂಪಿಯನ್ನು 5 ಹೋಳು ಮಾಡಿ ಜಿಬಿಎ ರಚಿಸಿದ ಮಾದರಿಯಲ್ಲೇ ಪೊಲೀಸ್ ಕಮೀಷನರೇಟ್ ವಿಭಜನೆಗೆ ಸರ್ಕಾರ ಚಿಂತಿಸಿದೆ. ಆದರೆ ಈ ಪ್ರಸ್ತಾಪಕ್ಕೆ ಹಿರಿಯ ಐಪಿಎಸ್ ಅಧಿಕಾರಿಗಳು ಆಕ್ಷೇಪಿಸಿದ್ದಾರೆ. ಈ ಅಸಮಾಧಾನ ಬೆನ್ನಲ್ಲೇ ಜಿಬಿಎ ಮಾದರಿಯಲ್ಲೇ 5 ಪೊಲೀಸ್ ಕಮೀಷನರೇಟ್ ರಚನೆಗೆ ಸರ್ಕಾರ ಒಲವು ವ್ಯಕ್ತಪಡಿಸಿದೆ. ಹೀಗಾಗಿ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನದ ಬಗ್ಗೆ ಪೊಲೀಸ್ ವಲಯದಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಂಜಾ ದಂಧೆ, ಪಾರ್ಕ್‌ ಅಕ್ರಮ ಮರೆಮಾಚಲು ಶೆಟ್ಟಿ ಯತ್ನ
ಪೌರಕಾರ್ಮಿಕರು ಸುರಕ್ಷತಾ ಸಾಧನ ಕಡ್ಡಾಯವಾಗಿ ಬಳಸಬೇಕು : ಬಸವರಾಜ್