ಇಂದು ಶತಮಾನಗಳ ಕನಸು ಈಡೇರಿದ ಪವಿತ್ರ ದಿನ

KannadaprabhaNewsNetwork |  
Published : Jan 23, 2024, 01:47 AM IST
ಶತಮಾನಗಳ ಕನಸು ಈಡೇರಿದ ಪವಿತ್ರ ದಿನ-ಎಂ. ರಾಮಚಂದ್ರ | Kannada Prabha

ಸಾರಾಂಶ

ಶತಮಾನಗಳ ಹೋರಾಟ ಮತ್ತು ತ್ಯಾಗದ ಕನಸು ಈಡೇರಿದ ದಿನ ಬಾಲರಾಮನ ಪ್ರತಿಷ್ಠಾಪನೆ. ಈ ಪವಿತ್ರ ದಿನ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಶತಮಾನಗಳ ಹೋರಾಟ ಮತ್ತು ತ್ಯಾಗದ ಕನಸು ಈಡೇರಿದ ದಿನ ಬಾಲರಾಮನ ಪ್ರತಿಷ್ಠಾಪನೆ. ಈ ಪವಿತ್ರ ದಿನ ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ ಹೇಳಿದರು.ನಗರದ ಹಿಂದೂ ಮುಖಂಡರಾದ ಶ್ರೀಕಂಠಸ್ವಾಮಿ ಮತ್ತು ಕೃಷ್ಣಕುಮಾರ್ ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ ಅಂಗವಾಗಿ ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಏರ್ಪಡಿಸಿದ್ದ ರಾಮೋತ್ಸವ, ಶ್ರೀರಾಮ ಕ್ಯಾಲೆಂಡರ್ ಬಿಡುಗಡೆ ಮತ್ತು ಪ್ರಸಾದ ವಿತರಣೆ ಸಮಾರಂಭದಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿ,

ಕರಸೇವರ ತ್ಯಾಗದ ಹೋರಾಟಕ್ಕೆ ಇಂದು ಫಲ ಸಿಕ್ಕಿದೆ ಭಗವಾನ್ ಶ್ರೀರಾಮನ ಜನ್ಮ ಸ್ಥಳಕ್ಕೆ ಮುಕ್ತಿ ಸಿಕ್ಕಿ ಇಂದು ಭವ್ಯರಾಮ ಮಂದಿರ ನಿರ್ಮಾಣವಾಗಿ ನಿಂತಿದೆ. ಹಿಂದೂ ಎಂದು ಯಾರಿಗೂ ಕೆಡಕನ್ನು ಬಯಸಿಲ್ಲಿ ಎಲ್ಲ ಧರ್ಮವನ್ನು ಗೌರವಿಸಿಕೊಂಡು ಬಂದಿದೆ ಮುಂದೆಯೂ ಎಲ್ಲರ ಜೊತೆಗೂಡಿ ರಾಮರಾಜ್ಯ ಕಟ್ಟುವ ಜೊತೆಗೆ ಹಿಂದೂ ಧರ್ಮವನ್ನು ಮತ್ತಷ್ಟು ಸದೃಢಗೊಳಿಸೋಣ ಎಂದರು.

ಶ್ರೀಕಂಠಸ್ವಾಮಿ ಮತ್ತು ಕೃಷ್ಣಕುಮಾರ್ ಕರಸೇವಕರಾಗಿ ತೆರಳಿದ್ದರು ಇಂದು ಅವರ ಕನಸು ಈಡೇರಿದ ದಿನ, ಅದಕೋಸ್ಕರ ಅಖಂಡ ಭಾರತದ ನಕ್ಷೆಯುಳ್ಳ ಕ್ಯಾಲೆಂಡರನ್ನು ಬಿಡುಗಡೆಗೊಳಿಸುವ ಜೊತೆಗೆ, ರಾಮಭಕ್ತರಿಗೆ ಪ್ರಸಾದವನ್ನು, ಸಿಹಿಯನ್ನು ವಿತರಿಸಿದ್ದಾರೆ. ಅವರಿಗೆ ಭಗವಾನ್ ಶ್ರೀರಾಮ ಒಳ್ಳೆಯದನ್ನು ಮಾಡಲಿ ಎಂದರು.

ಕಾಡಾ ಮಾಜಿ ಅಧ್ಯಕ್ಷ ಜಿ. ನಿಜಗುಣರಾಜು ಮಾತನಾಡಿ, ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ, ಶ್ರೀರಾಮ ಅಯೋಧ್ಯೆವಾಸಿಯಾದರೆ ಆತನ ಭಂಟ ಹನುಮ ನಮ್ಮ ರಾಜ್ಯದವರು ಎಂಬುದು ನಮ್ಮ ಹೆಮ್ಮೆ. ಈಗ ಬಾಲರಾಮನ ಮೂರ್ತಿಯನ್ನು ನಮ್ಮ ಮೈಸೂರಿನವರು ಕೆತ್ತಿದ್ದಾರೆ ಎಂದರೆ ಇದು ನಮ್ಮ ಪುಣ್ಯ ಎಂದರು.

ಹಿಂದೂ ಮುಖಂಡ ಶ್ರೀಕಂಠಸ್ವಾಮಿ ಮಾತನಾಡಿ, 1992ರಲ್ಲಿ ಕರಸೇವಕರಾಗಿ ಅಯೋಧ್ಯೆಗೆ ಹೋಗಿ ಅಲ್ಲಿ ನಡೆಸಿದ ಹೋರಾಟವನ್ನು ನೆನಪಿಸಿಕೊಂಡರು, ಅಂದಿನ ಕರಸೇವಕರ ತ್ಯಾಗ, ಬಲಿದಾನದ ಫಲವಾಗಿ ಇಂದು ಭವ್ಯ ರಾಮಂದಿರ ನಿರ್ಮಾಣವಾಗಲು ಸಾಧ್ಯವಾಯಿತು ಎಂದರು. ದೊಡ್ಡ ಪರದೆಯನ್ನು ಅಳವಡಿಸಿ, ಬಾಲರಾಮ ಪ್ರತಿಷ್ಠಾಪನಾ ಕಾರ್ಯದ ನೇರಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿತ್ತು, ಬಾಲರಾಮ ಪ್ರತಿಷ್ಠಾಪನೆ ಆಗುತ್ತಿದ್ದಂತೆ, ನರೆದಿದ್ದ ಜನರು ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದರು. ಕೃಷ್ಣಕುಮಾರ್, ನಗರಸಭಾ ಸದಸ್ಯರಾದ ಚಂದ್ರಶೇಖರ್, ಮಂಜು, ಬಸವಣ್ಣ, ಮಹೋಜ್‌ಪಟೇಲ್ ಮುಖಂಡರಾದ ಸುರೇಶ್‌ನಾಯಕ, ಪರಮೇಶ್ವರಪ್ಪ, ನಾಗರಾಜು ಮತ್ತಿತರರು ಭಾಗವಹಿಸಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ