-ಸುರಪುರದಲ್ಲಿ ಕರವೇ ವತಿಯಿಂದ 20ರ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
-----ಕನ್ನಡಪ್ರಭವಾರ್ತೆ ಸುರಪುರ
ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕರವೇ 20ರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20ರಂದು ಸಂಜೆ 6 ಗಂಟೆಗೆ ನಗರದ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಡಗರದೊಂದಿಗೆ ಕರವೇ 20ನೇ ವರ್ಷದ ಸಂಭ್ರಮ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ ಜ್ಯೋತಿ ಬೆಳಗಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಶಾಸಕ ರಾಜಾ ವೇಣುಗೋಪಾಲ ನಾಯಕ, ಮಾಜಿ ಸಚಿವ ರಾಜುಗೌಡ ಉದ್ಘಾಟಿಸುವರು. ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅಧ್ಯಕ್ಷತೆ ವಹಿಸುವರು. ಶಾಸಕ ಕರೆಮ್ಮ ಜಿ. ನಾಯಕ, ಶರಣಗೌಡ ಕಂದಕೂರ, ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ, ಡಿಎಸ್ ಮ್ಯಾಕ್ಸ್ ಕಂಪನಿ ನಿರ್ದೇಶಕ ಡಾ. ಎಸ್.ಪಿ. ದಯಾನಂದ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು.ಸಂಭ್ರಮದಲ್ಲಿ ಅನೇಕ ಜನಪ್ರತಿನಿಧಿಗಳು, ಗಣ್ಯರು, ಪ್ರಮುಖರು, ಅಧಿಕಾರಿಗಳು, ಕನ್ನಡಾಭಿಮಾನಿಗಳೂ ಸೇರಿ ಅನೇಕರು ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಕುವೆಂಪು ಪ್ರಶಸ್ತಿ ಪ್ರದಾನ, ಝೀ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಅಮೀಶ್, ವಸುಶ್ರೀ, ರೇವಣಸಿದ್ದ ಅವರಿಂದ ಗಾಯನ, ಕಾಮಿಡಿ ಕಿಲಾಡಿ ಖ್ಯಾತಿಯ ಅಪ್ಪಣ್ಣ ರಾಮದುರ್ಗ, ವಾಣಿಗೌಡ, ಸೂರ್ಯ ಕುಂದಾಪುರ ಅವರಿಂದ ನಗೆ ಹಬ್ಬ, ಡಿ-9 ಡ್ಯಾನ್ಸ್ ಗ್ರೂಪ್ ತಂಡದಿಂದ ವಿಶೇಷ ನೃತ್ಯ, ಸಗರನಾಡು ಸಂಗೀತ ಕಲಾವಿದರಿಂದ ಗಾಯನ ವೈಭವ ಮತ್ತು ಜೂ.ಉಪೇಂದ್ರ ಅವರಿಂದ ರಸಮಂಜರಿ ಏರ್ಪಡಿಸಲಾಗಿದೆ ಎಂದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿ, ಸುರಪುರ ಮತ್ತು ಶಹಾಪುರ ತಾಲೂಕುಗಳಲ್ಲಿ ಸರ್ಕಾರ ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು. ಇದರಿಂದ ಕನ್ನಡದ ಚಟುವಟಿಕೆಗಳಿಗೆ ಹೆಚ್ಚು ಸಹಕಾರಿ. ಜಿಲ್ಲೆಯಲ್ಲಿ ಕರವೇ ನಿರಂತರವಾಗಿ ಕನ್ನಡ ಸೇವೆ ಮಾಡುತ್ತಿದೆ. ಸುರಪುರದ ಕರವೇ 20ರ ಸಂಭ್ರಮ ಯಶಸ್ವಿಯಾಗಲಿದೆ ಎಂದರು.ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ಮುಖಂಡರಾದ ಹಣಮಗೌಡ ಶಖಾಪುರ, ಹಣಮಂತ ದೇವಿಕೇರಿ, ಶ್ರೀನಿವಾಸ ನಾಯಕ ಲಕ್ಷ್ಮಿಪುರ, ಸೋಮಯ್ಯ ಹಾಲಗೇರಾ, ಮಲ್ಲು ವಿಷ್ಣುಸೇನೆ, ಸಾಯಬಣ್ಣ ದೊರೆ, ನಾಗರಾಜ ನಾಯಕ, ಭೀಮನಗೌಡ ಗೌಡಗೇರಿ, ಕೃಷ್ಣ ತಳವಾರ ಕೆಂಭಾವಿ, ವೆಂಕೋಬ ಲಿಂಗದಳ್ಳಿ, ಮಲ್ಲಿಕಾರ್ಜುನ ಹಿರೇಮಠ ಪರಸನಹಳ್ಳಿ, ನಿಂಗಪ್ಪ ಮಾಲಗತ್ತಿ, ಆನಂದ ರತ್ತಾಳ, ಕುಮಾರ ಮೋಪಗಾರ, ಮಲಣ್ಣಗೌಡ ಕಕ್ಕೇರಾ, ರಂಗನಾಥ ಕವಡಿಮಟ್ಟಿ, ಪ್ರಕಾಶ ಹೆಗ್ಗಣದೊಡ್ಡಿ, ಅನಿಲ್ ಬಿರಾದಾರ್ ಇದ್ದರು.
---ಬಾಕ್ಸ್ ---ಸುರಪುರ ಉತ್ಸವ ಆಚರಿಸಲಿ:ಸರ್ಕಾರಕ್ಕೆ ಒತ್ತಾಯ
1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದ ಸುರಪುರ ಸಂಸ್ಥಾನದ ಅರಸು ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಕೊಡುಗೆ ಅಪಾರ. ಶೌರ್ಯ ಮತ್ತು ಸಾಹಸಗಳ ಅದ್ಭುತ ಇತಿಹಾಸ ಹೊಂದಿರುವ ಈ ಸಂಸ್ಥಾನದ ಹೆಸರಿನಲ್ಲಿ ಸರ್ಕಾರ ಇದುವರೆಗೂ ಉತ್ಸವ ಮಾಡಿಲ್ಲ. ಸರ್ಕಾರ ಕೂಡಲೇ ಸುರಪುರ ಉತ್ಸವ ಆಚರಿಸಬೇಕು. ಕೋಟೆ, ಕೊತ್ತಲಗಳನ್ನು ಅಭಿವೃದ್ಧಿಪಡಿಸಬೇಕು. ಶೂರರ ಸಂಸ್ಥಾನದ ಇತಿಹಾಸವನ್ನು ಶಾಲಾ-ಕಾಲೇಜುಗಳ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಸರ್ಕಾರಕ್ಕೆ ಒತ್ತಾಯಿಸಿದರು.-----
ಫೋಟೊ: ಸುರಪುರ ನಗರದ ಪತ್ರಿಕಾ ಭವನದಲ್ಲಿ ಕರವೇಯ 20ರ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.18ವೈಡಿಆರ್7: