ಪೋಯಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘುಹಾಸನ್ ನಿರ್ದೇಶಿಸಿ, ನಿರ್ಮಿಸಿದ ನಾನು ಮತ್ತು ಗುಂಡ-2 ಚಿತ್ರವು ಸೆ.5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕನಟ ರಾಕೇಶ್ ಅಡಿಗ ತಿಳಿಸಿದರು.
ಶಿವಮೊಗ್ಗ: ಪೋಯಂ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ರಘುಹಾಸನ್ ನಿರ್ದೇಶಿಸಿ, ನಿರ್ಮಿಸಿದ ನಾನು ಮತ್ತು ಗುಂಡ-2 ಚಿತ್ರವು ಸೆ.5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕನಟ ರಾಕೇಶ್ ಅಡಿಗ ತಿಳಿಸಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹುಡುಗ ಮತ್ತು ಶ್ವಾನದ ನಡುವಿನ ಬಾಂಧವ್ಯದ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಕಥೆಯನ್ನು ಹೊಂದಿದೆ ಎಂದರು.ಹಚ್ಚಹಸಿರಿನ ಸ್ಥಳಗಳಲ್ಲಿ ವ್ಯಾಪಕವಾಗಿ ಚಿತ್ರೀಕರಿಸಲಾಗಿದ್ದು, ತೀರ್ಥಹಳ್ಳಿ, ಕೊಪ್ಪ, ದೇವಂಗಿ ಹಾಗೂ ಆಗುಂಬೆಯ ಮಂಜಿನ ಭೂದೃಶ್ಯಗಳ ನೈಸರ್ಗಿಕ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ ಎಂದರು.೨೦ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದು, ನಾಯಕ ನಟನಾಗಿ ಈ ಚಿತ್ರ ಎರಡನೇಯದ್ದಾಗಿದೆ. ಈ ಚಿತ್ರದಲ್ಲಿ ‘ಶಂಕರ್’ ಎಂಬ ಮುಗ್ಧ ಹುಡುಗನ ಪಾತ್ರ ನಿರ್ವಹಿಸಿದ್ದೇನೆ. ಈ ಹಿಂದೆ ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆದ ಪ್ರೀಮಿಯರ್ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.ಚಿತ್ರಕಥೆ ಮತ್ತು ನಿರ್ದೇಶನವನ್ನು ರಘುಹಾಸನ್ ಮಾಡಿದ್ದು, ತಾರಾಗಣದಲ್ಲಿ ಚಿತ್ರದ ನಾಯಕ ನಟಿಯಾಗಿ ರಚನಾ ಇಂದರ್ ಹಾಗೂ ವಿವಿಧ ಪಾತ್ರಗಳಲ್ಲಿ ಯುವನ್ ಗೌಡ, ಗೋವಿಂದೇಗೌಡ, ಸಾಧುಕೋಕಿಲಾ, ಅವಿನಾಶ್, ನಯನ, ಮಂಜುಪಾವಗಡ ಸೇರಿದಂತೆ ಪ್ರತಿಭಾವಂತ ತಂಡ ಈ ಚಿತ್ರದಲ್ಲಿ ನಟಿಸಿದ್ದು, ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಗುಂಡ-೦೧ರಲ್ಲಿ ನಟಿಸಿದ ಸಿಂಬಾ ಎಂಬ ನಾಯಿ ಮತ್ತು ಗುಂಡ-೨ರಲ್ಲಿ ಜಾಕ್ಸನ್ ಮತ್ತು ಬಂಟಿ ನಾಯಿಗಳು ಅದ್ಭುತವಾಗಿ ನಟಿಸಿವೆ ಎಂದರು.ಸಾಹಿತ್ಯ ಬಿ. ನಾಗೇಂದ್ರಪ್ರಸಾದ್, ರಘುಹಾಸನ್, ರೋಹಿತ್ ರಮಣ ಮತ್ತು ಛಾಯಾಂಕ ಚಿತ್ರದ ಹಾಡುಗಳನ್ನು ವಿಜಯಪ್ರಕಾಶ್ ಅಮೋಘವರ್ಷ, ಐಶ್ವರ್ಯ ನಾರಾಯಣ ಹಾಡಿದ್ದಾರೆ. ಚಿತ್ರಕ್ಕೆ ಸಂಗೀತವನ್ನು ಆರ್.ಪಿ. ಪಟ್ನಾಯಕ್ ನೀಡಿದ್ದು, ಈ ಚಿತ್ರ ಕನ್ನಡ, ತೆಲುಗು ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಹಾಯಕ ನಿರ್ದೇಶಕರಾಗಿ ಸುಧೀರ್ ಬಸವಯ್ಯ, ಅಯ್ಯಪ್ಪ ಹೊಸಮನೆ ಇದ್ದು, ಚಿತ್ರದ ಟಿಆರ್‌ಓ ಆಗಿ ರಘುಗುಂಡ್ಲು ನಿರ್ವಹಿಸಿದ್ದು ಹೊಂಬಾಳೆ ಚಿತ್ರತಂಡ ವಿತರಣೆಯನ್ನು ಕೈಗೆತ್ತಿಕೊಂಡಿದೆ ಎಂದರು.ಚಿತ್ರದ ತರಬೇತುದಾರ ಸ್ವಾಮಿ ಮಾತನಾಡಿ, ಈ ಚಿತ್ರಕ್ಕೆ ಎರಡೂ ನಾಯಿಗಳು ಉತ್ತಮ ಸಹಕಾರ ನೀಡಿವೆ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಪ್ರೇಕ್ಷಕರ ಗಮನಸೆಳೆಯಲಿದೆ ಎಂದರು.ಮುಗ್ಧಜೀವಿಗಳನ್ನು ಪ್ರೋತ್ಸಾಹಿಸುವಂತೆ ವಿನಂತಿಸಿದ ಅವರು, ಮನುಷ್ಯನ ಎಲ್ಲಾ ಭಾಷೆಗಳನ್ನು ಅರ್ಥೈಸಿಕೊಂಡು ಚಿತ್ರಕಥೆಗೆ ತಕ್ಕಹಾಗೆ ಅವು ಅಭಿನಯಿಸಿದ್ದು ವಿಶೇಷವಾಗಿದೆ. ಚಿತ್ರರಸಿಕರು ಈ ಚಿತ್ರಕ್ಕೆ ಪ್ರೋತ್ಸಾಹ ನೀಡುವಂತೆ ಅವರು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಮ್ಯಾನೇಜರ್ ಬಿ.ಕೆ.ಉದಯಕುಮಾರ್ ಕಲಾನಿರ್ದೇಶಕ ಪ್ರಶಾಂತ್ ಹೆಬ್ಬಸೂರು, ಶಶಿಕುಮಾರ್, ಚಿತ್ರದಲ್ಲಿ ನಟಿಸಿದ ಶಿವಮೊಗ್ಗದ ಪ್ರತಿಭಾ ಕವಿತಾ ರಾಘವೇಂದ್ರ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.