ಇಂದು ಅಧಿವೇಶನದ ಉದ್ದೇಶಗಳೇ ಈಡೇರುತ್ತಿಲ್ಲ

KannadaprabhaNewsNetwork |  
Published : Oct 13, 2026, 03:00 AM IST
ಪಾಟೀಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೀಳಗಿ ಇಂದಿನ ದಿನಮಾನಗಳಲ್ಲಿ ಶಾಸಕರು ಮತ್ತು ಸಂಸದರು ಜನರ ಆಶಯದಂತೆ ಸಾಗುತ್ತಿಲ್ಲ ಎನ್ನುವುದು ಬಹಳ ಬೇಸರದ ಸಂಗತಿ. ಅಧಿವೇಶನ ಕರೆಯುವ ಉದ್ದೇಶಗಳೇ ಇಂದು ಈಡೇರುತ್ತಿಲ್ಲ. ಯಾವ ವಿಷಯಕ್ಕೆ ಅಧಿವೇಶನ ಎನ್ನುವುದನ್ನು ಮರೆತು ಬೇರೆ ಯಾವುದೋ ವಿಷಯವನ್ನು ತಂದು ನಿಜವಾದ ವಿಷಯಗಳ ಬಗ್ಗೆ ಚರ್ಚೆ ನಡೆಯದೆ ಹಲವಾರು ಜನಪರ ವಿಷಯಗಳು ಮರೆಮಾಚುತ್ತಿವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ.ಟಿ.ಪಾಟೀಲ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಇಂದಿನ ದಿನಮಾನಗಳಲ್ಲಿ ಶಾಸಕರು ಮತ್ತು ಸಂಸದರು ಜನರ ಆಶಯದಂತೆ ಸಾಗುತ್ತಿಲ್ಲ ಎನ್ನುವುದು ಬಹಳ ಬೇಸರದ ಸಂಗತಿ. ಅಧಿವೇಶನ ಕರೆಯುವ ಉದ್ದೇಶಗಳೇ ಇಂದು ಈಡೇರುತ್ತಿಲ್ಲ. ಯಾವ ವಿಷಯಕ್ಕೆ ಅಧಿವೇಶನ ಎನ್ನುವುದನ್ನು ಮರೆತು ಬೇರೆ ಯಾವುದೋ ವಿಷಯವನ್ನು ತಂದು ನಿಜವಾದ ವಿಷಯಗಳ ಬಗ್ಗೆ ಚರ್ಚೆ ನಡೆಯದೆ ಹಲವಾರು ಜನಪರ ವಿಷಯಗಳು ಮರೆಮಾಚುತ್ತಿವೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕರಾದ ಜೆ.ಟಿ.ಪಾಟೀಲ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ರುದ್ರಗೌಡ ಪಾಟೀಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಲಾ ಶಿಕ್ಷಣ, ಕಾಲೇಜು ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಯುವ ಸಂಸತ್ತು ಸಭೆ ಕಾರ್ಯಕ್ರಮ-2026 ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಸಕರು ಸಂವಿಧಾನದ ಆಶಯದಂತೆ ನಡೆಯಬೇಕು, ದೇಶದ ರಾಜ್ಯದ ಸಮಸ್ಯೆಗಳ ಕುರಿತಾಗಿ ಚರ್ಚೆಗಳು ಅಧಿವೇಶನದಲ್ಲಿ ನಡೆಯಬೇಕು. ಅಂದಾಗ ಮಾತ್ರ ಅಧಿವೇಶನದ ಆಶಯ ಈಡೇರಿಕೆಯಾಗಿ ಅಭಿವೃದ್ಧಿ ಸಾಧ್ಯವಾಗಲಿದೆ. ವಿದ್ಯಾರ್ಥಿಗಳು ದೇಶದ ಭವ್ಯ ಪ್ರಜೆಗಳು ನಿಮ್ಮಲ್ಲಿಯಾದರೂ ರಾಜ್ಯ, ದೇಶದ ಪರಂಪರೆ, ಸಂಸ್ಕೃತಿಯ ಅರಿವು ಬೆಳೆಯಬೇಕಿದೆ. ಎಐ ಎನ್ನುವ ಶಕ್ತಿ ಮನುಷ್ಯನ ಬುದ್ಧಿ ಮಟ್ಟ ಮೀರಿ ಬೆಳೆಯುವುತ್ತಿದೆ. ಇದು ಅಪಾಯಕಾರಿ ಸಂದೇಶವಾಗಿದ್ದು, ವಿದ್ಯಾರ್ಥಿಗಳು ಮೊಬೈಲ್, ಟಿವಿ ವಿಷಯಕ್ಕೆ ಬಾರದ ಸಿನಿಮಾಗಳಿಂದ ದೂರವಿದ್ದು, ಗುರಿ ಸಾಧನೆಗಳತ್ತ ಸಾಗಬೇಕು. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಬೇಕು, ಶಿಕ್ಷಕರು ಮಕ್ಕಳ ನಿಜವಾದ ಪ್ರತಿಭೆ ಗುರುತಿಸುವ ಕೆಲಸ ಮಾಡಬೇಕು, ಬಾಲ್ಯ ಶಿಕ್ಷಣದಿಂದ ರಾಜಕಾರಣದ ಗುರುತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಚುನಾವಣೆ ಮುಖಾಂತರ ಜನರಿಗೆ ಹಲವಾರು ಭರವಸೆಗಳನ್ನು ನೀಡಿ ಆಯ್ಕೆಯಾದ ಶಾಸಕರು ವಿಧಾನಸಭೆಯಲ್ಲಿ ಕ್ಷೇತ್ರದ ಸಮಸ್ಯೆಗಳ ಕುರಿತಾಗಿ ಚರ್ಚೆ ಮಾಡಿ ಅಭಿವೃದ್ಧಿ ಕಾರ್ಯ ಮಾಡುವುದು, ವಿಧಾನ ಸಭೆ ಮತ್ತು ವಿಧಾನ ಪರಿಷತ್ ಅಧಿವೇಶನಗಳು ಹೇಗೆ ಮಾಡುತ್ತಾರೆ ಎನ್ನುವ ಕಲ್ಪನೆ ಅರಿವು ವಿದ್ಯಾರ್ಥಿಗಳಲ್ಲಿ ಬರಲಿ ಎನ್ನುವ ಉದ್ದೇಶದಿಂದ ಸರ್ಕಾರ ಯುವ ಸಂಸತ್ತು ಕಾರ್ಯಕ್ರಮ ಆಯೋಜಿಸಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಸಮಯ ಪಾಲನೆ, ನಿರ್ದಿಷ್ಟ ಗುರಿ ಬೆಳೆಯಬೇಕು, ದುಶ್ಚಟಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದು ಕಿವಿಮಾತು ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆ ಹೇಗೆ ನೆಡೆಯುತ್ತದೆ ಎನ್ನುವುದು ಸಂಸದೀಯ ಪದ್ದತಿ ಮತ್ತು ಅಲ್ಲಿನ ನಿರ್ಣಯಗಳ ಮೇಲೆ ತಿಳಿಯಲಿದೆ. ವಿದ್ಯಾರ್ಥಿಗಳಿಗೆ ಸಂಸದೀಯ ವ್ಯವಸ್ಥೆಯ ಅರಿವು ಹೆಚ್ಚಾದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.ಸಮಾರಂಭದಲ್ಲಿ 224 ವಿದ್ಯಾರ್ಥಿ ಶಾಸಕರ ಸೇರಿದ್ದ ವಿದ್ಯಾರ್ಥಿಗಳ ಸಂಸತ್ತು ಸಭೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಬರಗಾಲ, ನೀರಾವರಿ, ಶಿಕ್ಷಣ ಕುರಿತು ಚರ್ಚೆಗಳು ನಡೆದವು.ಸಭೆಯಲ್ಲಿ ತಹಸೀಲ್ದಾರ್ ವಿನೋದ್ ಹತ್ತಳ್ಳಿ, ತಾಪಂ ಇಒ ಶ್ರೀನಿವಾಸ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪೂರ, ಕಾಲೇಜು ಪ್ರಾಂಶುಪಾಲೆ ಶ್ರೀದೇವಿ ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಸ್.ಗಡ್ಡದೇವರಮಠ, ಕಾಲೇಜು ಸಿಡಿಸಿ ಸದಸ್ಯರಾದ ಜ್ಯೋತಿಬಾ ಅವತಾಡೆ, ರವಿ ಕಾಂಬಳೆ, ಸಿದ್ದು ದಳವಾಯಿ ಸೇರಿದಂತೆ ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಂದ ಆಗಮಿಸಿದ್ದ ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾನಾ ಪಾಟೇಕರ್ ನಿಧನಕ್ಕೆ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟ್ ಸಂತಾಪ
ಬೇಡಿಕೆ ಈಡೇರಿಸದೇ ವಾಪಸ್‌ ಕಳಿಸಿದ ಕೇಂದ್ರ ಸರ್ಕಾರ