ನಾಳೆ ೫೧೧ ಹಿಂದು ಕಾರ್ಯಕರ್ತರು, ಕರ ಸೇವಕರಿಗೆ ಸನ್ಮಾನ

KannadaprabhaNewsNetwork |  
Published : Jan 21, 2024, 01:31 AM IST
ವಿಜಯಪುರದಲ್ಲಿ ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ಜ.೨೨ರಂದು ರಾಮಮಂದಿರ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವ ನಿಟ್ಟಿನಲ್ಲಿ ರಾಮನವಮಿ ಉತ್ಸವ ಸಮಿತಿ ನಿರ್ಧರಿಸಿದ್ದು, ಅಂದು ನಗರದ ರಾಮಮಂದಿರ ಮುಂದೆ ವಿವಿಧ ಧಾರ್ಮಿಕ ಮತ್ತು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಯೋಧ್ಯೆಯಲ್ಲಿ ಜ.೨೨ರಂದು ರಾಮಮಂದಿರ ಲೋಕಾರ್ಪಣೆಯನ್ನು ಅರ್ಥಪೂರ್ಣವಾಗಿ ಸಂಭ್ರಮಿಸುವ ನಿಟ್ಟಿನಲ್ಲಿ ರಾಮನವಮಿ ಉತ್ಸವ ಸಮಿತಿ ನಿರ್ಧರಿಸಿದ್ದು, ಅಂದು ನಗರದ ರಾಮಮಂದಿರ ಮುಂದೆ ವಿವಿಧ ಧಾರ್ಮಿಕ ಮತ್ತು ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಲಿವೆ ಎಂದು ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಉಮೇಶ ವಂದಾಲ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನವಮಿ ಉತ್ಸವ ಸಮಿತಿ ಹಾಗೂ ರಾಮ ಮಂದಿರ ಟ್ರಸ್ಟ್ ಕಮಿಟಿ ಸಹಯೋಗದಲ್ಲಿ ಈ ಎಲ್ಲ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜ.೨೨ ರಂದು ಬೆಳಗ್ಗೆ ೬ ಗಂಟೆಗೆ ೧೦೮ ಜನ ಕಾರ್ಯಕ್ರಮ ಜರುಗಲಿದೆ ಎಂದರು.

ಬೆಳಗ್ಗೆ ೧೦ಕ್ಕೆ ೫೧೧ ಹಿಂದು ಕಾರ್ಯಕರ್ತರು ಹಾಗೂ ಕರ ಸೇವಕರಿಗೆ ಸನ್ಮಾನ ಜರುಗಲಿದ್ದು, ಸನ್ಮಾನದಲ್ಲಿ ಕಾರ್ಯಕರ್ತರಿಗೆ ಕಟ್ಟಿಗೆಯಿಂದ ನಿರ್ಮಾಣ ಮಾಡಿರುವ ರಾಮಮಂದಿರವನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದರು.

ನಂತರ ವಿಜಯಪುರ ಬ್ರಾಹ್ಮಣ ಮಹಿಳಾ ಮಂಡಳಿ ಅಧ್ಯಕ್ಷೆ ಭಾಗ್ಯಶ್ರೀ ಕಟ್ಟಿ ನೇತೃತ್ವದಲ್ಲಿ ಕೋಲಾಟ ಕಾರ್ಯಕ್ರಮ, ಮನಿಶಾ ಕುಲಕರ್ಣಿ ಅವರಿಂದ ಭಕ್ತಿಗೀತೆ, ಭೀಮರಾವ ಜೋಶಿ (ತೆಲಗಿ) ಹಾಗೂ ಭಾರತಿ ಕುಂದಲಗಾರ ಅವರಿಂದ ಸಂಗೀತ, ರವಿಂದ್ರನಾಥ ಟ್ಯಾಗೂರ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದರು.

ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಮಧ್ಯಾಹ್ನ ೧ಕ್ಕೆ ಅನ್ನ ಸಂತರ್ಪಣೆ ಹಾಗೂ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಭಕ್ತಾದಿಗಳಿಗಾಗಿ ರಾಮಮೂರ್ತಿಯನ್ನು ದರ್ಶನಕ್ಕೆ ಇಡಲಾಗುತ್ತಿದ್ದು, ನಗರವಾಸಿಗಳು ಶ್ರೀರಾಮ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ರಾಮಮಂದಿರ ಉದ್ಘಾಟನೆಗೆ ಇಡಿ ವಿಶ್ವ ಕಾದು ಕುಳಿತಿದೆ. ರಾಮಮಂದಿರ ನಿರ್ಮಾಣಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹಿಂದು ಕಾರ್ಯಕರ್ತರು ಹಾಗೂ ಕರಸೇವಕರ ಸ್ಮರಣೆ ಅಂಗವಾಗಿ ನಗರದಲ್ಲಿ ಅಂದು ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯ ಹುಲಜಂತಿ ಮಾಳಿಂಗರಾಯ ಸ್ವಾಮೀಜಿ, ಬುರಣಾಪುರದ ಯೊಗೇಶ್ವರಿ ಮಾತಾ, ಮನಗೂಳಿಯ ಸಂಗನಬಸವ ಸ್ವಾಮೀಜಿ ವಹಿಸಲಿದ್ದಾರೆ ಎಂದರು.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಅನೇಕರು ಹಣ ನೀಡಿದ್ದಾರೆ. ಕೆಲ ಮುಸ್ಲಿಂ ಕುಟುಂಬಗಳು ಹಣ ನೀಡಿರುವುದನ್ನು ನಾವು ಕಾಣಬಹುದು. ಹೃದಯ ವೈಶಾಲ್ಯತೆ ಇರುವ ಮುಸ್ಲಿಂರೂ ನಮ್ಮ ಭಾರತದಲ್ಲಿದ್ದಾರೆ. ಅಂಥ ವ್ಯಕ್ತಿಗಳು ಇನ್ನೂ ಹೆಚ್ಚಾಗಬೇಕಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾದಣ್ಣ ಕಟಾವಿ, ಶಿವಾನಂದ ಭುಯ್ಯಾರ, ಸಚಿನ ಸವನಳ್ಳಿ, ಅಶೋಕ, ಸಂತೋಷ, ಅಮಿತ್ ಅವಜಿ, ಸಂಗಮೇಶ ಉಕ್ಕಲಿ, ಸಮೀರ್ ಕುಲಕರ್ಣಿ, ನಾರಾಯಣ ಹಜೇರಿ ಮುಂತಾದವರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ