ನಾ‍ಳೆ ಜಯದೇವ ಜಗದ್ಗುರುಗಳ 70ನೇ ಸ್ಮರಣೋತ್ಸವ

KannadaprabhaNewsNetwork |  
Published : Oct 07, 2026, 02:00 AM IST
ಕ್ಯಾಪ್ಷನ6ಕೆಡಿವಿಜಿ31 -ದಾವಣಗೆರೆಯಲ್ಲಿ ಜಯದೇವ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮ ಆಯೋಜನೆ ಕುರಿತು ಡಾ.ಬಸವಪ್ರಭು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ..........ಕ್ಯಾಪ್ಷನ6ಕೆಡಿವಿಜಿ:32 -ಲಿಂಗೈಕ್ಯ ಜಯದೇವ ಶ್ರೀಗಳ ನೂತನ ಬೆಳ್ಳಿ ಮೂರ್ತಿ.........ಕ್ಯಾಪ್ಷನ6ಕೆಡಿವಿಜಿ33- 21 ಅಡಿ ಎತ್ತರ 3 ಅಡಿ ಕಳಸ ಹೊಂದಿದ ಬೃಹತ್ ನೂತನ ರಥ | Kannada Prabha

ಸಾರಾಂಶ

ಬಸವ ಚೇತನ, ಶ್ರೀಮನ್‌ ಮಹಾರಾಜ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 70ನೇ ವರ್ಷದ ಸ್ಮರಣೋತ್ಸವ ಹಾಗೂ ರಥೋತ್ಸವವನ್ನು ಅ.8ರಂದು ನಗರದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.

- ಲಿಂಗೈಕ್ಯ ಜಯದೇವ ಶ್ರೀಗಳ ನೂತನ ಬೆಳ್ಳಿ ಮೂರ್ತಿ, ನವ ತೇರಿನಲ್ಲಿ ಮಹಾರಥೋತ್ಸವ: ಬಸವಪ್ರಭು ಶ್ರೀ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಸವ ಚೇತನ, ಶ್ರೀಮನ್‌ ಮಹಾರಾಜ ನಿರಂಜನ ಜಗದ್ಗುರು ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 70ನೇ ವರ್ಷದ ಸ್ಮರಣೋತ್ಸವ ಹಾಗೂ ರಥೋತ್ಸವವನ್ನು ಅ.8ರಂದು ನಗರದ ಶ್ರೀ ಜಯದೇವ ವೃತ್ತದ ಶ್ರೀ ಶಿವಯೋಗಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ನಗರದ ಶಿವಯೋಗಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಷಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಲಿಂಗೈಕ್ಯ ಜಯದೇವ ಶ್ರೀಗಳ ಸ್ಮರಣೋತ್ಸವಕ್ಕೆ ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡುವರು ಎಂದರು.

ಇಳಕಲ್ ಗುರು ಮಹಾಂತ ಶ್ರೀ, ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಶ್ರೀ, ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮೀಜಿ, ಪಾಂಡೋಮಟ್ಟಿ ಡಾ.ಗುರುಬಸವ ಸ್ವಾಮೀಜಿ, ಮಾದಾರ ಚನ್ನಯ್ಯ ಶ್ರೀ, ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಮಡಿವಾಳ ಮಾಚಿದೇವ ಸ್ವಾಮೀಜಿ, ಯಾದವಾನಂದ ಸ್ವಾಮೀಜಿ ಸೇರಿದಂತೆ ಹಾವೇರಿ, ಅಥಣಿ, ಶಿರಾಳಕೊಪ್ಪ, ಶಿವಮೊಗ್ಗ, ಗುರುಮಠಕಲ್, ಬೆಂಗಳೂರು, ತುಮಕೂರು ಸೇರಿದಂತೆ ನೂರಾರು ಸ್ವಾಮೀಜಿ ಪಾಲ್ಗೊಳ್ಳುವರು. ಗಣ್ಯರು, ಜನಪ್ರತಿನಿಧಿಗಳು, ರಾಜಕಾರಿಣಿಗಳು, ಶ್ರೀಮಠದ ಭಕ್ತರು, ಜಯದೇವ ಗುರುಗಳ ಭಕ್ತರು, ಜಯದೇವ ಹಾಸ್ಟೆಲ್ ಹಳೆಯ ವಿದ್ಯಾರ್ಥಿಗಳು ಭಾಗವಹಿಸುವರು. ಅನಂತರ ಮಹಾದಾಸೋಹ ನಡೆಯಲಿದೆ ಎಂದರು.

ಜಯದೇವ ಶ್ರೀಗಳ ಬೆಳ್ಳಿಯ ಮೂರ್ತಿ, ನೂತನ ರಥದ ಲೋಕಾರ್ಪಣೆ, ಮಹಾ ರಥೋತ್ಸವವು ಅದೇ ಸಂಜೆ 5 ಗಂಟೆಗೆ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿ ನಡೆಯಲಿದೆ. ನೂತನ ರಥ ಹಾಗೂ ಮಹಾರಥೋತ್ಸವಕ್ಕೆ ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ಚಾಲನೆ ನೀಡುವರು. ಸುಮಾರು ₹30 ಲಕ್ಷಗಳ ವೆಚ್ಚದಲ್ಲಿ 10.5 ಕೆಜಿ ತೂಕದ 2 ಅಡಿ ಬೆಳ್ಳಿಯ ಜಯದೇವ ಶ್ರೀಗಳ ಮೂರ್ತಿ ಲೋಕಾರ್ಪಣೆ ಮಾಡಲಾಗುವುದು. 21 ಅಡಿ ಎತ್ತರ 3 ಅಡಿ ಕಳಸ ಹೊಂದಿದ ಬೃಹತ್ ನೂತನ ರಥವನ್ನು ಲೋಕಾರ್ಪಣೆ ಮಾಡಲಾಗುವುದು. ಶ್ರೀಗಳ ಬೆಳ್ಳಿ ಪ್ರತಿಮೆ, ಬಸವಾದಿ ಶಿವಶರಣರ ಗ್ರಂಥಗಳೊಂದಿಗೆ ಜಾನಪದ ಕಲಾ ತಂಡಳೊಂದಿಗೆ ರಥೋತ್ಸವ ಶಿವಯೋಗಿ ಮಂದಿರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಚಿತ್ರದುರ್ಗದ ಶ್ರೀ ಮಠದ ಭಕ್ತರು ಲಿಂ.ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ ಬೆಳ್ಳಿಯ ಮೂರ್ತಿ ತಯಾರಿಕೆಗೆ ನೆರವು ನೀಡಿದ್ದು, ಘಟಪ್ರಭಾದ ಕಲಾವಿದರು ಮೂರ್ತಿ ತಯಾರಿಸಿದ್ದಾರೆ. ಶಿವಯೋಗಾಶ್ರಮ ಟ್ರಸ್ಟಿನಿಂದ ಸುಮಾರು ₹25 ಲಕ್ಷ ವೆಚ್ಚದಲ್ಲಿ ರಥವನ್ನು ದಾವಣಗೆರೆ ಶಿಲ್ಪ ಕಲಾವಿದ ಸಂತೋಷ ನಿರ್ಮಿಸಿದ್ದಾರೆ. ಸಂಜೆ ಕಾರ್ಯಕ್ರಮದಲ್ಲಿ ವಚನ ಸಂಗೀತೋತ್ಸವ ನಡೆಯಲಿದ್ದು, ಉತ್ತಂಗಿ ತೋಟಪ್ಪ, ಉಮೇಶ ಪತ್ತಾರ್, ಬಸವ ಕಲಾಲೋಕದ ಅರುಣ ಅವರಿಂದ ವಚನ ಗಾಯನ ನಡೆಯಲಿದೆ ಎಂದು ವಿವರಿಸಿದರು.

ಸಮಾರಂಭದಲ್ಲಿ ದಾನಿಗಳಿಗೆ ಶ್ರೀಮಠದಿಂದ ಗೌರವಿಸಲಾಗುವುದು. ಅನಂತರ ಮಹಾದಾಸೋಹ ನಡೆಯಲಿದೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ನಾಡಿನ, ಚಿತ್ರದುರ್ಗ, ದಾವಣಗೆರೆಯ ಸಮಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ ಕೊಡಬೇಕು ಎಂದು ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಕುಂಟೋಜಿ ಚನ್ನಪ್ಪ, ಹಾಸಬಾವಿ ಕರಿಬಸಪ್ಪ, ಜಯದೇವ ಚಿಗಟೇರಿ, ಕಣಕುಪ್ಪಿ ಮುರುಗೇಶ, ಸಂಗಣ್ಣ ಇತರರು ಇದ್ದರು.

- - -

-6ಕೆಡಿವಿಜಿ31: ದಾವಣಗೆರೆಯಲ್ಲಿ ಜಯದೇವ ಜಗದ್ಗುರು ಸ್ಮರಣೋತ್ಸವ ಕಾರ್ಯಕ್ರಮ ಆಯೋಜನೆ ಕುರಿತು ಡಾ.ಬಸವಪ್ರಭು ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

-6ಕೆಡಿವಿಜಿ32: ಲಿಂಗೈಕ್ಯ ಜಯದೇವ ಶ್ರೀಗಳ ನೂತನ ಬೆಳ್ಳಿ ಮೂರ್ತಿ.

-6ಕೆಡಿವಿಜಿ33: 21 ಅಡಿ ಎತ್ತರ 3 ಅಡಿ ಕಳಸ ಹೊಂದಿದ ಬೃಹತ್ ನೂತನ ರಥ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಥಿಲಾವಸ್ಥೆಯಲ್ಲಿ ನೆಮ್ಮಾರು ಅಂಚೆ ಕಚೇರಿ!
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ, ಆರೋಗ್ಯ ಕಾಪಾಡಿ: ಡಾ. ಸಿದ್ದರಾಮಯ್ಯ ಸಲಹೆ