ಹರಿಹರ: ನಗರದ ಪೇಟೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಮಹಾಗಣಪತಿ ಸಮಿತಿಯಿಂದ 6ನೇ ವರ್ಷದ ಗಣೇಶೋತ್ಸವ ಅಂಗವಾಗಿ ಬೆಳಿಗ್ಗೆ ಹೋಮ ಕಾರ್ಯಕ್ರಮವಿದ್ದು, ನಗರದ ಶಕ್ತಿದೇವತೆಗಳ ಸಮಾಗಮವಾಗಲಿವೆ.
ಕೋಟೆ ಕೇರಿಯ ಗುರುದತ್ತ ಶಾಸ್ತ್ರಿ ಹಾಗೂ ತಂಡದಿಂದ ಸೆ.4ರಂದು ಬೆಳಗ್ಗೆ 8ಕ್ಕೆ ಶ್ರೀ ನವಗ್ರಹ ಹೋಮ ಮಹಾಗಣಪತಿ ಹೋಮ, ಮಹಾಮೃತ್ಯುಂಜಯ ಹೋಮ, ಮನ್ಯು ಸೂಕ್ತ ಹೋಮ, ದೇವಿ ಸೂಕ್ತ ಹೋಮ ನಡೆಯಲಿವೆ. ಗ್ರಾಮದೇವತೆ ಶ್ರೀ ಊರಮ್ಮ ದೇವಿ, ಶ್ರೀ ಏಕನಾಥೇಶ್ವರಿ ಅಮ್ಮ, ಶ್ರೀ ಕಾಶಿ ದುರ್ಗಮ್ಮ, ಶ್ರೀ ಪೇಟೆ ಆಂಜನೇಯ ಸ್ವಾಮಿ ದೇವರುಗಳ ಕಾರ್ಯಕ್ರಮಗಳು ನಡೆಯಲಿವೆ.ಅನಂತರ ವಿಘ್ನೇಶ್ವರ ಪ್ರತಿಷ್ಠಾನ ಮಂಟಪದಲ್ಲಿ ಸಂಜೆ 5.30ಕ್ಕೆ ನಗರದ ಪಾಂಚಜನ್ಯ ಮಂಡಳಿಯಿಂದ ಲಲಿತ ಸಹಸ್ರ ನಾಮ, ಸೌಂದರ್ಯ ಲಹರಿ, ಶಿವಾನಂದಿ ಲಹರಿ ಪಠಣ ಕಾರ್ಯಕ್ರಮ ನಡೆಯಲಿವೆ. ಸೆ.3ರಿಂದ ಸೆ.12ರವರೆಗೆ ಮಹಾಗಣಪತಿ ಮಂಟಪದಲ್ಲಿ ಪ್ರತಿದಿನ ಸಂಜೆ 6.30ರಿಂದ ಶ್ರೀ ಗುರು ಸಾರ್ವಭೌಮ, ದಾಸ ಸಾಹಿತ್ಯ ಪ್ರಾಜೆಕ್ಟ್, ಹರಿಹರ ಅವರಿಂದ ಭಜನೆ. ಸೆ.5ರ ಸಂಜೆ 6.30ಕ್ಕೆ ರಾಧಾಕೃಷ್ಣ ಮಂಡಳಿಯಿಂದ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮವಿದೆ. ಹಿಂದೂ ಮಹಾಗಣಪತಿ ಸಮಿತಿಯಿಂದ ಮಕ್ಕಳ ವೇಷಭೂಷಣ ಕಾರ್ಯಕ್ರಮ, ಸೆ.6ರಂದು ಸಂಜೆ 5.30ಕ್ಕೆ ಅಕಾರ್ ಡ್ರಾಯಿಂಗ್ ಸ್ಕೂಲ್ ಅವರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ವಿಶೇಷವಾಗಿ ಸೆ.7 ಸಂಜೆ 6.30ರಿಂದ ಮಹಾಗಣಪತಿ ಮಂಟಪದಲ್ಲಿ ದೀಪೋತ್ಸವ ನಡೆಯಲಿದೆ. ಸೆ.8 ಸಂಜೆ 6 ರಿಂದ 7 ಚಂದ್ರಿಕಾ ಭಜನಾ ಮಂಡಳಿ,7 ರಿಂದ ಶ್ರೀ ಗುರುದತ್ತ ಪಾದುಕ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.9ರ ಸಂಜೆ 6 ಗಂಟೆಗೆ ರುಕ್ಮಿಣಿ ಮಹಿಳಾ ಮಂಡಳಿಯಿಂದ ಭಜನೆ ನಂತರ 7ಕ್ಕೆ ಶ್ರೀ ಗುರು ಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್, ಹರಿಹರ ಅವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.ಸೆ.10 ರಂದು ಆಕಾರ್ ಡ್ರಾಯಿಂಗ್ ಸ್ಕೂಲ್ ಮಕ್ಕಳಿಂದ ಚಿತ್ರಕಲೆ ಬಿಡಿಸುವ ಕಾರ್ಯಕ್ರಮ, ಸೆ.11ರ 6.30 ರಿಂದ 7.30 ಶ್ರೀ ನಾಟ್ಯಅಂಜಲಿ ಹರಿಹರ ಅವರಿಂದ ಭರತನಾಟ್ಯ ಮತ್ತು 7.30 ರಿಂದ 8.30 ಕಲಾ ಕಲ್ಪನಾ ಕಲಾ ಶಾಲೆ, ದಾವಣಗೆರೆ ವೇದಕಲಾ ಸಂಗಡಿಗರಿಂದ ಭರತನಾಟ್ಯ ಕಾರ್ಯಕ್ರಮವಿದೆ. ಸೆ,12ರ ಸಂಜೆ 6ರಿಂದ ವಾಸವಿ ಪ್ರಣತಿ ಮಹಿಳಾ ಮಂಡಳಿಯಿಂದ ಭಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಸುರೇಶ ಚಂದಾಪುರ್ ತಿಳಿಸಿದ್ದಾರೆ.