ಕನ್ನಡಪ್ರಭ ವಾರ್ತೆ ಶಿರಾ
ಅವರು ನಗರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಟಿಬಿಜೆ ಅಭಿಮಾನಿ ಬಳಗ ಹಾಗೂ ತಾಲೂಕು ಕಂಚಿಟಿಗರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು. ಟಿ.ಬಿ.ಜಯಚಂದ್ರ ಅವರು ಬಡ ರೈತನ ಮಗನಾಗಿ ರಾಜಕೀಯ ಪ್ರವೇಶಿಸಿ ತಮ್ಮ ರಾಜಕೀಯ ಜೀವನದುದ್ದಕ್ಕೂ ತನಗೆ ಮತ ನೀಡಿದ ಮತದಾರರನ್ನು ಎಂದಿಗೂ ಮರೆಯಲಿಲ್ಲ. ಕೃಷ್ಣ ಕೊಳ್ಳ ನೀರಾವರಿ ಸಮಿತಿ, ಭದ್ರಾ ಮೇಲ್ದಂಡೆ ಹೋರಾಟ ಸಮಿತಿ ಮಾಡಿಕೊಂಡು ಬಯಲುಸೀಮೆ ಜನರ ದಾಹ ನೀಗಿಸಲು ಹಗಲಿರುಳು ಶ್ರಮವಹಿಸಿದ ದಣಿವರಿಯದ ನಾಯಕ. ಅವರ ಹೋರಾಟ ಪ್ರಬುದ್ಧತೆ ಮತ್ತು ತಮಗಿರುವ ಇಚ್ಚಾಶಕ್ತಿಯಿಂದ ಎಷ್ಟೇ ಕಾನೂನು ತೊಡಕು, ವೈಯಕ್ತಿಕ ನಿಂದನೆಗಳನ್ನು ಸಹಿಸಿಕೊಂಡು, ಬರದ ನಾಡಗಿದ್ದ ಶಿರಾ ಸೀಮೆಗೆ ಹೇಮಾವತಿ ನೀರನ್ನು ಸತತ ೨೨ ವರ್ಷಗಳಿಂದ ಹರಿಸಿ ಜನರ ದಾಹ ನೀಗಿಸಿ, ತಾಲೂಕಿನ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಲು ಕಾರಣಕರ್ತರಾಗಿದ್ದಾರೆ ಇಂತಹ ನಾಯಕರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ನೀಡಲೇ ಬೇಕು ಎಂದು ಒತ್ತಾಯಿಸಿದರು.
ತಾಲೂಕು ಕುಂಚಿಟಿಗರ ಸಂಘದ ಕಟ್ಟಡ ಸಮಿತಿ ಅಧ್ಯಕ್ಷ ಎಂ.ಆರ್.ಶಶಿಧರ ಅವರು ಮಾತನಾಡಿದರು.ಈ ವೇಳೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜು, ಕುಂಚಿಟಿಗರ ಸಂಘದ ಉಪಾಧ್ಯಕ್ಷ ಷಣ್ಮುಖಪ್ಪ, ಬಿ.ಜುಂಜಯ್ಯ, ಕಾಂತರಾಜು.ಕೆ, ರಂಗನಾಥ್, ಲೋಕೇಶ್, ನರಸಿಂಹಯ್ಯ, ಜನಾರ್ಧನ್, ಬಾಲಚಂದ್ರಪ್ಪ,ಶಿವು ಚಂಗಾವರ,ಮಣಿಕಂಠ, ಅಂಜನ್ ಕುಮಾರ್, ಹೇಮಂತ್ ಗೌಡ, ರಾಧಾಕೃಷ್ಣ, ಮಹೇಶ್, ನೂರುದ್ದೀನ್, ಅಶೋಕ್, ನರೇಶ್ ಗೌಡ ಇತರರಿದ್ದರು.