ಹೊಸಪೇಟೆ: ವಿಶ್ವವಿಖ್ಯಾತ ಹಂಪಿಗೆ ದೇಶ, ವಿದೇಶಿ ಪ್ರವಾಸಿಗರು ಹೊಸ ವರ್ಷಾಚರಣೆಗೆ ಆಗಮಿಸಿದ್ದು, ಬುಧವಾರ ಅಂದಾಜು 20 ಸಾವಿರ ಪ್ರವಾಸಿಗರು ಹಂಪಿ ಸ್ಮಾರಕಗಳನ್ನು ವೀಕ್ಷಿಸಿದರು.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ ಸಾಲು ಮಂಟಪ, ಎದುರು ಬಸವಣ್ಣ ಮಂಟಪ, ಕಡಲೆಕಾಳು ಗಣೇಶ ಮಂಟಪ, ಸಾಸಿವೆಕಾಳು ಗಣೇಶ ಮಂಟಪ, ಶ್ರೀಕೃಷ್ಣ ದೇವಾಲಯ, ಉದ್ದಾನ ವೀರಭದ್ರೇಶ್ವರ ದೇಗುಲ, ಬಡವಿ ಲಿಂಗ, ಉಗ್ರ ನರಸಿಂಹ, ಮಹಾನವಮಿ ದಿಬ್ಬ, ಕಮಲ ಮಹಲ್, ಗಜಶಾಲೆ, ವಿಜಯ ವಿಠಲ ದೇವಾಲಯ, ಪುರಂದರದಾಸರ ಮಂಟಪ, ಮಾತಂಗ ಪರ್ವತ, ಮಾಲ್ಯವಂತ ದೇಗುಲ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
ಸೂರ್ಯೋದಯ ವೀಕ್ಷಣೆ:ಹಂಪಿಯ ಮಾತಂಗ ಪರ್ವತ ಹಾಗೂ ಮಾಲ್ಯವಂತ ರಘುನಾಥ ದೇವಾಲಯದ ಬಳಿ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ ಮಾಡಿದರು. ಹಂಪಿಯಲ್ಲಿ ಬೆಳ್ಳಂಬೆಳ್ಳಗ್ಗೆ ಸೂರ್ಯೋದಯ ವೀಕ್ಷಣೆ ಮಾಡುವ ಮೂಲಕ 2025ನೇ ವರ್ಷವನ್ನು ಸ್ವಾಗತಿಸಿದರು. ಹಂಪಿಯ ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್, ತುಂಗಭದ್ರಾ ಜಲಾಶಯದಲ್ಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದ ಬಳಿ ಬುಧವಾರ ಕಂಡು ಬಂದ ಪ್ರವಾಸಿಗರು.