- ಶೇ.70ರಷ್ಟು ಕಾಮಗಾರಿ ಮಾತ್ರ ಅಂತ್ಯ । 2026ರ ಏಪ್ರಿಲ್ ಮಾಹೆಗೆ ಯೋಜನೆ ಲೋಕಾರ್ಪಣೆ ಸಾಧ್ಯತೆ
ಬಾ.ರಾ.ಮಹೇಶ್, ಚನ್ನಗಿರಿ
ಕನ್ನಡಪ್ರಭ ವಾರ್ತೆ ಚನ್ನಗಿರಿಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾದ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಕಳೆದ 30 ತಿಂಗಳಿನಿಂದ ನಡೆಯುತ್ತಿದ್ದು, ಶೇ.70ರಷ್ಟು ಕೆಲಸ ಮುಗಿದಿದೆ. ಆದರೆ, ಬಾಕಿ ಇರುವ ಶೇ.30ರಷ್ಟು ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.
₹86.65 ಕೋಟಿ ಬಿಡುಗಡೆ:
5,500 ಮನೆಗಳಿಗೆ ಸಂಪರ್ಕ:
ಇನ್ನು ಆಯಾ ಕಟ್ಟಿನ ಪ್ರದೇಶಗಳಾದ ರಾಷ್ಟ್ರೀಯ ಹೆದ್ದಾರಿಯ 2 ಕಡೆ ಹೆದ್ದಾರಿಯನ್ನು ಕತ್ತರಿಸಿ 6ರಿಂದ 8 ಇಂಚಿನ ಪೈಪ್ ಅಳವಡಿಕೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಪೈಪ್ ಲೈನ್ ಮಾಡಲು ಅನುಮತಿ ನೀಡಲಿದ್ದಾರೆ. ಒಳಚರಂಡಿ ನೀರು ಸರಾಗವಾಗಿ ಹರಿಯಲು ಪಟ್ಟಣ ವ್ಯಾಪ್ತಿಯಲ್ಲಿ 4 ಕಡೆ ವೆಟರ್ವೆಲ್ (ತೇವದಬಾವಿ) ನಿರ್ಮಾಣ ಮಾಡಲು ಜಾಗ ವಶಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಯೋಜನೆ ಪ್ರಗತಿ ಕುರಿತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಎನ್.ಗುರುದತ್ ಹೇಳುವಂತೆ, ಮನೆಗಳ ಶೌಚಾಲಯಗಳ ನೀರು ಸರಾಗವಾಗಿ ಹರಿಯಲು 1885 ಮಿಷನ್ ಹೋಲ್‌ಗಳ ನಿರ್ಮಾಣದಲ್ಲಿ ಈಗಾಗಲೇ 1310 ಮಿಷನ್ ಹೋಲ್‌ಗಳ ನಿರ್ಮಾಣವಾಗಿದೆ. 2026ರ ಏಪ್ರಿಲ್ ತಿಂಗಳಿನಲ್ಲಿ ಚನ್ನಗಿರಿ ಪಟ್ಟಣದ ಜನತೆಗೆ ಈ ಒಳಚರಂಡಿ ಬಳಕೆ ಮಾಡಿಕೊಳ್ಳಲು ಅರ್ಪಣೆ ಮಾಡಲಾಗುವುದು ಎಂದಿದ್ದಾರೆ.
- - -
ಚನ್ನಗಿರಿ ಪಟ್ಟಣದ ಜನತೆಗೆ ಇದೊಂದು ಉತ್ತಮವಾದ ಯೋಜನೆಯಾಗಿದೆ. ಅಂತಿಮವಾಗಿ ಮಲೀನ ನೀರು ಶುದ್ಧೀಕರಣಗೊಳಿಸುವ 5.2 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕವನ್ನು ಗರಗ ಬಳಿ ಇರುವ ತೋಟಗಾರಿಕಾ ಇಲಾಖೆ ಫಾರಂನಲ್ಲಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಫಾರಂನಲ್ಲಿನ ಬೆಳೆಗಳಿಗೆ ಇದೇ ನೀರನ್ನು ಬಳಕೆ ಮಾಡಿಕೊಳ್ಳಲು ಯೋಜನೆ ರೂಪುಗೊಂಡಿದೆ.
- ಎಂ.ಬಿ.ರವಿ, ಸಹಾಯಕ ಕಾರ್ಯಪಾಲಕ ಅಭಿಯಂತರ.- - -
ಚನ್ನಗಿರಿ ಪಟ್ಟಣದಲ್ಲಿ ನಿರ್ಮಾಣ ಆಗುತ್ತಿರುವ ಒಳಚರಂಡಿ ಕಾಮಗಾರಿ ಪಟ್ಟಣದ ಜನತೆಗೆ ವರದಾನವಾಗಿದೆ. ಈ ಕಾಮಗಾರಿ ಆರಂಭಗೊಂಡು 2 ವರ್ಷಗಳು ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಳ್ಳುತ್ತಿಲ್ಲ. ಇದು ನಾಗರೀಕರ ದೌಭಾಗ್ಯ. ಆದಷ್ಟು ಶೀಘ್ರದಲ್ಲಿಯೇ ಈ ಕಾಮಗಾರಿ ಪೂರ್ಣಗೊಂಡು ಪಟ್ಟಣದ ಜನತೆಯ ಉಪಯೋಗಕ್ಕೆ ಅರ್ಪಣೆಯಾಗಬೇಕಾಗಿದೆ.- ಪಿ.ಬಿ.ನಾಯಕ, ಮಾಜಿ ಸದಸ್ಯ, ಪುರಸಭೆ.
ಒಳಚರಂಡಿಯ ಮಿಷನ್ ಹೋಲ್‌ಗಳಿಗೆ ಸಂಪರ್ಕ ನೀಡಲು 3 ಇಂಚಿನ ಪೈಪ್‌ಗಳನ್ನು ಅಳವಡಿಸಿದ್ದಾರೆ. ಇದರಲ್ಲಿ ಪಟ್ಟಣದ ತ್ಯಾಜ್ಯ ಹೇಗೆ ಸರಾಗವಾಗಿ ಹೋಗುತ್ತದೆ? ಪಟ್ಟಣದ ಜನತೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರು ಜಾರಿಗೊಳಿಸಿದ ಈ ಒಳಚರಂಡಿ ಯೋಜನೆ ಯಾವುದೇ ತೊಂದರೆಗಳು ಎದುರಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.- ನಟರಾಜ ರಾಯ್ಕರ್, ವರ್ತಕ.
- - --14ಕೆಸಿಎನ್‌ಜಿ1:
ಮಲೀನ ನೀರು ಶುದ್ಧೀಕರಣಗೊಳಿಸುವ 5.2 ಎಂ.ಎಲ್.ಡಿ ಸಾಮರ್ಥ್ಯದ ಶುದ್ಧೀಕರಣ ಘಟಕ ಕಾಮಗಾರಿ ಪ್ರಗತಿಯಲ್ಲಿರುವುದು.