ಬಸ್‌ಗೆ ಟ್ರಾಕ್ಟರ್ ಡಿಕ್ಕಿ: ಇಬ್ಬರ ದಾರುಣ ಸಾವು

KannadaprabhaNewsNetwork |  
Published : Jan 24, 2025, 12:48 AM IST
23ಎಂಡಿಎಲ್03:  | Kannada Prabha

ಸಾರಾಂಶ

ಮುದಗಲ್ ಸಮೀಪದ ಬನ್ನಿಗೋಳ ಗ್ರಾಮದ ಹೊರವಲಯದಲ್ಲಿ ಗುರುವಾರ ಬೆಳಗಿನ ಜಾವ ಟ್ರಾಕ್ಟರ್ ಮತ್ತು ಸಾರಿಗೆ ಬಸ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಟ್ರಾಕ್ಟರ್ ಟ್ರಾಲಿ ಪಲ್ಟಿಯಾಗಿರುವುದು.

ಕನ್ನಡಪ್ರಭ ವಾರ್ತೆ ಮುದಗಲ್ಸಾರಿಗೆ ಬಸ್, ಟ್ರಾಕ್ಟರ್ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, 18 ಜನರಿಗೆ ಗಾಯಗೊಂಡಿರುವ ಘಟನೆ ಸಮೀಪದ ಬನ್ನಿಗೋಳ ಗ್ರಾಮದ ಸಮೀಪ ಗುರುವಾರ ಬೆಳಗಿನ ಜಾವ ನಡೆದಿದೆ.ಕಡಲೆ ಬೆಳೆ ಕೀಳಲು 24ಕ್ಕೂ ಹೆಚ್ಚು ಕೂಲಿಕಾರರನ್ನು ಕೂಲಿ ಕೆಲಸಕ್ಕೆಂದು ಟ್ರಾಕ್ಟರ್‌ನಲ್ಲಿ ತೆರಳುವ ಸಂದರ್ಭದಲ್ಲಿ ಅಂಕಲಿಮಠದಿಂದ ಲಿಂಗಸಗೂರುಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ನಡೆದಿದೆ.ರಸ್ತೆ ಅಪಘಾತದಲ್ಲಿ ಟ್ರಾಕ್ಟರ್ ನಲ್ಲಿದ್ದ ಒಬ್ಬ ಮಹಿಳೆ ಶ್ರೀದೇವಿ ಸಿದ್ದಪ್ಪ ಪಿಕಳಿಹಾಳ (19) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ 4 ತಿಂಗಳ ಗರ್ಭಿಣಿ ಅಮರಮ್ಮ ನಿಂಗಪ್ಪ ಬನ್ನಿಗೋಳ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಗಾಯಗೊಂಡವರನ್ನು ಬನ್ನಿಗೋಳ ಗ್ರಾಮದ ಮೌನೇಶ, ಶಾಂತಮ್ಮ, ಶರಣಪ್ಪ, ಪಾರ್ವತೆಮ್ಮ, ಶೇಖಪ್ಪ, ಶಿವಪ್ಪ, ನಿಂಗಪ್ಪ, ಮೌನೇಶ, ಭಂಡಾರೆಪ್ಪ, ಅವರನ್ನು ಮುದಗಲ್ ಹಾಗೂ ಲಿಂಗಸಗೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತ 2 ಕೂಡ ವರ್ಷದಿಂದಷ್ಟೇ ಮದುವೆಯಾಗಿದ್ದು, ಅಂತರ್ ಅಮವಾಸ್ಯೆ ಹಿನ್ನೆಲೆಯಲ್ಲಿ ತವರಿಗೆ ಮರಳಿದ ಇಬ್ಬರು ಮಹಿಳೆಯರು ಕೂಲಿ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆ ಬೆಳಗಿನ ಜಾವ ಸಂಭವಿಸಿದ ಹಿನ್ನೆಲೆಯಲ್ಲಿ ತುರ್ತು ಸೇವೆಗಳು ಸಕಾಲಕ್ಕೆ ಆಗಮಿಸದೇ ಇದ್ದುದರಿಂದ ಗಾಯಾಳುಗಳನ್ನು ಸ್ಥಳೀಯ ಬನ್ನಿಗೋಳ ಗ್ರಾಮಸ್ಥರು ಖಾಸಗಿ ವಾಹನ, ಬೈಕ್ ಗಳನ್ನು ಬಳಸಿಕೊಂಡು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಹೆಚ್ಚು ಗಾಯಗೊಂಡ 6 ಜನರ ಪೈಕಿ ಲಿಂಗಸಗೂರು ತಾಲೂಕು ಆಸ್ಪತ್ರೆಯಿಂದ ಬಾಗಲಕೋಟೆಗೆ ಹೆಚ್ಚಿನ ಚಿಕಿತ್ಸೆಗೆ ಅಮರಮ್ಮ ನಿಂಗಪ್ಪ ಬನ್ನಿಗೋಳ ಚಿಕಿತ್ಸೆಗೆ ದಾಖಲಿಸಿದರೂ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನಾ ಸ್ಥಳಕ್ಕೆ ಮಸ್ಕಿ ವೃತ್ತ ನಿರೀಕ್ಷಕ ಬಾಲಚಂದ್ರ ಲಕ್ಕಂ, ಮುದಗಲ್ ಠಾಣೆ ಪಿ.ಎಸ್.ಐ ವೆಂಕಟೇಶ ಮಾಡಗೇರಿ, ಕ್ರೆöÊಂ ಪಿ.ಎಸ್.ಐ. ಛತ್ರಪ್ಪ ರಾಠೋಡ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಮೇವಿನ ಬಣವೆಗೆ ಬೆಂಕಿ: ತಪ್ಪಿದ ಭಾರೀ ಅನಾಹುತತುರ್ವಿಹಾಳ: ಪಟ್ಟಣದ 2ನೇ ವಾರ್ಡಿನ ಹಳ್ಳದ ಪಕ್ಕದಲ್ಲಿ ಇರುವ ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ 8 ಎಕ್ಕರೆ ಹುಲ್ಲಿನ ಬಣವೆ ಸುಟ್ಟು ಹೋದ ಘಟನೆ ಬುಧವಾರ ರಾತ್ರಿ ನಡೆದಿದೆ.ಶಂಕ್ರಪ್ಪ ಗುಂತ ಇವರ ಸುಮಾರು 8 ಎಕ್ಕರೆ ಹುಲ್ಲಿ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದನ್ನು ಕಂಡು ಸಾರ್ವಜನಿಕರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಸಮಯಕ್ಕೆ ಸರಿಯಾಗಿ ಬಂದ ಎಫ್ಎಸ್ಓ ನರಸಪ್ಪ ಅವರ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಬಣವೆ ಅಕ್ಕಪಕ್ಕದಲ್ಲಿ ಮನೆಗಳಿದ್ದು, ಅಗ್ನಿಶಾಮಕ ದಳದ ಕಾರ್ಯಾಚರಣೆಯಿಂದ ಭಾರೀ ದೊಡ್ಡದೊಂದು ಅನಾಹುತ ತಪ್ಪಿದಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!