ವರದಾ ನದಿಗೆ ಉರುಳಿದ ಟ್ರ್ಯಾಕ್ಟರ್‌: ಇಬ್ಬರು ಪಾರು

KannadaprabhaNewsNetwork |  
Published : Aug 13, 2025, 12:30 AM IST
ದೀಪಕ್ ಸುರೇಶಗೌಡ್ರ ದೊಡ್ಡಗೌಡ್ರ ಅವರನ್ನು ನದಿಯಿಂದ ಕಾಪಾಡುತ್ತಿರುವುದು. | Kannada Prabha

ಸಾರಾಂಶ

ಮರಡೂರ ಗ್ರಾಮದ ದೀಪಕ್‌ ಸುರೇಶಗೌಡ ದೊಡ್ಡಗೌಡ್ರ ಹಾಗೂ ಶಾಂತಪ್ಪ ರಾಮನಗೌಡ ಪಾಟೀಲ್ ಎಂಬವರೇ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಗಳು.

ಗುತ್ತಲ: ಮೆಣಸಿನಕಾಯಿ ಸಾಗಿಸುತ್ತಿದ್ದ ಟ್ರಾಕ್ಟರ್‌ವೊಂದು ವರದಾ ನದಿಗೆ ಬಿದ್ದಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಸಮೀಪದ ಅಕ್ಕೂರ- ಮರಡೂರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಮಂಗಳವಾರ ಸಂಜೆ ನಡೆದಿದೆ.ಮರಡೂರ ಗ್ರಾಮದ ದೀಪಕ್‌ ಸುರೇಶಗೌಡ ದೊಡ್ಡಗೌಡ್ರ ಹಾಗೂ ಶಾಂತಪ್ಪ ರಾಮನಗೌಡ ಪಾಟೀಲ್ ಎಂಬವರೇ ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಗಳು.

ಮರಡೂರ ಗ್ರಾಮದಿಂದ ಅಕ್ಕೂರ ಗ್ರಾಮದ ಕಡೆಗೆ ಹೋಗುವಾಗ ವರದಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ ಮೆಣಸಿಕಾಯಿ ಚೀಲ ತುಂಬಿದ್ದ ಟ್ರ್ಯಾಕ್ಟರ್ ಆಕಸ್ಮಿಕವಾಗಿ ನದಿಗೆ ಮಗುಚಿದೆ. ಆಗ ಶಾಂತಪ್ಪ ರಾಮನಗೌಡ ಪಾಟೀಲ್ ಟ್ರ್ಯಾಕ್ಟರ್‌ನಿಂದ ಜಿಗಿದು ಪಾರಾಗಿದ್ದಾರೆ. ಆದರೆ ದೀಪಕ್ ಸುರೇಶಗೌಡ ದೊಡ್ಡಗೌಡ್ರ ನದಿಯಲ್ಲಿ ಸಿಲುಕಿದ್ದರು.

ನದಿಯ ಮಧ್ಯದ ಗಿಡವೊಂದನ್ನು ಹಿಡಿದುಕೊಂಡು ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದರು. ವಿಷಯ ತಿಳಿದು ನೂರಾರು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಸ್ಥಳದಲ್ಲಿದ್ದ ಫಕ್ಕೀರಪ್ಪ ಕಾಕೋಳ ಎಂಬವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಮೈದುಂಬಿ ರಭಸವಾಗಿ ಹರಿಯುತ್ತಿದ್ದ ವರದಾ ನದಿಯಲ್ಲಿ ಈಜಿ ದೀಪಕ್‌ ಅವರನ್ನು ಕಾಪಾಡಿ ದಡ ಸೇರಿಸಿದ್ದಾರೆ. ಟ್ರ್ಯಾಕ್ಟರ್ ನದಿಯಲ್ಲಿಯೇ ಇದೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ರಾಣಿಬೆನ್ನೂರು: ಸ್ಥಳೀಯ ಸಿದ್ದೇಶ್ವರ ಕೋ- ಆಪ್ ಬ್ಯಾಂಕ್ ವತಿಯಿಂದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಪಠ್ಯಕ್ರಮದ ಪ್ರಕಾರ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಹೆಚ್ಚು ಅಂಕ ಪಡೆದವರು ಹಾಗೂ ದ್ವಿತೀಯ ಪಿಯುಸಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ಪ್ರತಿ ವಿಭಾಗದ ಮೂರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಆ. 22ರ ಒಳಗಾಗಿ ತಮ್ಮ ಅಂಕಪಟ್ಟಿ ಮತ್ತು ವರ್ಗಾವಣಾ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಗಳೊಂದಿಗೆ ನಗರದ ಮೆಡ್ಲೇರಿ ರಸ್ತೆ ಲಯನ್ಸ್ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಆರ್.ವಿ. ಸುರಗೊಂಡ ಅವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ. 9945391073 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!