ಡಿ.10ಕ್ಕೆ 2ಎ ಮೀಸಲಾತಿಗಾಗಿ ಟ್ರ್ಯಾಕ್ಟರ್ ಚಳವಳಿ

KannadaprabhaNewsNetwork |  
Published : Nov 23, 2024, 12:33 AM IST
ಹುಣಸಗಿ ಪಟ್ಟಣದ ಮಲ್ಲಯ್ಯ ದೇವಸ್ಥಾನದಲ್ಲಿ ಡಿ.10ರಂದು 2ಎ ಮೀಸಲಾತಿಗಾಗಿ ಟ್ರ್ಯಾಕ್ಟರ್ ಚಳುವಳಿ ಮೂಲಕ ಬೆಳಗಾವಿ ಸುವರ್ಣಸೌದಕ್ಕೆ ಮುತ್ತಿಗೆ ಹಾಕುವ ಸಲುವಾಗಿ ಜಿಲ್ಲಾ ಮಟ್ಟದ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ನಮ್ಮ ಸಮಾಜದ ಋಣವು ಈ ಸರ್ಕಾರದ ಮೇಲಿದ್ದು, ಮೀಸಲಾತಿಯನ್ನು ಜಾರಿ ಮಾಡುವ ಮೂಲಕ ಸಮಾಜದ ಋಣ ತೀರಿಸಿಕೊಳ್ಳಲಿ, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ನಿರಂತರವಾಗಿ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತ ಹುಣಸಗಿ

ನಮ್ಮ ಸಮಾಜದ ಋಣವು ಈ ಸರ್ಕಾರದ ಮೇಲಿದ್ದು, ಮೀಸಲಾತಿಯನ್ನು ಜಾರಿ ಮಾಡುವ ಮೂಲಕ ಸಮಾಜದ ಋಣ ತೀರಿಸಿಕೊಳ್ಳಲಿ, ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಾವು ನಿರಂತರವಾಗಿ ಮೀಸಲಾತಿ ಹೋರಾಟ ಮಾಡುತ್ತಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಶ್ರೀಗಳು ಹೇಳಿದರು.ಗುರುವಾರ ಹುಣಸಗಿ ಪಟ್ಟಣದಲ್ಲಿ ಡಿ.10 ರಂದು 2ಎ ಮೀಸಲಾತಿಗಾಗಿ ಟ್ರ್ಯಾಕ್ಟರ್ ಚಳುವಳಿ ಮೂಲಕ ಬೆಳಗಾವಿ ಸುವರ್ಣಸೌದಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಂಡಿರುವ ಹಿನ್ನೆಲೆ ಜಿಲ್ಲಾ ಮಟ್ಟದ ಸಭೆಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟಕ್ಕೆ ಕೈ ಜೋಡಿಸಿ, ಡಿ. 10ರಂದು ಸುವರ್ಣ ಸೌಧ ಮುತ್ತಿಗೆ ಹಾಕೋಣ, ಅಂದು ಸುಮಾರು 5 ಲಕ್ಷ ಪಂಚಮಸಾಲಿಗಳು ಬೆಳಗಾವಿಗೆ ಬರಲಿದ್ದಾರೆ, 5 ಸಾವಿರ ಟ್ರ್ಯಾಕ್ಟರ್‌ಗಳನ್ನು ರೈತರು ತರುತ್ತಾರೆ ಎಂದರು. ಮೀಸಲಾತಿಗಾಗಿ ಇದು 7ನೇ ಹಂತದ ಹೋರಾಟವನ್ನು ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಮೀಸಲಾತಿ ಜಾರಿ ಮಾಡುತ್ತದೆ ಎಂಬ ನಂಬಿಕೆ ಇತ್ತು. ಅದು ಕೂಡ ಉಸಿಯಾಗಿದ್ದು. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದಲ್ಲಿಯೂ ಮುತ್ತಿಗೆ ಹಾಕಿದ್ದೇವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಮೀಸಲಾತಿಯನ್ನು ಘೋಷಿಸಬೇಕೆಂದು ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದರು.ಪಕ್ಷಾತೀತವಾಗಿ ಸಮಾಜದ ಪರವಾಗಿ ಹೋರಾಟ ಮಾಡಬೇಕು ಎಂದ ಅವರು, ನಮ್ಮ ಜೊತೆ ಬಂದರೆ, ನಿಮ್ಮ ಅಧಿಕಾರಕ್ಕೆ ಕುತ್ತು ಬರುವುದಾದರೆ ಬಹಿರಂಗವಾಗಿ ಬರದೆ ಅಧಿವೇಶನದಲ್ಲಿ ಸಮಾಜದ ಪರವಾಗಿ ಧ್ವನಿ ಎತ್ತಿ ಎಂದು ವಿವಿಧ ಪಕ್ಷಗಳ ಶಾಸಕರಲ್ಲಿ ಕೇಳಿಕೊಂಡರು. ಮುಖಂಡರಾದ ಚಂದ್ರಶೇಖರ್ ದಂಡಿನ ಮಾತನಾಡಿದರು. ಚೆನ್ನಯ್ಯಸ್ವಾಮಿ ಹಿರೇಮಠ್, ಬಸಲಿಂಗಯ್ಯಸ್ವಾಮಿ ಹಿರೇಮಠ್, ಸಿದ್ದಣ್ಣ ಸಾಹುಕಾರ ಮಲಗಲದಿನ್ನಿ, ಬಸಣ್ಣ ದೇಸಾಯಿ ಬೈಲಕುಂಟಿ, ವಿರೇಶ್ ಬಿ. ಚಿಂಚೋಳಿ, ಬಸವರಾಜ ಮಲಗಲದಿನ್ನಿ, ಮಹಾಂತೇಶ್ ಮಲಗಲದಿನ್ನಿ, ಆರ್.ಎಂ. ರೇವಡಿ, ಜಿಲ್ಲಾಧ್ಯಕ್ಷ ಮಲ್ಲನಗೌಡ ಪಾಟೀಲ್ ಮಾಳನೂರು, ಮುರಿಗೆಣ್ಣ ದೇಸಾಯಿ, ಮೋಹನ್ ಪಾಟೀಲ್ ಕೊಡೇಕಲ್, ಅರುಣಕುಮಾರ ಹಗರಟಗಿ, ಬಸವರಾಜ ಪಡಶೆಟ್ಟಿ, ಮಲ್ಲಣ್ಣ ಬ್ಯಾಕೋಡ, ಬಸವರಾಜ ವೈಲಿ, ಬಸವರಾಜ ಸೇವಟಿ, ಸಂಗನಬಸಪ್ಪ ಗೋಗಿ, ಹೊನ್ನಪ್ಪಗೌಡ ಮೇಟಿ, ರುದ್ರು ದೇಸಾಯಿ, ಭೀಮನಗೌಡ ಮಲ್ಕಾಪೂರ, ವಿ.ಎಸ್. ಚಂಗಳಿ, ಮಲ್ಲಿಕಾರ್ಜುನ ಮಂದಾರ, ಮಂಜುನಾಥ್ ನುಲಿನ್ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು