ಬ್ಯಾಡಗಿ: ಹಾಸನ ಜಿಲ್ಲೆಯ ಅರಸೀಕೆರೆ ಚೆಂಬರ್ ಆಫ್ ಕಾಮರ್ಸ್ ನಿರ್ದೇಶಕ ಮಂಡಳಿ ಸದಸ್ಯರು ಪಟ್ಟಣದ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ವಹಿವಾಟು ಸೇರಿದಂತೆ ರೈತರಿಗೆ ಇಲ್ಲಿ ಸಿಗುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ರೈತರೊಂದಿಗೆ ನಿರಂತರ ಸಂಪರ್ಕ: ಯಾವುದೇ ಮಾರುಕಟ್ಟೆಯನ್ನು ಖ್ಯಾತಿಗೊಳಿಸುವುದು ಸುಲಭದ ಮಾತಲ್ಲ. ಇಲ್ಲಿನ ವರ್ತಕರು ನೂರಾರು ವರ್ಷಗಳಿಂದ ರೈತರೊಂದಿಗೆ ನಿರಂತರ ಸಂಪರ್ಕ ಸಾಧಿಸಿಕೊಂಡಿಟ್ಟುರುವುದೇ ಪ್ರಮುಖ ಕಾರಣವಾಗಿದೆ. ಒಂದು ಮಾರುಕಟ್ಟೆಯನ್ನು ನೆಚ್ಚಿ ಐದಾರು ನೂರು ಕಿಮೀಗಳಿಂದ ರೈತರು ಮೆಣಸಿನಕಾಯಿ ಮಾರಾಟಕ್ಕೆ ಬರುತ್ತಿದ್ದಾರೆ ಎಂದರೆ ನಂಬಲಸಾಧ್ಯ ಎಂದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್. ನದಾಫ್, ಕುಮಾರಗೌಡ ಪಾಟೀಲ, ಬಿ.ಎಂ. ಛತ್ರದ, ಮಹಾಂತೇಶ ಆಲದಗೇರಿ, ಮಲ್ಲಣ್ಣ ಹುಚಗೊಂಡರ, ಚಂದ್ರಶೇಖರ ಅಂಗಡಿ, ದತ್ತಾತ್ರೇಯ ಸಾಳುಂಕೆ, ಶೈಲೇಶ ಬೂದಿಹಾಳಮಠ, ಜಗದೀಶ ರೋಣದ, ಧನಶೆಟ್ರ ಕೊಂಚಿಗೇರಿ, ಸಿದ್ಧನಗೌಡ ಪಾಟೀಲ, ಶಂಭು ಮಠದ, ಎನ್.ಎಚ್. ಹುಗ್ಗಿ, ಎಸ್.ಎಂ. ಸುಂಕಾಪೂರ, ವೀರಯ್ಯ ಬೂದಿಹಾಳಮಠ ಇತರರು ಇದ್ದರು.