ಅತಿ ಸಣ್ಣ ವ್ಯಾಪಾರಸ್ಥರು, ಉದ್ಯಮದಾರರಿಗೆ ಟ್ರೇಡ್ಸ್ ನಡಿ ಹಲವು ಪ್ರಯೋಜನ: ನಾಗೇಂದ್ರ ಪ್ರಸಾದ್

KannadaprabhaNewsNetwork |  
Published : Nov 27, 2025, 02:45 AM IST
ಚಿತ್ರ :  24ಎಂಡಿಕೆ2 : ಕಾರ್ಯಾಗಾರದ ಉದ್ಘಾಟನೆ.  | Kannada Prabha

ಸಾರಾಂಶ

ಟ್ರೇಡ್ಸ್‌ ಯೋಜನೆಯಡಿ ಕೈಗಾರಿಕೋದ್ಯಮಿಗಳಿಗೆ ಹಲವು ಯೋಜನೆಗಳಿದ್ದು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ನಾಗೇಂದ್ರ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಟ್ರೇಡ್ಸ್ ಯೋಜನೆಯಡಿ ವ್ಯಾಪಾರಸ್ಥರು ಮತ್ತು ಕೈಗಾರಿಕೋದ್ಯಮಿಗಳಿಗೆ ಹಲವು ಯೋಜನೆಗಳಿದ್ದು, ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರ ಪ್ರಸಾದ್ ಅವರು ತಿಳಿಸಿದ್ದಾರೆ. 2025-26 ನೇ ಸಾಲಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸುವುದು ಹಾಗೂ ವೇಗಗೊಳಿಸುವ (ಆರ್‌ಎಎಂಪಿ) ಯೊಜನೆಯಡಿ ಕೊಡಗು ಜಿಲ್ಲೆಯಲ್ಲಿ ಉದ್ಯಮ ನೋಂದಣಿ ಪಡೆದಿರುವ ನೋಂದಾಯಿತ ಉದ್ಯಮಿಗಳಿಗೆ ಟ್ರೇಡ್ ರಿಸಿವೇಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ (ಟಿಆರ್‌ಎಡಿಎಸ್) (ಟ್ರೆಡ್ಸ್ ಎಂದರೆ ವ್ಯಾಪಾರ ಹಣ ರಿಯಾಯಿತಿ ವ್ಯವಸ್ಥೆ) ಆನ್‌ಲೈನ್ ಪ್ಲಾಟ್‌ಫಾರ್ಮ್ಗೆ ಸಂಬಂಧಿಸಿದಂತೆ ನಗರದ ಹೋಟೆಲ್ ರೆಡ್‌ಬ್ರಿಕ್ಸ್ನಲ್ಲಿ ಸೋಮವಾರ ನಡೆದ ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಯುವ ಜನರಿಗೆ ಉದ್ಯೋಗ ಒದಗಿಸುವಲ್ಲಿ ಬೃಹತ್ ಮತ್ತು ಸಣ್ಣ ಕೈಗಾರಿಕೆಗಳ ಪಾತ್ರ ಪ್ರಮುಖವಾಗಿದೆ. ಆ ನಿಟ್ಟಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಹಾಗೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪಾತ್ರ ಹೆಚ್ಚಿನದ್ದಾಗಿದೆ ಎಂದರು. ಟೆಕ್ಸಾಕ್ ಸಂಸ್ಥೆಯ ಸಿಇಒ ಹಾಗೂ ಮುಖ್ಯ ಸಲಹೆಗಾರರಾದ ಸಿದ್ದರಾಜು ಮಾತನಾಡಿ, ಟ್ರೇಡ್ಸ್ ರಿಸಿವೇಬಲ್ ಎಲೆಕ್ಟ್ರಾನಿಕ್ಸ್ ಡಿಸ್ಕೌಂಟಿಂಗ್ ವ್ಯವಸ್ಥೆಯು ಗ್ರಾಹಕರು ಮತ್ತು ಉದ್ಯಮದಾರರಿಗೆ ಅನುಕೂಲವಿದ್ದು, ಇದರಲ್ಲಿ ನೋಂದಣಿ ಮಾಡಿಕೊಂಡು ವ್ಯಾಪಾರ, ವಹಿವಾಟು ನಡೆಸುವಂತಾಗಬೇಕು ಎಂದು ಅವರು ಹೇಳಿದರು.ಹಲವು ಯೋಜನೆ:

ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಗಂಗಾಧರ್ ನಾಯಕ್ ಮಾತನಾಡಿ ಬ್ಯಾಂಕ್‌ಗಳ ಮೂಲಕ ಹಲವು ಯೋಜನೆಗಳಿದ್ದು, ಅವುಗಳನ್ನು ಬಳಸಿಕೊಳ್ಳುವಂತಾಗಬೇಕು ಎಂದರು. ಬೀದಿ ಬದಿ ವ್ಯಾಪಾರಿಗಳಿಗೆ ಸಹಾಯಧನ ಕಲ್ಪಿಸಲಾಗುತ್ತದೆ. ಸಣ್ಣ ಸಣ್ಣ ವ್ಯಾಪಾರಿಗಳಿಗೆ ಹಲವಾರು ಸೌಲಭ್ಯಗಳಿದ್ದು, ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗುವತ್ತ ಗಮನಹರಿಸಬೇಕು ಎಂದು ಹೇಳಿದರು.

ಸಾಲ ಯೋಜನೆ ಒದಗಿಸಲಾಗುತ್ತದೆ: ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕರಾದ ಕೆ. ಹನುಮಂತರಾಯ ಮಾತನಾಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕೆ, ಆರೋಗ್ಯ ಮತ್ತು ಆತಿಥ್ಯ ಸೇವಾ ಘಟಕಗಳಿಗೆ ಹಾಗೂ ನಿರ್ಮಾಣ/ ರಿಯಲ್ ಏಸ್ಟೇಟ್ ಚಟುವಟಿಕೆಗಳ ಘಟಕಗಳಿಗೆ 10 ಲಕ್ಷ ರು. ದಿಂದ 10 ಕೋಟಿ ರು. ಗಳವರೆಗೆ ಬಡ್ಡಿ ಸಹಾಯಧನ ಸಾಲ ಯೋಜನೆ ಒದಗಿಸಲಾಗುತ್ತದೆ ಎಂದು ಹೇಳಿದರು.ಮಂಗಳೂರು ಬ್ರಾಂಚ್ ಇನ್ ಚಾರ್ಜ್ ಬಿ.ಆರ್ ಎಂ.ಎಸ್.ಎಂ.ಇ.ಡಿ ಎಫ್.ಓ ಯಯ್ಯಾಡಿ ಕೈಗಾರಿಕಾ ವಸಾಹತು ವಿಭಾಗದ ಸಹಾಯಕ ನಿರ್ದೇಶಕರಾದ ಎಂ.ಸುಂದರ ಸೆರಿಗಾರ್ ಅವರು ಮಾತನಾಡಿ, ಸೃಜನಶೀಲವಾಗಿ ವಿಷಯಗಳ ಬಗ್ಗೆ ಆಲೋಚನೆ ಮಾಡಿದರೆ ಸಾರ್ವಜನಿಕರಿಗೆ ನಿಖರವಾಗಿ ಸೌಲಭ್ಯ ಒದಗಿಸಲು ಅನುಕೂಲ ಆಗಲಿದೆ ಎಂದರು. ಕೆಎಸ್‌ಎಫ್‌ಸಿ ಎಜಿಎಂ ರವಿ ಅವರು ಮಾತನಾಡಿ, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ವತಿಯಿಂದ ಆಕರ್ಷಕ ಬಡ್ಡಿದರದಲ್ಲಿ ಸಾಲ ಯೋಜನೆಗಳು ದೊರೆಯಲಿವೆ. ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕಾ ಚಟುವಟಿಕೆಗಳ ಘಟಕಗಳಿಗೆ 5 ಲಕ್ಷ ದಿಂದ 5 ಕೋಟಿ ರು..ಗಳವರೆಗೆ ಶೇ.5.5 ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ, ಮಹಿಳಾ ಉದ್ಯಮಿಗಳಿಗೆ ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ 5 ಲಕ್ಷ ದಿಂದ 5 ಕೋಟಿ ರು.ಗಳವರೆಗೆ ಶೇ.4 ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ಎಂದರು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಮತ್ತು ಆತಿಥ್ಯ ಸೇವಾ ಘಟಕಗಳಿಗೆ ಹಾಗೂ ನಿರ್ಮಾಣ/ ರಿಯಲ್ ಏಸ್ಟೇಟ್ ಚಟುವಟಿಕೆಗಳ ಘಟಕಗಳಿಗೆ ರು.10 ಲಕ್ಷದಿಂದ 10 ಕೋಟಿ ರು..ಗಳವರೆಗೆ ಶೇ.4 ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ. ಹಿಂದುಳಿದ ವರ್ಗಗಳ ಪ್ರವರ್ಗ-1 ಮತ್ತು ಪ್ರವರ್ಗ-2(ಎ) ಜಾತಿಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ 5 ಲಕ್ಷದಿಂದ 10 ಕೋಟಿ ರು..ಗಳವರೆಗೆ ಶೇ.5.5 ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ದೊರೆಯಲಿದೆ ಎಂದು ಅವರು ತಿಳಿಸಿದರು. ಅಲ್ಪಸಂಖ್ಯಾತ ಸಮುದಾಯಗಳ ಉದ್ಯಮಿಗಳಿಗೆ ಸೂಕ್ಷ್ಮ, ಸಣ್ಣ ಪ್ರಮಾಣದ ಕೈಗಾರಿಕಾ, ಆರೋಗ್ಯ ಹಾಗೂ ಆತಿಥ್ಯ ಸೇವಾ ಚಟುವಟಿಕೆಗಳ ಘಟಕಗಳಿಗೆ 5 ಲಕ್ಷದಿಂದ 10 ಕೋಟಿ ರು..ಗಳವರೆಗೆ ಶೇ.5.5 ರಷ್ಟು ಬಡ್ಡಿ ಸಹಾಯಧನ ಸಾಲ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ಅವರು ಕಾರ್ಯಾಗಾರದಲ್ಲಿ ವಿಶೇಷ ತರಬೇತಿ ನೀಡಿದರು. ಕುಶಾಲನಗರ ತಾಲೂಕು ಒಕ್ಕೂಟ ಆರ್.ಸಿ.ಕೂಡಿಗೆ ನಿರ್ದೇಶಕರಾದ ಕೆ.ಪ್ರಕಾಶ್ ಕುಮಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕರಾದ ಸಿ.ಎನ್.ರಘು ಅವರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳಿಗೆ ಗೌರ್‍ನರ್‌ ಅಪಮಾನ : ಸಿದ್ದರಾಮಯ್ಯಆಕ್ರೋಶ
ಪುಸ್ತಕಗಳಲ್ಲಿ ಬೆಂಗಳೂರು ನಗರಕ್ಕೆ ಬರೋಬ್ಬರಿ ₹38 ಕೋಟಿ ಡ್ರಗ್ಸ್‌ ಸಾಗಾಟ