ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಹೆಜ್ಜೆ ಹಾಕುವುದು ಕುಣಿತವಾದರೆ, ಅದಕ್ಕೆ ಕೌಶಲ ಬೆರೆತರೆ ನೃತ್ಯವಾಗುವುದು. ಹಾಗೆಯೇ ಕೈಯಲ್ಲಿ ಅರಳಿದ ಕಲೆಯೆ ಶ್ರೇಷ್ಠ ವಾಗಿದ್ದು, ಸಮಾಜಕ್ಕೆ ಮತ್ತು ಧರ್ಮಕ್ಕೆ ಆ ಕಲೆಯೆ ಸೇತುವೆ. ಹಿಂದೆ, ವೇದ ಉಪನಿಷತ್ತಿನ ಕಾಲದಲ್ಲಿದ್ದಂತೆ ಹುಡುಕಿ ಹುಡುಕಿ ಸ್ವಾಧ್ಯಾಯ ಅಧ್ಯಾಪನದ ಮೂಲಕ ಕಲೆಯ ಸುಜ್ಞಾನವನ್ನು ಅರಿತು ಪರಂಪರೆಯನ್ನು ಉನ್ನತೀಕರಿಸಬೇಕಾಗಿದೆ ಎಂದು ಹೇಳಿದರು. ಸಖರಾಯಪಟ್ಟಣ ಸಮೀಪದ ಹೊಸಹಳ್ಳಿಯ ಪಾರಂಪರಿಕ ಮೂರ್ತಿ ಶಿಲ್ಪಿಗಳಾದ ಮಹದೇವಪ್ಪ ಮತ್ತು ಮಲ್ಲಿಕಾರ್ಜುನ ಸಹೋದರರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು. ಗೌರವಾಧ್ಯಕ್ಷ ನಾಯಕ್ ಸಚ್ಚಿದಾನಂದ ಸನ್ಮಾನಿತರ ಜೊತೆ ಕಲೆಯ ಕುರಿತು ಸಂವಾದ ನಡೆಸಿದರು. ಪ್ರಮುಖರಾದ ದಿನೇಶ್ ಪಟೇಲರು ಅಧ್ಯಕ್ಷತೆ ವಹಿಸಿದ್ದರು. ಶಶಿರೇಖಾ ಪ್ರಾರ್ಥಿಸಿ, ಗಾಯಕಿ ರೇಖಾ ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಚಂದ್ರಮೌಳಿ, ವಿಶ್ವನಾಥ, ಪ್ರೇಮಕುಮಾರ್, ಗೋಪಾಲಕೃಷ್ಣ, ಸುಮಾ ಪ್ರಸಾದ್, ರಾಮಪ್ರಸಾದ್ ಹಾಗೂ ಹೊಸಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.15 ಕೆಸಿಕೆಎಂ 3ಸಖರಾಯಪಟ್ಟಣ ಸಮೀಪದ ಹೊಸಹಳ್ಳಿ ಪಾರಂಪರಿಕ ಮೂರ್ತಿ ಶಿಲ್ಪಿಗಳಾದ ಮಹದೇವಪ್ಪ ಮತ್ತು ಮಲ್ಲಿಕಾರ್ಜುನ ಸಹೋದರರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.