ಮಕ್ಕಳಿಗೆ ಸಂಪ್ರದಾಯ ಪರಿಚಯಿಸಬೇಕು

KannadaprabhaNewsNetwork |  
Published : Nov 30, 2024, 12:47 AM IST
28ಕೆಬಿಪಿಟಿ.2.ಬಂಗಾರಪೇಟೆ ತಾಲೂಕಿನ ಬೂದಿಕೋಟೆ  ಜ್ಯೋತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಮಗು ಊಟ ಮಾಡಿಲ್ಲ ಎಂದ ಮೊಬೈಲ್ ನೋಡಿಕೊಂಡು ಊಟ ಮಾಡು ಎಂದು ಮೊಬೈಲ್ ನೀಡುವ ಮೂಲಕ ಅದರ ಚಟಕ್ಕೆ ಬೀಳಲು ಪೋಷಕರೇ ಕಾರಣರಾಗುತ್ತಿದ್ದಾರೆ. ಮೊಬೈಲ್ ವ್ಯಾಮೋಹಕ್ಕೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಅನ್ನು ಮಕ್ಕಳಿಂದ ದೂರವಿಡಿ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಮಕ್ಕಳಿಗೆ ಶಾಲೆಯಲ್ಲಿ ಕೇವಲ ಪಠ್ಯಗಳನ್ನು ಭೋಧನೆ ಮಾಡಿದರೆ ಸಾಲದು, ಬದಲಾಗಿ ನಮ್ಮ ಆಚಾರ ವಿಚಾರ ಮತ್ತು ಸಂಪ್ರದಾಯಗಳನ್ನು ಸಹ ತಿಳಿಸುವುದು ಇಂದಿನ ಕಾಲಘಟ್ಟದಲ್ಲಿ ಅಗತ್ಯವಾಗಿದೆ ಎಂದು ಜ್ಯೋತಿ ಸಮೂಹ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಸತೀಶ್ ಕುಮಾರ್‌ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮದ ದಿ ಜ್ಯೋತಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಮತ್ತು ಮಕ್ಕಳ ಸಂತೆಯಲ್ಲಿ ಭಾಗವಹಿಸಿ ಮಾತನಾಡಿ, ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಒಳಗಾಗುವುದು ಸಾಮಾನ್ಯವಾಗಿದ್ದು, ಇದಕ್ಕೆ ಕಾರಣ ಎಂದರು.

ಮಕ್ಕಳಿಗೆ ಮೊಬೈಲ್‌ ಕೊಡಬೇಡಿ

ಮಗು ಊಟ ಮಾಡಿಲ್ಲ ಎಂದ ಮೊಬೈಲ್ ನೋಡಿಕೊಂಡು ಊಟ ಮಾಡು ಎಂದು ಮೊಬೈಲ್ ನೀಡುವ ಮೂಲಕ ಅದರ ಚಟಕ್ಕೆ ಬೀಳಲು ಪೋಷಕರೇ ಕಾರಣರಾಗುತ್ತಿದ್ದಾರೆ. ಮೊಬೈಲ್ ವ್ಯಾಮೋಹಕ್ಕೆ ಒಳಗಾದವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಮೊಬೈಲ್ ಅನ್ನು ಮಕ್ಕಳಿಂದ ದೂರವಿಡಲು ಪೋಷಕರು ಎಚ್ಚರವಹಿಸಬೇಕು ಎಂದರು. ಸಂತೆ ಮೂಲಕ ವ್ಯವಹಾರ ಜ್ಞಾನ

ಶಾಲಾ ಹಂತದಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಬೆಳೆಸಲು ಮಕ್ಕಳ ಸಂತೆಯನ್ನು ನಡೆಸಲಾಗುತ್ತಿದೆ. ಶಾಲೆಗೆ ಎಲ್ಲಾ ಸಮುದಾಯದ ಮಕ್ಕಳು ಬರುವುದರಿಂದ ಮಕ್ಕಳಿಗೆ ಎಲ್ಲಾ ಸಮುದಾಯಗಳ ಆಚಾರ ವಿವಾರಗಳನ್ನು ತಿಳಿಸುವ ಸಲುವಾಗಿ, ಮುಸಲ್ಮಾನರ ಹಬ್ಬಗಳಾದ ರಂಜಾನ್, ಬಕ್ರಿದ್, ಕ್ರೈಸ್ತರ ಹಬ್ಬವಾದ ಕ್ರಿಸ್ಮಸ್ ಹಿಂದೂಗಳ ಹಬ್ಬಗಳಾದ ಸಂಕ್ರಾಂತಿ, ನವರಾತ್ರಿ, ವರಮಹಾಲಕ್ಷ್ಮಿ ಹಬ್ಬ, ದೀಪಾವಳಿ, ಗಣೇಶ ಹಬ್ಬ ಇತ್ಯಾದಿಗಳನ್ನು ಆಚರಿಸಿ ಅದರ ಹಿನ್ನಲೆ ಬಗ್ಗೆ ತಿಳಿಸಲಾಗುತ್ತಿದೆ ಇದರಿಂದ ಎಲ್ಲ ಸಮುದಾಯದವರ ಮಕ್ಕಳಿಗೂ ೆಲ್ಲ ಹಬ್ಬಗಳ ಬಗ್ಗೆ ಗೊತ್ತಾಗುತ್ತದೆ ಎಂದರು.ಈ ಸಂದರ್ಭದಲ್ಲಿಗ್ರಾಪಂ ಅಧ್ಯಕ್ಷ ಮಂಜುನಾಥ್, ಜ್ಯೋತಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಸುಮಲತಾ, ಟ್ರಸ್ಟ್ ಸದಸ್ಯರಾದ ಕಲಾವತಿ, ಮುಖ್ಯ ಶಿಕ್ಷಕರಾದ ಶಶಿಕಲಾ, ಉಮೇರ ತಾಜ್, ಶಿಕ್ಷಕರಾದ ರೇಣುಕಾ, ಮಮತಾ, ಪಲ್ಲವಿ, ಮಂಜುಳಾ, ಮಂಜುಳಾದೇವಿ, ಗ್ರೇಸ್ ಜಾಯ್ಸ್, ಹುಸೇನಾ, ವೇದಾ, ಪೂಜಾ, ನೇತ್ರಾ, ವಿದ್ಯಾ, ಕನಕ, ಜಯಶ್ರೀ, ಸುರೇಖಾ, ಸತೀಶ್, ರೇವತಿ, ವಿಜಯಲಕ್ಷ್ಮಿ ಮುಂತಾದವರು ಹಾಜರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ