ಸಂಚಾರಿ ನಿಯಮ ಉಲ್ಲಂಘನೆ: ಆನ್‌ಲೈನ್‌ ಮೂಲಕ ದಂಡ ಪಾವತಿಸುವ ಪ್ರಕ್ರಿಯೆಗೆ ಚಾಲನೆ

KannadaprabhaNewsNetwork |  
Published : Feb 07, 2024, 01:45 AM IST
6ಕೆಎಂಎನ್ ಡಿ14ಸಂಚಾರಿ ನಿಯಮ ಉಲ್ಲಂಘಿಸಿದ ಚಾಲಕರ ಮೇಲೆ ದಂಡ ವಿಧಿಸುತ್ತಿರುವ ಪೊಲೀಸರು. | Kannada Prabha

ಸಾರಾಂಶ

ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವ ಚಾಲಕರು ಆನ್‌ಲೈನ್ ಮೂಲಕ ದಂಡಪಾವತಿಸುವ ಪ್ರಕ್ರಿಯೆಗೆ ಪಟ್ಟಣದ ಸಂಚಾರಿ ಠಾಣೆಯಲ್ಲಿ ಮಂಗಳವಾರದಿಂದ ಚಾಲನೆ ನೀಡಲಾಗಿದೆ. ಹೀಗಾಗಿ ವಾಹನ ಚಾಲಕರಗಳು ಜೇಬುಗಳಲ್ಲಿ ಹಣ ಇಲ್ಲ ಎಂದು ಸಬೂಬು ನೀಡಿ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಾಲನೆ ಮಾಡುವ ಚಾಲಕರು ಆನ್‌ಲೈನ್ ಮೂಲಕ ದಂಡಪಾವತಿಸುವ ಪ್ರಕ್ರಿಯೆಗೆ ಪಟ್ಟಣದ ಸಂಚಾರಿ ಠಾಣೆಯಲ್ಲಿ ಮಂಗಳವಾರದಿಂದ ಚಾಲನೆ ನೀಡಲಾಗಿದೆ.

ಹೀಗಾಗಿ ವಾಹನ ಚಾಲಕರಗಳು ಜೇಬುಗಳಲ್ಲಿ ಹಣ ಇಲ್ಲ ಎಂದು ಸಬೂಬು ನೀಡಿ ದಂಡದಿಂದ ತಪ್ಪಿಸಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಿದೆ.

ಅಪಘಾತ, ಮದ್ಯಪಾನ ಮಾಡಿ ವಾಹನ ಚಾಲನೆ ಹಾಗೂ ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಾಲನೆ ಮಾಡುವ ಪ್ರಕರಣಗಳನ್ನು ಹೊರತುಪಡಿಸಿ ಹೆಲ್ಮೆಟ್ ರಹಿತ, ಅತಿ ವೇಗ, ಸೀಟ್ ಬೆಲ್ಟ್ ಧರಿಸಿದೆ ವಾಹನ ಚಾಲನೆ ಮಾಡುವುದು ಹಾಗೂ ಸಿಗ್ನಲ್ ಜಂಪ್ ಸೇರಿದಂತೆ ಸಣ್ಣಪುಟ್ಟ ಸಂಚಾರಿ ನಿಯಮ ಉಲ್ಲಂಘಿಸುವ ಪ್ರಕರಣಗಳಲ್ಲಿ ವಾಹನ ಚಾಲಕರು ಸ್ಥಳದಲ್ಲಿಯೇ ನೇರವಾಗಿ ಯುಪಿಕ್ಯೂರ್ ಕೋಡ್ ಎಟಿಎಂ ಬಳಸಿ ಡಿಜಿಟಲ್ ಡಿವೈಜ ಯಂತ್ರದ ಮೂಲಕ ಆನ್ ಲೈನ್ ನಲ್ಲಿ ದಂಡಪಾವತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಚಾರಿ ಠಾಣೆ ಪಿಎಸ್ಐ ಜೆ.ಎಂ. ಮಹೇಶ್ ತಿಳಿಸಿದರು.

ಡಿಜಿಟಲ್ ಡಿವೈಜ ಯಂತ್ರದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ಚಾಲಕರು ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸುವ ವೇಳೆ ತಪಿತಸ್ಥರ ಧ್ವನಿ ಮತ್ತು ವಿಡಿಯೋ ಸಹ ಡಿಜಿಟಲ್ ಡಿವೈಜ ಯಂತ್ರದಲ್ಲಿ ದಾಖಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ದಂಡಮದ್ದೂರು:ಬೆಂಗಳೂರು-ಮೈಸೂರು ಹೆದ್ದಾರಿ ಹಾಗೂ ಪಟ್ಟಣ ವ್ಯಾಪ್ತಿಯಲ್ಲಿ ಅಡ್ಡಾ ದಿಡ್ಡಿಯಾಗಿ ವಾಹನ ಚಾಲನೆ ಮಾಡಿದ್ದ ಪ್ರಕರಣದಲ್ಲಿ ಆಟೋ ಮತ್ತು ದ್ವಿಚಕ್ರ ವಾಹನ ಚಾಲಕರಿಗೆ ಪಟ್ಟಣದ ಜೆಎಂಎಫ್‌ಸಿ ಪ್ರಧಾನ ಸಿವಿಲ್ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿದೆ.ಹೆದ್ದಾರಿಯ ಕೊಲ್ಲಿ ಸರ್ಕಲ್ ಮತ್ತು ಪೇಟೆ ಬೀದಿಯಲ್ಲಿ ಮದ್ಯಪಾನ ಮಾಡಿ ಅತಿ ವೇಗದಿಂದ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಮೂರು ಆಟೋ ಚಾಲಕರು ಹಾಗೂ ಒಂದು ದ್ವಿಚಕ್ರ ವಾಹನ ಚಾಲಕರ ವಿರುದ್ಧ ಸಂಚಾರಿ ಠಾಣೆ ಪಿಎಸ್ಐ ಜೆ.ಎಂ. ಮಹೇಶ್ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಎಫ್ಐಆರ್ ಸಲ್ಲಿಸಿದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ಪ್ರಿಯಾಂಕ ಅವರು ಆಟೋ ಚಾಲಕರು ಹಾಗೂ ಬೈಕ್ ಚಾಲಕರಿಗೆ ತಲಾ 10 ಸಾವಿರ ರು. ನಂತೆ ಒಟ್ಟು 40 ಸಾವಿರ ರು. ದೊಡ್ಡ ವಿದಿಸಿ ಆದೇಶ ಹೊರಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ