ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಪಟ್ಟಣದಿಂದ ನಿತ್ಯ ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ರೈಲುಗಳು ಮೆಜೆಸ್ಟಿಕ್‌ವರೆಗೂ ಹೋಗದೆ ಕೆಆರ್‌ಪುರಂ ವರೆಗೆ ಮಾತ್ರ ಹೋಗುವುದರಿಂದ ಪ್ರಯಾಣಿಕರಿಗೆ ಹಾಗೂ ಉದ್ಯೋಗಿಗಳಿಗೆ ಅನನುಕೂಲವಾಗಿದ್ದು ಕೂಡಲೇ ಸಂಸದರು ಈ ಬಗ್ಗೆ ಗಮನಹರಿಸಿ ಅನುಕೂಲ ಮಾಡಿಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.ಪಟ್ಟಣದಿಂದ ಈ ಹಿಂದೆ ಎಲ್ಲ ರೈಲುಗಳು ಮೆಜೆಸ್ಟಿಕ್‌ವರೆಗೂ ಹೋಗುತ್ತಿದ್ದವು. ಇದರಿಂದ ಎಲ್ಲ ವರ್ಗದ ಜನರಿಗೆ ಅನುಕೂಲವಾಗುತ್ತಿತ್ತು, ಆದರೆ ಇತ್ತೀಚಿಗೆ ಕೆಲ ರೈಲುಗಳನ್ನು ವೈಟ್‌ಪೀಲ್ಡ್, ಕೆಆರ್‌ಪುರಂ ವರೆಗೆ ಮಾತ್ರ ಸಂಚರಿಸುತ್ತಿವೆ.ದುಬಾರಿ ಮೆಟ್ರೋ ಬಳಸಬೇಕು
ಇದರಿಂದ ಪ್ರಯಾಣಿಕರು ಕೆಆರ್ ಪುರಂನಲ್ಲಿ ಇಳಿದು ಮತ್ತೆ ದುಬಾರಿ ದರ ತೆತ್ತು ಮೆಟ್ರೋ ರೈಲಿನ ಮೂಲಕ ಹೋಗುವಂತಾಗಿದೆ. ಮುಂಜಾನೆ ೪ ರಿಂದಲೇ ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುವ ಸುಮಾರು ೨೦ ಸಾವಿರಕ್ಕೂ ಹೆಚ್ಚಿನ ಜನರಿಗೆ ಬೆಳಗ್ಗೆ ೮ ಗಂಟೆಗೆ ಮಾರಿಕುಪ್ಪಂನಿಂದ ಬರುವ ರೈಲು ಮಾತ್ರ ಮೆಜೆಸ್ಟಿಕ್‌ವರೆಗೆ ಹೋಗುತ್ತದೆ ನಂತರ ಮಧ್ಯಾಹ್ನದವರೆಗೂ ಯಾವುದೇ ರೈಲುಗಳು ಹೋಗದೆ ತೊಂದರೆಯಾಗಿದೆ.ಬೆಳಗ್ಗೆ ೮ಗಂಟೆ ಬಿಟ್ಟರೆ ೧೨ ಗಂಟೆವರೆಗೂ ಯಾವುದೇ ರೈಲುಗಳ ಸೌಲಭ್ಯಗಳಿಲ್ಲದೆ ಇರುವ ರೈಲುಗಳು ಕೆಆರ್‌ಪುಂವರೆಗ ಮಾತ್ರ ಹೋಗುವ ಮೂಲಕ ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ, ಈ ಹಿಂದೆ ಕಾಕಿನಾಡ ರೈಲು ಮೆಜೆಸ್ಟಿಕ್‌ವರೆಗೂ ಹೋಗುತ್ತಿತ್ತು, ಈಗ ಅದನ್ನೂ ಎಸ್‌ಎಂವಿಟಿಗೆ ಡೈವರ್ಟ್ ಮಾಡಲಾಗಿದೆ. ೧೨.೩೦ಕ್ಕೆ ಇದ್ದ ರೈಲನ್ನು ವೈಟ್‌ಪೀಲ್ಡ್‌ಗೆ ಮಾತ್ರ ಸಂಚರಿಸುತ್ತಿದೆ.ಹೆಸರಿಗೆ ಮಾತ್ರ ಬಂಗಾರಪೇಟೆ ಜಂಕ್ಷನ್ ಹಾಗೂ ಬೆಂಗಳೂರು ಬಿಟ್ಟರೆ ಹೆಚ್ಚು ರೈಲ್ವೆ ಇಲಾಖೆಗೆ ಆದಾಯ ಬರುವ ನಿಲ್ದಾಣವೂ ಆಗಿದೆ, ಆದರೆ ಜಂಕ್ಷನ್‌ನಿಂದ ಯಾವುದೇ ರೈಲುಗಳು ಬೆಂಗಳೂರಿಗೆ ನೇರ ಸಂಪರ್ಕವಿಲ್ಲ ಎಂಬುದು ಪ್ರಯಾಣಿಕರ ದೂರು. ಕೊಯಮತ್ತೂರುನಿಂದ ಬರುವ ಉದಯ್ ಎಕ್ಸಪ್ರೆಸ್ ರೈಲನ್ನು ಪಕ್ಕದ ಆಂಧ್ರದ ಕುಪ್ಪಂನಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ, ಆದರೆ ಜಂಕ್ಷನ್ ಆದ ಬಂಗಾರಪೇಟೆ ಪಟ್ಟಣದಲ್ಲಿ ನಿಲುಗಡೆಗೆ ಅವಕಾಶ ನೀಡಿಲ್ಲ ಎಂಬುದು ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಈ ಹಿಂದೆ ರೈಲ್ವೆ ಸಚಿವರಾಗಿದ್ದ ಕೆ.ಹೆಚ್.ಮುಮಿಯಪ್ಪ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಬಡವರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಸಂಚರಿಸುವರೆಂದು ಅವರಿಗೆ ಅನುಕೂಲವಾಗಲೆಂದು ಅಗ್ಗದ ಬೆಲೆಗೆ ಈಜ್ಜತ್ ಪಾಸ್ ಪರಿಚಯಿಸಿದ್ದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಬಂದ ನಂತರ ಈಜ್ಜತ್ ಪಾಸ್ ರದ್ದುಪಡಿಸಲಾಗಿದೆ.ಸಂಸದ ಎಂ.ಮಲ್ಲೇಶಬಾಬು ರೈಲ್ವೆ ರಾಜ್ಯ ಸಚಿವ ಸೋಮಣ್ಣ ಬಳಿ ಚರ್ಚಿಸಿ ಎಂದಿನಂತೆ ಮತ್ತೆ ಕಡಿತವಾಗಿರುವ ರೈಲುಗಳನ್ನು ಪಟ್ಟಣದಿಂದ ಬೆಂಗಳೂರಿನ ಮೆಜೆಸ್ಟಿಕ್ ವರೆಗೂ ಸಂಪರ್ಕಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.