ಜ. 17ರಿಂದ ಏಪ್ರಿಲ್ 16ರ ವರೆಗೆ ಕ್ಯಾಸಲ್ ರಾಕ್- ಕುಲೆಮ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಹಿನ್ನಲೆ ಕೆಲ ರೈಲುಗಳನ್ನು ಭಾಗಶಃ ರದ್ದು ಮತ್ತು ಬೇರೆ ಮಾರ್ಗದ ಮೂಲಕ ಚಲಿಸಲಿವೆ.
ಹುಬ್ಬಳ್ಳಿ:
ಜ. 17ರಿಂದ ಏಪ್ರಿಲ್ 16ರ ವರೆಗೆ ಕ್ಯಾಸಲ್ ರಾಕ್- ಕುಲೆಮ್ ಭಾಗದಲ್ಲಿ ಹಳಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಹಿನ್ನಲೆ ಕೆಲ ರೈಲುಗಳನ್ನು ಭಾಗಶಃ ರದ್ದು ಮತ್ತು ಬೇರೆ ಮಾರ್ಗದ ಮೂಲಕ ಚಲಿಸಲಿವೆ.
ಜ. 16ರಿಂದ ಏ. 15ರ ವರೆಗೆ ಶಾಲಿಮಾರ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 18047 ಶಾಲಿಮಾರ್-ವಾಸ್ಕೋ ಡ ಗಾಮಾ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದ ವರೆಗೂ ಮಾತ್ರ ಸಂಚರಿಸಲಿದೆ. ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವಿನ ಸಂಚಾರ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 18048 ವಾಸ್ಕೋ ಡ ಗಾಮಾ-ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಜ. 19ರಿಂದ ಏ. 18ರ ವರೆಗೆ ವಾಸ್ಕೋ ಡ ಗಾಮಾ ನಿಲ್ದಾಣದ ಬದಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡಲಿದ್ದು, ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಂಡಿದೆ.
ಜ. 16,23,30, ಫೆ. 6,13,20,27, ಮಾ. 6,13,20,27 ಮತ್ತು ಏ. 3,10 ರಂದು ಹೊರಡುವ ರೈಲು ಸಂಖ್ಯೆ 17419/1 7021 ತಿರುಪತಿ ಹೈದರಾಬಾದ್- ವಾಸ್ಕೋ ಡ ಗಾಮಾ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳುತ್ತದೆ.
ರೈಲು ಸಂಖ್ಯೆ 17420/17022 ವಾಸ್ಕೋ ಡ ಗಾಮಾ- ತಿರುಪತಿ ಹೈದರಾಬಾದ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಜ. 17, 24, 31, ಫೆ. 7, 14, 21, 28, ಮಾ. 7,14,21,28 ಮತ್ತು ಏ. 4,11ರಂದು ವಾಸ್ಕೋ ಡ ಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಎಸ್ಎಸ್ಎಸ್ ಹುಬ್ಬಳ್ಳಿಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ಜ. 17ರಿಂದ ಏ. 16ರ ವರೆಗೆ ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17039 ಸಿಕಂದರಾಬಾದ್- ವಾಸ್ಕೋ ಡ ಗಾಮಾ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ವಾಸ್ಕೋ ಡ ಗಾಮಾ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.
ರೈಲು ಸಂಖ್ಯೆ 17040 ವಾಸ್ಕೋ ಡ ಗಾಮಾ-ಸಿಕಂದರಾಬಾದ್ ದ್ವಿ-ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಜ. 18ರಿಂದ ಏ. 17ರ ವರೆಗೆ ವಾಸ್ಕೋಡಗಾಮಾ ನಿಲ್ದಾಣದ ಬದಲಿಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಹೊರಡುತ್ತದೆ, ವಾಸ್ಕೋಡಗಾಮಾ ಮತ್ತು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.